ಉಡುಪಿ : ಯಕ್ಷಗಾನ ಕಲಾರಂಗ (ರಿ.) ಉಡುಪಿ ಮತ್ತು ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇದರ ವತಿಯಿಂದ ಭೀಮ ಗೋಲ್ಡ್ ಪ್ರೈ.ಲಿ. ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ ಭೀಮ ‘ಯಕ್ಷಶಿಕ್ಷಣ ಸನಿವಾಸ ಶಿಬಿರ -2026’ವನ್ನು ದಿನಾಂಕ 08ರಿಂದ 14 ಏಪ್ರಿಲ್ 2026ರವರೆಗೆ ಉಡುಪಿಯ ಯಕ್ಷಗಾನ ಕಲಾರಂಗ ಐ.ವೈ.ಸಿ. ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ದಿನಾಂಕ 08 ಏಪ್ರಿಲ್ 2026ರಂದು ಪೂರ್ವಾಹ್ನ 10-00 ಗಂಟೆಗೆ ಕೋಟ ಮಣೂರು ಗೀತಾನಂದ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಆನಂದ ಸಿ. ಕುಂದರ್ ಇವರು ಈ ಶಿಬಿರದ ಉದ್ಘಾಟನೆ ಮಾಡಲಿದ್ದು, ಮಾನ್ಯ ಶಾಸಕರಾದ ಯಶ್ ಪಾಲ್ ಎ. ಸುವರ್ಣ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಗುರು ಬನ್ನಂಜೆ ಸಂಜೀವ ಸುವರ್ಣ ಇವರು ನಿರ್ದೇಶಕರಾಗಿದ್ದು, ಗುರುಗಳಾಗಿ ನರಸಿಂಹ ತುಂಗ, ಶ್ರೀಧರ ಹೆಗಡೆ, ಮನೋಜ್, ಕುಮಾರಿ ಆದ್ಯತಾ ಭಟ್, ಶಿಶಿರ, ಪ್ರಶಾಂತ, ಶ್ರುತಿ, ಪಲ್ಲವಿ ಕೊಡಗು ಹಾಗೂ ನಾರಾಯಣ ಎಂ. ಹೆಗಡೆ, ನಿರಂಜನ್ ಭಟ್ ಮತ್ತು ಗಣೇಶ್ ಬ್ರಹ್ಮಾವರ ಇವರು ಸಂಯೋಜಕರಾಗಿ ಈ ಶಿಬಿರ ನಡೆಸಿಕೊಡಲಿದ್ದಾರೆ. ಉಡುಪಿ, ಕಾಪು, ಕುಂದಾಪುರ, ಬೈಂದೂರು ವಿಧಾನಸಭಾ ಯಕ್ಷಶಿಕ್ಷಣಕ್ಕೆ ಒಳಪಟ್ಟ 94 ಪ್ರೌಢ ಶಾಲೆಗಳ 100 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಲಿದ್ದು, ಮಿಥುನ್ ನಾಯಕ್ ಬ್ರಹ್ಮಾವರ ಮತ್ತು ಪವನ್ ಕಿರಣ್ ಕೆರೆ ಉಡುಪಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

