Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾಗಿದ್ದ ದಿ. ಗೋಪಾಲಕೃಷ್ಣ ಆಸ್ರಣ್ಣ ಸ್ಮರಣಾರ್ಥ ನೀಡಲಾಗುವ 2026ನೇ ಸಾಲಿನ ‘ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ’ಗೆ ಕಟೀಲು ಮೇಳದ ಹಿರಿಯ ಚೆಂಡೆ, ಮದ್ದಳೆ ವಾದಕ ಮಿಜಾರು ಮೋಹನ್ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ. ಕದ್ರಿಯ ಆಸ್ರಣ್ಣ ಅಭಿಮಾನಿ ಬಳಗ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಚಿನ್ನದ ಪದಕದೊಂದಿಗೆ ಮೋಹನ್ ಶೆಟ್ಟಿಗಾರ್ ಇವರನ್ನು ಗೌರವಿಸಲಾಗುವುದು. ಕಟೀಲು ಲಕ್ಷ್ಮೀ ನಾರಾಯಣ ಆಸ್ರಣ್ಣ ಮತ್ತು ಬಂಧುಗಳು ದಿನಾಂಕ 22 ಆಗಸ್ಟ್ 2026ರ ಶನಿವಾರ ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾಭವನದಲ್ಲಿ ಹಮ್ಮಿಕೊಂಡಿರುವ ಸಂಸ್ಮರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಸ್ರಣ್ಣ ಅಭಿಮಾನಿ ಬಳಗದ ಪ್ರಮುಖರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಮತ್ತು ಕದ್ರಿ ನವನೀತ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ವತಿಯಿಂದ ಭಾರತೀಯ ವಿದ್ಯಾಭವನ ಮಂಗಳೂರು ಮತ್ತು ರಾಮಕೃಷ್ಣ ಮಠ ಮಂಗಳೂರು ಇವುಗಳ ಸಹಯೋಗದೊಂದಿಗೆ ಹಾಗೂ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಶ್ರಾವಣ ಸಂಗೀತೋತ್ಸವ 2026’ವನ್ನು ದಿನಾಂಕ 22 ಮತ್ತು 23 ಆಗಸ್ಟ್ 2026ರಂದು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಅಮೃತ ಭವನದಲ್ಲಿ ಆಯೋಜಿಸಲಾಗಿದೆ. ದಿನಾಂಕ 22 ಆಗಸ್ಟ್ 2026ರಂದು ಮಧ್ಯಾಹ್ನ 3-30 ಗಂಟೆಗೆ ವಾರ್ಷಿಕ ಮಹಾಸಭೆ ನಡೆಯಲಿದೆ. ಸಂಜೆ 5-00 ಗಂಟೆಗೆ ಬೆಂಗಳೂರಿನ ಶ್ರೀಮತಿ ಉಷಾ ರಾಮಕೃಷ್ಣ ಇವರ ಹಾಡುಗಾರಿಕೆಗೆ ಬೆಂಗಳೂರಿನ ಕುಮಾರಿ ಸಿ.ವಿ. ಶ್ರುತಿ ವಯೋಲಿನ್, ಮೈಸೂರಿನ ಎ. ರಾಧೇಶ್ ಇವರು ಮೃದಂಗದಲ್ಲಿ ಮತ್ತು ಹರಿಹರಪುರದ ಚಿ. ಧೀಮಂತ್ ಭಟ್ಟ ಘಟಂನಲ್ಲಿ ಸಹಕರಿಸಲಿದ್ದಾರೆ. ದಿನಾಂಕ 23 ಆಗಸ್ಟ್ 2026ರಂದು ಮಧ್ಯಾಹ್ನ 3-00 ಗಂಟೆಗೆ ಮಂಗಳೂರಿನ ಕುಮಾರಿ ಸುಧೀಕ್ಷಾ ಆರ್. ಇವರ ಹಾಡುಗಾರಿಕೆಗೆ ಮಂಗಳೂರಿನ ಕುಮಾರಿ ಧನಶ್ರೀ ಶಬರಾಯ ಇವರು ಮಯಲಿನ್ ಮತ್ತು ಮಂಗಳೂರಿನ ಅವಿನಾಶ್…
ಮಂಗಳೂರು : ಕೋಡಿಕಲ್ ನ ಬೆನಕ ಜ್ಯೋತಿಷ್ಯಾಲಯದಲ್ಲಿ ದಿನಾಂಕ 16 ಆಗಸ್ಟ್ 2026ರಂದು ಕೋಡಿಕಲ್ ನ ವಿಪ್ರ ವೇದಿಕೆಯ ದಶಮ ವರ್ಷದ ಸರಣಿಯ ಸಮಾರೋಪ ಸಮಾರಂಭ ನಡೆಯಿತು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತಾ ಪ್ರಖರ ಧಾರ್ಮಿಕ ಚಿಂತಕರೂ, ವಿದ್ವಾಂಸರೂ ಆದ ಪಂಜ ಭಾಸ್ಕರ ಭಟ್ ರವರು “ಸಮಾಜದ ಒಗ್ಗೂಡುವಿಕೆಗೆ ಬ್ರಾಹ್ಮಣರು ಸದಾ ಪ್ರಯತ್ನಿಸುತ್ತಾರೆ. ಧಿಯೋ ಯೋನ ಪ್ರಚೋದಯಾತ್ ಇದು ನಮ್ಮ ಪ್ರತಿಭಾ ಶಕ್ತಿಯ ಬೀಜ ಮಂತ್ರ. ಯಾವುದೇ ಮಾನವೀಯ ಬೇಧ ಕಲ್ಪಿಸದೆ ಸರ್ವರನ್ನೂ ತಮ್ಮೊಂದಿಗೆ ಕರೆದೊಯ್ಯುವ ಶಕ್ತಿ ಬ್ರಹ್ಮತ್ವಕ್ಕಿದೆ. ನಾವು ನಮ್ಮ ಧಾರ್ಮಿಕ ವಿಧಾನ, ಆಚರಣೆಯಿಂದ ನಮ್ಮ ಬಲ ವೃದ್ಧಿಸಿಕೊಳ್ಳುತ್ತೇವೆ. ಪುರದ ಹಿತವನ್ನು ಹಾರೈಸುವವರಾಗಿ ಸರ್ವಪ್ರಿಯರಾಗುತ್ತೇವೆ. ಲೋಕ ಕಲ್ಯಾಣವನ್ನೇ ಅಸ್ತ್ರವನ್ನಾಗಿಸಿಕೊಂಡು ಬದುಕುತ್ತೇವೆ. ಇದುವೇ ಬ್ರಹ್ಮ ತೇಜೋ ಬಲಂ ಬಲಮ್ ಆಗಿರುತ್ತದೆ.” ಎಂದು ಕರೆ ನೀಡಿದರು. ಧಾರ್ಮಿಕ ಚಿಂತಕ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡುತ್ತಾ “ಧರ್ಮದ ನಡೆಯೊಂದಿಗೆ ನಮ್ಮತನವನ್ನು ಬಿಗಿಗೊಳಿಸುತ್ತಾ ಸಾಗುವ ಹಿಂದೂ ಧರ್ಮದ ಪ್ರಮುಖ ವಿಭಾಗವೇ ನಾವು. ಹತ್ತು ವರ್ಷಗಳ ಸುದೀರ್ಘ…
ಪೆರ್ಲ : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ, ಕನಕದಾಸ ಸಂಶೋಧನಾ ಕೇಂದ್ರ ಮತ್ತು ನಾಲಂದ ಕಲಾ ಮತ್ತು ವಿಜ್ಞಾನ ಕಾಲೇಜು ಪೆರ್ಲ ಇವರ ಸಹಯೋಗದೊಂದಿಗೆ ದಿನಾಂಕ 18 ಆಗಸ್ಟ್ 2026ರಂದು ಪೆರ್ಲದಲ್ಲಿ ‘ಕನಕದಾಸರ ಸಾಹಿತ್ಯದಲ್ಲಿ ಸಾಮಾಜಿಕ ಪರಿಕಲ್ಪನೆ’ ಕುರಿತ ಕನ್ನಡ ಮಲಯಾಳಂ ಉಭಯಭಾಷಾ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರಿನ ವಿದ್ವಾಂಸರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಇವರು ಮಾತನಾಡಿ “ಕನಕದಾಸರಲ್ಲಿ ಮೌಢ್ಯದ ನಿರಾಕರಣೆ ಹಾಗೂ ವೈಚಾರಿಕ ಚಿಂತನೆಗಳಿವೆ. ಆದರೆ ಕೋಣ ಪ್ರಸಂಗ, ಕನಕನ ಕಿಂಡಿ ಮುಂತಾದ ಕಲ್ಪನೆಗಳನ್ನು ಪ್ರಚಾರಗೊಳಿಸುವ ಮೂಲಕ ಅವೈಚಾರಿಕ ಚಿಂತನೆಗಳನ್ನು ಬಿತ್ತರಿಸಲಾಗುತ್ತಿದೆ. ಉಡುಪಿಯಲ್ಲಿ ವ್ಯಾಸರಾಯರು ಕನಕದಾಸರಿಗೆ ಮೊದಲ ಪ್ರಸಾದ ನೀಡುತ್ತಿದ್ದರು ಎಂದು ಹರ್ಮನ್ ಮೋಗ್ಲಿಂಗ್ ದಾಖಲಿಸಿದ್ದಾರೆ. ಕನಕದಾಸರ ಮೋಹನ ತರಂಗಿಣಿಯ ಕನಕ – ವಧೂಟಿಯರ ಸಂವಾದ ಮುದ್ದಣ – ಮನೋರಮೆ ಸಂವಾದಕ್ಕೆ ಪ್ರೇರಣೆಯಾಗಿದೆ. ಅವರ ರಾಮಧಾನ್ಯ ಚರಿತೆಯ ಕೊನೆಯಲ್ಲಿ ಬರುವ ಅತಿಹಿತದಲಿ ನೀವಿಹುದು ಎಂಬ ಮಾತು ಸಮಾಜದಲ್ಲಿ ಸಾಮರಸ್ಯ ಇರಬೇಕು…
Mangaluru : Kum. Vaishnavi K. Pai, disciple of Smt. Radhika Shetty of Nrityaangan, Mangaluru, presented her Rangapravesha on 9th August 2026 at Don Bosco Hall, Mangaluru. The evening commenced with a beautiful veena recital by Vaishnavi, setting a serene tone for the performance. She was accompanied by an accomplished ensemble of artistes, with dance direction, choreography and natuvanga by Smt. Radhika Shetty, vocal support by Smt. Vidyashree Radhakrishna, mridanga by Shri Balachandra Bhagawath and flute by Shri Rajagopalan V. P. The performance commenced with a Pushpanjali and continued with Alarippu, Jathiswara, Shabdam and a Padavarna in the first half, followed…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರಿಂದ ‘ಯಕ್ಷಶ್ರಾವಣ – 2’ ತಾಳಮದ್ದಲೆ ಬನ್ನೂರಿನ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಭೀಷ್ಮ ವಿಜಯ’ದೊಂದಿಗೆ ದಿನಾಂಕ 18 ಆಗಸ್ಟ್ 2026ನೇ ಮಂಗಳವಾರ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಸತೀಶ ಇರ್ದೆ ಹಾಗೂ ಚೆಂಡೆ ಮದ್ದಲೆಗಳಲ್ಲಿ ಪಿ.ಟಿ. ಜಯರಾಮ ಭಟ್, ಸಮರ್ಥ ವಿಷ್ಣು ಕಡಂಬಳಿಕೆ ಭಾಗವಹಿಸಿದರು. ಮುಮ್ಮೇಳದಲ್ಲಿ ಭೀಷ್ಮನಾಗಿ ಗುಂಡ್ಯಡ್ಕ ಈಶ್ವರ ಭಟ್, ಅಂಬೆಯಾಗಿ ಭಾಸ್ಕರ ಬಾರ್ಯ, ಪರಶುರಾಮನ ಪಾತ್ರದಲ್ಲಿ ಗುಡ್ಡಪ್ಪ ಬಲ್ಯ, ವೃದ್ಧಬ್ರಾಹ್ಮಣನಾಗಿ ಮಾಂಬಾಡಿ ವೇಣುಗೋಪಾಲ ಭಟ್, ಸಾಲ್ವನಾಗಿ ಬಡೆಕ್ಕಿಲ ಚಂದ್ರಶೇಖರ ಭಟ್ ಪಾತ್ರಪೋಷಣೆ ಮಾಡಿದರು. ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಮಾಂಬಾಡಿ ವೇಣುಗೋಪಾಲ್ ಭಟ್ ಪ್ರಾಯೋಜಿಸಿದರು. ಭಾಸ್ಕರ ಬಾರ್ಯ ಸ್ವಾಗತಿಸಿ, ದೇವಳದ ಪ್ರಬಂಧಕ ಸುಬ್ರಹ್ಮಣ್ಯ ಭಟ್ ವಂದಿಸಿದರು.
ಬೆಂಗಳೂರು : ಭಾರತ ಯಾತ್ರ ಕೇಂದ್ರ ಬೆಂಗಳೂರು ಇದರ ವತಿಯಿಂದ ಭಾರತದ ಮಾಜಿ ಪ್ರಧಾನಿ ಚಂದ್ರಶೇಖರ್ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಇವರ ಜನ್ಮ ಶತಮಾನೋತ್ಸವ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ದಿನಾಂಕ 19 ಆಗಸ್ಟ್ 2026ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಮಾಜಿ ವಿಧಾನ ಸಭಾ ಸದಸ್ಯ ಹಾಗೂ ನಟ ಡಾ. ಮುಖ್ಯಮಂತ್ರಿ ಚಂದ್ರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ ಇವರು ಉದ್ಘಾಟನೆ ಮಾಡಲಿದ್ದಾರೆ. ಸಂಜೆ 5-30 ಗಂಟೆಗೆ ಶ್ರೀಮತಿ ಲತಾ ಲಕ್ಷ್ಮೀಶ್ ಇವರ ನಿರ್ದೇಶನದಲ್ಲಿ ‘ನೃತ್ಯ ರೂಪಕ’ ಮತ್ತು 6-30 ಗಂಟೆಗೆ ಡಾ. ಬಿ.ವಿ. ರಾಜಾರಾಮ್ ಇವರ ನಿರ್ದೇಶನದಲ್ಲಿ ಬೆಂಗಳೂರಿನ ಕಲಾ ಗಂಗೋತ್ರಿ ಪ್ರಸ್ತುತ ಪಡಿಸುವ ‘ಮೈಸೂರು ಮಲ್ಲಿಗೆ’ ನಾಟಕ ಪ್ರದರ್ಶನ ನಡೆಯಲಿದೆ.
ಬೆಂಗಳೂರು : ರಂಗದರ್ಶನ ಪ್ರದರ್ಶನ ಕಲಾಕೇಂದ್ರ ಬೆಂಗಳೂರು ಇದರ ವತಿಯಿಂದ ವರಕವಿ ದ.ರಾ. ಬೇಂದ್ರೆ ಕಾವ್ಯದ ರಂಗಾಭಿವ್ಯಕ್ತಿ ‘ನಾದಲೀಲೆ’ ಏಕವ್ಯಕ್ತಿ ರಂಗಪ್ರಯೋಗವನ್ನು ದಿನಾಂಕ 19 ಆಗಸ್ಟ್ 2026ರಂದು ಸಂಜೆ ಗಂಟೆ 6-30ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಡಾ. ಬೇಲೂರು ರಘುನಂದನ್ ಇವರ ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನದ ಈ ಏಕವ್ಯಕ್ತಿ ರಂಗಪ್ರಯೋಗವನ್ನು ಮೈಕೊ ಶಿವಶಂಕರ್ ಇವರು ಅಭಿನಯಿಸಲಿದ್ದಾರೆ.
ಕನ್ನಡ ಸಾಹಿತ್ಯದ ವೈವಿಧ್ಯಮಯ ಪ್ರಕಾರಗಳಲ್ಲಿ ಚುಟುಕು ಸಾಹಿತ್ಯಕ್ಕೆ ವಿಶಿಷ್ಟವಾದ ಸ್ಥಾನವಿದೆ. ಕಡಿಮೆ ಪದಗಳಲ್ಲಿ ಹೆಚ್ಚಿನ ಅರ್ಥವನ್ನು, ಸರಳವಾದ ಮಾತಿನಲ್ಲಿ ಗಂಭೀರವಾದ ವಿಚಾರವನ್ನು, ನಗುವಿನ ಹಿಂದೆ ಚಿಂತನೆಯ ಕಿಡಿಯನ್ನು ಮತ್ತು ವ್ಯಂಗ್ಯದ ಮೂಲಕ ಸಾಮಾಜಿಕ ವಾಸ್ತವವನ್ನು ಹೇಳುವ ಸಾಮರ್ಥ್ಯ ಚುಟುಕಿನ ವೈಶಿಷ್ಟ್ಯ. ಈ ಕಾರಣದಿಂದಲೇ ಚುಟುಕು ಸಾಹಿತ್ಯವು ಓದುಗರ ಮನಸ್ಸಿನಲ್ಲಿ ತಕ್ಷಣ ಸ್ಪಂದಿಸುವ ಸಾಹಿತ್ಯ ಪ್ರಕಾರವಾಗಿದೆ. ಕನ್ನಡದ ಚುಟುಕು ಸಾಹಿತ್ಯ ಪರಂಪರೆಯನ್ನು ಸಮೃದ್ಧಗೊಳಿಸಿದ ಪ್ರಮುಖ ಕವಿಗಳಲ್ಲಿ ದುಂಡಿರಾಜ್ ಅವರ ಹೆಸರು ಗಮನಾರ್ಹ. ಅವರ ಚುಟುಕುಗಳಲ್ಲಿ ಹಾಸ್ಯವಿದೆ; ಆದರೆ ಅದು ಕೇವಲ ನಗಿಸುವ ಹಾಸ್ಯವಲ್ಲ. ಅದರ ಹಿಂದೆ ಜೀವನಾನುಭವವಿದೆ, ಸಮಾಜದ ಸೂಕ್ಷ್ಮ ಅವಲೋಕನವಿದೆ, ಮನುಷ್ಯನ ವರ್ತನೆಯ ಕುರಿತು ವಿಮರ್ಶಾತ್ಮಕ ದೃಷ್ಟಿಯಿದೆ. ಸಾಮಾನ್ಯವಾಗಿ ಕಾಣುವ ಸಣ್ಣ ಸಂಗತಿಗಳಲ್ಲಿಯೇ ಅಸಾಮಾನ್ಯ ಅರ್ಥವನ್ನು ಕಂಡುಕೊಳ್ಳುವ ಅವರ ಪ್ರತಿಭೆ ಚುಟುಕುಗಳ ಯಶಸ್ಸಿನ ಪ್ರಮುಖ ಕಾರಣ. ಚುಟುಕು ಎಂದರೆ ಕೇವಲ ನಾಲ್ಕು ಸಾಲುಗಳ ಕವನವಲ್ಲ. ಅದು ಒಂದು ಸಣ್ಣ ಸಾಹಿತ್ಯ ರೂಪದೊಳಗೆ ಒಂದು ದೊಡ್ಡ ಅನುಭವವನ್ನು ಹಿಡಿದಿಡುವ ಕಲಾತ್ಮಕ ಪ್ರಯತ್ನ. ದೀರ್ಘವಾದ…
ಬೆಂಗಳೂರು : ರಂಗರಥ – ಭಾರತೀಯ ಪ್ರದರ್ಶನ ಕಲಾ ಸಂಸ್ಥೆ (ರಿ.) ಪ್ರಸ್ತುತ ಪಡಿಸುವ ವಾರಾಂತ್ಯ ‘ಅಭಿನಯ ಕಾರ್ಯಾಗಾರ’ವು ದಿನಾಂಕ 22 ಆಗಸ್ಟ್ 2026ರಿಂದ 13 ಸೆಪ್ಟೆಂಬರ್ 2026ರವರೆಗೆ ಪ್ರತಿದಿನ ಬೆಳಿಗ್ಗೆ 11-00ರಿಂದ 2-00 ಗಂಟೆ ತನಕ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ವ್ಯೋಮ ಆರ್ಟ್ ಸ್ಪೇಸ್ ನಲ್ಲಿ ನಡೆಯಲಿದೆ. ಇದು ಸಂಸ್ಥೆ ಪ್ರಸ್ತುತ ಪಡಿಸುವ 43ನೇ ಬ್ಯಾಚ್ ಆಗಿದ್ದು, ತರಗತಿಗಳು ಪ್ರತಿ ಶನಿವಾರ ಭಾನುವಾರ ನಡೆಯುತ್ತವೆ. ಕುಮಾರಿ ಶ್ವೇತಾ ಶ್ರೀನಿವಾಸ್ ಮತ್ತು ಆಸಿಫ್ ಕ್ಷತ್ರಿಯ ಇವರುಗಳು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 8050157443 ಮತ್ತು 9448276776 ಸಂಖ್ಯೆಯನ್ನು ಸಂಪರ್ಕಿಸಿರಿ.