ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ‘ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು’ ವಿನೂತನ ಕಾರ್ಯಕ್ರಮ ಸರಣಿಯಡಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ವಿಶೇಷ ಪ್ರಯತ್ನ ಸತತ 120ನೇ ತಿಂಗಳ ಕಾರ್ಯಕ್ರಮವು ದಿನಾಂಕ 21 ಜೂನ್ 2026ರಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಜರುಗಿತು.
ದೇವಕಿ ಸುರೇಶ್ ಪ್ರಭು ಪ್ರಾರ್ಥಿಸಿದರು. ನಿವೃತ್ತ ಅಧ್ಯಾಪಕ ಸದಾಶಿವ ಐತಾಳ್, ನಿವೃತ್ತ ಪ್ರಾಧ್ಯಾಪಕ ಎಮ್. ರತ್ನಾಕರ ಪೈ, ಶಂಕರ ನಾಗಪ್ಪ ಬಿಲ್ಲವ, ಭಾಗವತ ಸುಬ್ರಹ್ಮಣ್ಯ ನಾವುಡ, ಶಿಕ್ಷಕಿ ಸೌಜನ್ಯ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಅರ್ಥಧಾರಿ ಹೆಚ್. ಶಂಕರ ನಾಗಪ್ಪ ಬಿಲ್ಲವ ಹೆಮ್ಮಾಡಿ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉಪ್ಪಿನಕುದ್ರು ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಚಂದನ್ ರವರನ್ನು ಅಕಾಡೆಮಿಯ ವತಿಯಿಂದ ಸಮ್ಮಾನಿಸಲಾಯಿತು. ಕೊನೆಗೆ ಶಂಕರ ನಾಗಪ್ಪ ಬಿಲ್ಲವರಿಂದ ಯಕ್ಷಗಾನ, ಜಾನಪದ ಏಕಪಾತ್ರಾಭಿನಯ ನಡೆಯಿತು. ಪಾರ್ವತಿಯವರಿಂದ ನಡೆದ ಸಂಗೀತ ಮನಸ್ಸಿಗೆ ಮುದ ನೀಡಿತು. ನಿವೃತ್ತ ಶಿಕ್ಷಕ ಉದಯ ಭಂಡಾರ್‌ಕಾರ್ ಹಟ್ಟಿಯಂಗಡಿ ಇವರು ಕಾರ್ಯಕ್ರಮ ನಿರೂಪಿಸಿದರು.
