ವರಕವಿ ಅಂಬಿಕಾತನಯದತ್ತ (ದ.ರಾ. ಬೇಂದ್ರೆ) ಇವರ 130ನೆಯ ಜನ್ಮದಿನದಂದು ಸಾಧನಕೇರಿಯ ಬೇಂದ್ರೆಯವರ ಮನೆಯ ಅಂಗಳದಲ್ಲಿ ಅಂಬಿಕಾತನಯದತ್ತ ವೇದಿಕೆ ಅಡಿಯಲ್ಲಿ ದಿನಾಂಕ 31 ಜನವರಿ 2026ರಂದು ಬೆಳಿಗ್ಗೆ 8-30 ಗಂಟೆಗೆ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಶ್ರೀಮತಿ ಪುನರ್ವಸು ಬೇಂದ್ರೆಯವರ ಸಹಕಾರದೊಂದಿಗೆ ‘ಇದು ಬರಿ ಬೆಳಗಲ್ಲೋ ಅಣ್ಣಾ’ ಶಿರೋನಾಮೆಯಡಿಯಲ್ಲಿ ಬೇಂದ್ರೆ ಕಾವ್ಯ ವಾಚನ – ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕವಿ ನರಸಿಂಹ ಪರಾಂಜಪೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶ್ರೀಮತಿ ಪುನರ್ವಸು ಬೇಂದ್ರೆಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಿರಿಯ ಸಾಹಿತಿ ಹರ್ಷ ಡಂಬಳ ಇವರು ಅಧ್ಯಕ್ಷತೆ ವಹಿಸಲಿದ್ದು, ಡಾ. ಕೃಷ್ಣ ಕಟ್ಟಿಯವರ ಪ್ರಸ್ತಾವಿಕ ನುಡಿಗಳನ್ನಾಡಲಿದ್ದಾರೆ. ನಂತರ ಶ್ರೀ ಎ.ಎ. ದರ್ಗಾ, ಡಾ. ಬಾಳಣ್ಣ ಶೀಗೀಹಳ್ಳಿ, ಡಾ. ಎಸ್.ಎಮ್. ಶಿವಪ್ರಸಾದ, ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಡಾ. ಎಸ್.ಆರ್. ಹೆಬ್ಬಾಳ, ಶ್ರೀ ಈರೇಶ ಅಂಚಟಗೇರಿ, ಡಾ. ಶಶಿಧರ ನರೇಂದ್ರ, ಶ್ರೀಮತಿ ಶ್ರೀದೇವಿ ಜೋಶಿ, ಶ್ರೀ ಮಹಾದೇವ ಹಡಪದ, ಡಾ. ಬಸವರಾಜ ಡೋಣೂರ, ಶ್ರೀಮತಿ ವರ್ಷಾ ಮಾಡಲಗಿ, ಶ್ರೀ ರಾಜಕುಮಾರ ಮಡಿವಾಳರ, ಡಾ. ಅನುರಾಧಾ ಕಟ್ಟಿ, ಶ್ರೀಮತಿ ಮೇಘನಾ ಜಹಗೀರದಾರ, ಶ್ರೀಮತಿ ರಾಧಿಕಾ ಕಾಖಂಡಿಕಿ ಮತ್ತು ಶ್ರೀಮತಿ ಮಾಯಾ ಚಿಕ್ಕೇರೂರ ಇವರು ಬೇಂದ್ರೆಯವರ ಕಾವ್ಯ ವಾಚನ – ಗಾಯನ ಪ್ರಸ್ತುತ ಪಡಿಸುವರು. ಡಾ. ಹ.ವೆಂ. ಕಾಖಂಡಿಕಿ ಕಾರ್ಯಕ್ರಮ ನಿರ್ವಹಿಸುವರು.
ಎಲ್ಲ ಬೇಂದ್ರೆ ಅಭಿಮಾನಿಗಳು ಸಾಹಿತ್ಯಾಸಕ್ತರು ಉಪಸ್ಥಿತರಿದ್ದು ವರಕವಿಯ ಅಂಗಳದಲ್ಲಿಯೇ ವರಕವಿಯ ಜನ್ಮದಿನದಂದು ನಮ್ಮ ಗೌರವ ಸಲ್ಲಿಸೋಣ ಎಂದು ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಸಂಚಾಲಕ ಸಮೀರ ಜೋಶಿ ವಿನಂತಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಬೆಳಗಿನ 8-00 ಗಂಟೆಗೆ ಕಡಪಾ ಮೈದಾನದಲ್ಲಿ (ಕಲಾಭವನ ಆವರಣ) ಬೇಂದ್ರೆ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ಆ ಕಾರ್ಯಕ್ರಮದಲ್ಲಿ ಸಹ ಎಲ್ಲರೂ ಉಪಸ್ಥಿತರಿರಲು ವಿನಂತಿಸಲಾಗಿದೆ.
