Subscribe to Updates

    Get the latest creative news from FooBar about art, design and business.

    What's Hot

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ತಲಪಾಡಿಯಲ್ಲಿ ಧರ್ಮ ಶಿಕ್ಷಣ – ಜ್ಞಾನ ಯಜ್ಞ ಪೂರ್ಣ ಹಗಲಿನ ಯಕ್ಷಗಾನ ತಾಳಮದ್ದಳೆ
    Yakshagana

    ತಲಪಾಡಿಯಲ್ಲಿ ಧರ್ಮ ಶಿಕ್ಷಣ – ಜ್ಞಾನ ಯಜ್ಞ ಪೂರ್ಣ ಹಗಲಿನ ಯಕ್ಷಗಾನ ತಾಳಮದ್ದಳೆ

    March 19, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ಧರ್ಮ ಶಿಕ್ಷಣ ಜ್ಞಾನ ಯಜ್ಞ ಸಲುವಾಗಿ ಶ್ರೀದೇವಿ ಸನ್ನಿಧಿಯಲ್ಲಿ ಪೂರ್ಣ ಹಗಲಿನ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 17 ಮಾರ್ಚ್ 2026ರಂದು ಜರಗಿತು. ಬೆಳಿಗ್ಗೆ 9-00 ಗಂಟೆಯಿಂದ ಸಾಯಂಕಾಲ 7-00ರವರೆಗೆ ಸತತ 10 ಗಂಟೆ ನಡೆದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಹವ್ಯಾಸಿ ಕಲಾವಿದರು ಭಾಗವಹಿಸಿದರು. ಯಕ್ಷಧ್ರುವ ಹವ್ಯಾಸಿ ಘಟಕವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

    ಬೆಳಿಗ್ಗೆ ಉದ್ಘಾಟನಾ ಸಮಾರಂಭದಲ್ಲಿ ದೇವಳದ ಆಡಳಿತ ಸಮಿತಿ ಹಿರಿಯ ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಜೆಯ ಸಮಾರೋಪ ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಭಾಗವತ ಸತೀಶ್ ಶೆಟ್ಟಿ ಪಟ್ಲ ಇವರನ್ನು ಗೌರವಿಸಲಾಯಿತು‌. ಹವ್ಯಾಸಿ ಘಟಕದ ಅಧ್ಯಕ್ಷ ರಾಜಾರಾಮ ಹೊಳ್ಳ ಕೈರಂಗಳ ಸ್ವಾಗತಿಸಿ, ಸಂಚಾಲಕ ಸದಾಶಿವ ಆಳ್ವ ತಲಪಾಡಿ ಕಾರ್ಯಕ್ರಮ ನಿರೂಪಿಸಿ, ಗಣೇಶ ಕುಂಜತ್ತೂರು ವಂದಿಸಿದರು.

    ದಿನವಿಡೀ ನಡೆದ ತಾಳಮದ್ದಳೆ ಜ್ಞಾನ ಯಜ್ಞದಲ್ಲಿ ಜನಪ್ರಿಯ ನಾಲ್ಕು ಪೌರಾಣಿಕ ಪ್ರಸಂಗಗಳನ್ನು ಆಯ್ದುಕೊಳ್ಳಲಾಗಿತ್ತು. ವಿಭೀಷಣನೀತಿ, ಅಂಗದ ಸಂಧಾನ, ಶಲ್ಯ ಸಾರಥ್ಯ ಮತ್ತು ಕರ್ಣ ಪರ್ವ. ಯಕ್ಷಗಾನ ವೃತ್ತಿಮೇಳಗಳಲ್ಲಿ ಪ್ರಸ್ತುತ ಖಾಯಂ ಕಲಾವಿದರಲ್ಲದ ಹೆಸರಾಂತ ಹವ್ಯಾಸಿಗಳು ಇದರಲ್ಲಿ ಪಾಲ್ಗೊಂಡರು.

    ತಾಳಮದ್ದಳೆ ರಂಗದಲ್ಲಿ ಖ್ಯಾತನಾಮರಾದ ಸರ್ಪಂಗಳ ಈಶ್ವರ ಭಟ್, ಭಾಸ್ಕರ ರೈ ಕುಕ್ಕುವಳ್ಳಿ, ಸದಾಶಿವ ಆಳ್ವ ತಲಪಾಡಿ, ಹರೀಶ ಭಟ್ ಬಳಂತಿ ಮೊಗರು, ವಿನಯ ಆಚಾರ್ಯ ಹೊಸಬೆಟ್ಟು, ಗಣೇಶ ಕಾವ ತಲ್ಲಂಗಡಿ, ದಿವಾಕರ ಆಚಾರ್ಯ ಗೇರುಕಟ್ಟೆ, ರಾಜಾರಾಮ ರಾವ್ ಮೀಯಪದವು, ಗಣೇಶ ಕುಂಜತ್ತೂರು, ಆನಂದ ಸೌಕುರ್ಡೇಲು, ವಿದ್ಯಾಧರ ಶೆಟ್ಟಿ, ವಿಜಯಶಂಕರ ಆಳ್ವ, ಬಾಲಕೃಷ್ಣ ಶೆಟ್ಟಿ, ದೀವಿತ್ ಎಸ್‌.ಕೆ. ಪೆರಾಡಿ, ದಯಾನಂದ ಪಿಲಿಕೂರು, ಹರಿಶ್ಚಂದ್ರ ನಾಯ್ಗ ಮಾಡೂರು, ನಾಗೇಶ್ ಆಚಾರ್ಯ ಕೈರಂಗಳ ಮತ್ತು ರಾಧಾ ಆರ್.ಹೊಳ್ಳ ವಿವಿಧ ಪ್ರಸಂಗಗಳಲ್ಲಿ ಅರ್ಥಧಾರಿಗಳಾಗಿದ್ದರು.

    ಭಾಗವತರುಗಳಾದ ರಾಜಾರಾಮ ಹೊಳ್ಳ ಕೈರಂಗಳ, ದೇವಿಪ್ರಸಾದ್ ಆಳ್ವ ತಲಪಾಡಿ, ರತ್ನಾಕರ ಆಳ್ವ ತಲಪಾಡಿ, ಶಶಿಧರ್ ರಾವ್ ಸುರತ್ಕಲ್, ಲಕ್ಷ್ಮೀನಾರಾಯಣ ಹೊಳ್ಳ, ದಯಾನಂದ ಪಾವೂರು, ಮನೋಹರ ಪ್ರಭು ಶರವು ಹಾಡುಗಾರಿಕೆಯಲ್ಲಿ ಪಾಲ್ಗೊಂಡರು. ಕೋಳ್ಯೂರು ಭಾಸ್ಕರ, ಪೆರ್ಲ ಗಣಪತಿ ಭಟ್, ರಾಮ ಹೊಳ್ಳ ಸುರತ್ಕಲ್, ವೇದವ್ಯಾಸ ರಾವ್ ಕುತ್ತೆತ್ತೂರು, ಮಯೂರ್ ನಾಯ್ಗ ಮಾಡೂರು, ಗಣೇಶ ಮಯ್ಯ ವರ್ಕಾಡಿ, ರಘುರಾಮ ಮಯ್ಯ, ರಾಘವೇಂದ್ರ ರಾವ್ ಮಂಜನಾಡಿ ಚೆಂಡೆ – ಮದ್ದಲೆಗಳಲ್ಲಿ ಸಹಕಾರ ನೀಡಿದರು. ತೊಕ್ಕೊಟ್ಟಿನ ಪೊಸಕುರಲ್ ಬಳಗ ಸಂಪೂರ್ಣ ತಾಳಮದ್ದಳೆಯನ್ನು ದಾಖಲಿಸಿ ಆಸಕ್ತರಿಗೆ ಅಂತರ್ಜಾಲ ಮೂಲಕ ವೀಕ್ಷಿಸುವ ಅವಕಾಶ ಮಾಡಿಕೊಟ್ಟರು.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಮರಕಡದ ಶುಭವರ್ಣ ಯಕ್ಷ ಸಂಪದ ಇದರ ಆಶ್ರಯದಲ್ಲಿ ‘ಶುಭವರ್ಣ ಪುಸ್ತಕ ಮನೆ’ ಆರಂಭ
    Next Article ಮೈಸೂರಿನ ರಂಗಾಯಣದಲ್ಲಿ ‘ನೆನಪಿನಂಗಳ’ ಸಂವಾದ ಕಾರ್ಯಕ್ರಮ | ಮಾರ್ಚ್ 21
    roovari

    Add Comment Cancel Reply


    Related Posts

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026

    ಪುಸ್ತಕ ವಿಮರ್ಶೆ | ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ‘ಕೃತಿ ಸಂಕೀರ್ಣ’

    May 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.