Subscribe to Updates

    Get the latest creative news from FooBar about art, design and business.

    What's Hot

    ಧಾರವಾಡದ ರಂಗಾಯಣ ಸಭಾ ಭವನದಲ್ಲಿ ‘ಜಾನಪದ ನೃತ್ಯ ಕಲಾಮೇಳ’ | ಮೇ 16

    May 15, 2026

    ಸಂಗೀತ ಪರಿಷತ್ ವತಿಯಿಂದ ಅಮೃತ ಭವನದಲ್ಲಿ ಸಂಗೀತ ಕಛೇರಿ | ಮೇ 17

    May 15, 2026

    ಉದ್ಘಾಟನೆಗೊಂಡ ‘ಬಾಲ ಲೀಲಾ -2026’ ಚಿಣ್ಣರ ಬೇಸಿಗೆ ಶಿಬಿರ

    May 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಯಕ್ಷಾಂಗಣ ತಾಳಮದ್ದಳೆ ಸಪ್ತಾಹದ ಪೋಸ್ಟರ್ ಬಿಡುಗಡೆ
    Yakshagana

    ಯಕ್ಷಾಂಗಣ ತಾಳಮದ್ದಳೆ ಸಪ್ತಾಹದ ಪೋಸ್ಟರ್ ಬಿಡುಗಡೆ

    November 12, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ದಿನಾಂಕ 23 ನವೆಂಬರ್ 2025ರಿಂದ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ನಡೆಸುವ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ – 2025’ ಹದಿಮೂರನೇ ವರ್ಷದ ನುಡಿಹಬ್ಬ ಕಾರ್ಯಕ್ರಮದ ವರ್ಣರಂಜಿತ ಪೋಸ್ಟರನ್ನು ದಿನಾಂಕ 11 ನವೆಂಬರ್ 2025ರಂದು ಬಿಡುಗಡೆಗೊಳಿಸಲಾಯಿತು.

    ಯಕ್ಷಾಂಗಣದ ಗೌರವಾಧ್ಯಕ್ಷ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ಎ.ಜೆ. ಶೆಟ್ಟಿಯವರು ಪೋಸ್ಟರ್ ಬಿಡುಗಡೆಗೊಳಿಸಿ, “ಕಳೆದ ಹನ್ನೆರಡು ವರ್ಷಗಳಿಂದ ವಿಶೇಷವಾಗಿ ನವೆಂಬರ್ ತಿಂಗಳಲ್ಲಿ ನುಡಿ ಹಬ್ಬ ರೂಪದಲ್ಲಿ ನಡೆಸುವ ಯಕ್ಷಾಂಗಣದ ಸಪ್ತಾಹ ಯಶಸ್ವಿಯಾಗುವಲ್ಲಿ ಕಾರ್ಯಕರ್ತರ ಪಾತ್ರ ಬಹಳ ದೊಡ್ಡದು” ಎಂದವರು ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಿದರು.

    ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮದ ರೂಪು ರೇಷೆಗಳ ವಿವರ ನೀಡಿದರು. ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಂಚಾಲಕಿ ನಿವೇದಿತಾ ಎನ್. ಶೆಟ್ಟಿ ಹಾಗೂ ಕಾರ್ಯದರ್ಶಿಗಳಾದ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ಸುಮಾ ಪ್ರಸಾದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಯಕ್ಷಾಂಗಣದ ಪದಾಧಿಕಾರಿಗಳು ಕಾರ್ಯಕ್ರಮ ನಿಮಿತ್ತ ಮಂಗಳೂರಿನ ಶರವು ಶ್ರೀ ಶರಭೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿಯಿತ್ತು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಶಿಲೆ ಶಿಲೆ ಆಡಳಿತ ಮೊಕ್ತೇಸರ ಶರವು ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಕೋಟ ಕಾರಂತ ಥೀಂ ಪಾರ್ಕಿನಲ್ಲಿ ‘ಬೆಳ್ಳಂಬೆಳಗೆ ಕವಿಗೋಷ್ಠಿ’
    Next Article ಕವಿಗೋಷ್ಠಿ, ಗೀತಗಾಯನ ಮತ್ತು ಕೃತಿ ಲೋಕಾರ್ಪಣೆ ಕಾರ್ಯಕ್ರಮ | ನವೆಂಬರ್ 23
    roovari

    Add Comment Cancel Reply


    Related Posts

    ಧಾರವಾಡದ ರಂಗಾಯಣ ಸಭಾ ಭವನದಲ್ಲಿ ‘ಜಾನಪದ ನೃತ್ಯ ಕಲಾಮೇಳ’ | ಮೇ 16

    May 15, 2026

    ಸಂಗೀತ ಪರಿಷತ್ ವತಿಯಿಂದ ಅಮೃತ ಭವನದಲ್ಲಿ ಸಂಗೀತ ಕಛೇರಿ | ಮೇ 17

    May 15, 2026

    ಉದ್ಘಾಟನೆಗೊಂಡ ‘ಬಾಲ ಲೀಲಾ -2026’ ಚಿಣ್ಣರ ಬೇಸಿಗೆ ಶಿಬಿರ

    May 15, 2026

    ‘ಮುಖವರ್ಣಿಕೆ – ವೇಷಭೂಷಣ ಶಿಬಿರ’ದ ಸಮಾರೋಪ ಸಮಾರಂಭ

    May 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.