ಮಂಗಳೂರು : ಯಕ್ಷಭವನ ಟ್ರಸ್ಟ್ ಆಕಾಶಭವನ ಇವರ ಸಂಯೋಜನೆಯಲ್ಲಿ ‘ಯಕ್ಷ ಮುಂಗಾರು’ ಕಾರ್ಯಕ್ರಮವನ್ನು ದಿನಾಂಕ 03 ಜುಲೈ 2026ರಂದು ಮಧ್ಯಾಹ್ನ 3-00 ಗಂಟೆಗೆ ಮಂಗಳೂರಿನ ಉರ್ವ ಸ್ಟೋರ್ ಮಹಾಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಗಾನ ಸಾಮ್ರಾಟ್ ವಿಜಿತ್ ಶೆಟ್ಟಿ ಆಕಾಶಭವನ ಇವರ ನಿರ್ದೇಶನದಲ್ಲಿ ಯಕ್ಷಭವನ ಕಲಾಕೇಂದ್ರದ ಮಹಿಳಾ ಕಲಾವಿದರಿಂದ ‘ಶಿವಭಕ್ತ ವೀರಮಣಿ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.

