Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ರಾಮಕೃಷ್ಣ ಮಠ ಮಂಗಳಾದೇವಿ ಇವರ ವತಿಯಿಂದ ಶ್ರೀ ಗುರುಪೂರ್ಣಿಮೆ ಆಚರಣೆ ಹಾಗೂ ಯಕ್ಷಕಲಾರಾಧನೆ ದಿನಾಂಕ 29 ಜುಲೈ 2026ರಂದು ಮಂಗಳೂರಿನ ರಾಮಕೃಷ್ಣ ಮಠದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗ್ಗೆ 9-00 ಗಂಟೆಗೆ ವೇದಪಾರಾಯಣ, ವಿಷ್ಣುಸಹಸ್ರನಾಮ ಪಾರಾಯಣ, ಭಜನೆ, ಆಧ್ಯಾತ್ಮಿಕ ಪ್ರವಚನ, ಭಗವನ್ನಾಮ ಸಂಕೀರ್ತನೆ ನಡೆಯಲಿವೆ. ಮಧ್ಯಾಹ್ನ 1-00 ಗಂಟೆಗೆ ‘ಸತ್ಯಂ ಶಿವಂ ಸುಂದರಂ’ ನವರಸ ಯಕ್ಷೋತ್ಸವಂ ಶೀರ್ಷಿಕೆಯಡಿ ಯಕ್ಷಕಲಾರಾಧನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ ಮತ್ತು ಬಳಗ ಹಿಮ್ಮೇಳವನ್ನು ನಡೆಸಲಿದ್ದು, ಪ್ರಶಾಂತ್ ಆಚಾರ್ ಮದ್ದಳೆ ಹಾಗೂ ಪ್ರಶಾಂತ್ ಮುಂಡಾಡಿ ಚೆಂಡೆ ವಾದನ ಮಾಡಲಿದ್ದಾರೆ. ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ತೋಟಿಮನೆ ಗಣಪತಿ ಹೆಗಡೆ, ನೀಲ್ಕೋಡು ಶಂಕರ ಹೆಗಡೆ, ಶಶಿಕಾಂತ ಶೆಟ್ಟಿ ಕಾರ್ಕಳ, ಚಪ್ಪರಮನೆ ಶ್ರೀಧರ ಹೆಗಡೆ ಹಾಗೂ ಕಾರ್ತಿಕ್ ಚಿಟ್ಟಾಣಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಸಮನ್ವಯವನ್ನು ಕಬ್ಬಿನಾಲೆ ವಸಂತ ಭಾರಧ್ವಾಜ್ ವಹಿಸಲಿದ್ದಾರೆ. ಶ್ರೀ ಗುರುಪೂರ್ಣಿಮೆಯ ಈ ಪವಿತ್ರ ಕಾರ್ಯಕ್ರಮಗಳಲ್ಲಿ ಭಕ್ತರು ಹಾಗೂ…
ಸಿರಿಗೆರೆ : ಜಾನಪದ ಕಲೆಗಳನ್ನು ಪೋಷಿಸುವ ಉದ್ದೇಶದಿಂದ ಇಲ್ಲಿನ ಶ್ರೀ ತರಳಬಾಳು ಮಠದ ಆಶ್ರಯದಲ್ಲಿ 40 ವರ್ಷಗಳಿಂದ ನಡೆಸಿಕೊಂಡು ಬಂದಿರುವ ರಾಜ್ಯಮಟ್ಟದ ವೀರಗಾಸೆ ಸ್ಪರ್ಧೆಯನ್ನು ಈ ಬಾರಿ ದಿನಾಂಕ 10 ಮತ್ತು 11 ಆಗಸ್ಟ್ 2026ರಂದು ಹಮ್ಮಿಕೊಳ್ಳಲಾಗಿದೆ. ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿಯ 88ನೇ ಪುಣ್ಯ ಸ್ಮರಣೆ ಅಂಗವಾಗಿ ಆಯೋಜಿಸಿರುವ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ನಗದು ಬಹುಮಾನ ನೀಡಲಾಗುತ್ತದೆ. ಭಾಗವಹಿಸುವ ಎಲ್ಲಾ ತಂಡಗಳಿಗೆ ಬಸ್ ಪ್ರಯಾಣದ ವೆಚ್ಚ ಹಾಗೂ ಮಹಿಳಾ ತಂಡಗಳಿಗೆ ಪ್ರತ್ಯೇಕ ಬಹುಮಾನ ಕೊಡಲಾಗುತ್ತದೆ. ಆಸಕ್ತ ತಂಡಗಳು ದಿನಾಂಕ 07 ಆಗಸ್ಟ್ 2026ರೊಳಗೆ ಅಧ್ಯಕ್ಷರು, ಅಣ್ಣನ ಬಳಗ, ಸಿರಿಗೆರೆ-577541 ಚಿತ್ರದುರ್ಗ ತಾಲೂಕು ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ: 99861 91968, 88616 47555, 99725 31504ಗೆ ಸಂಪರ್ಕಿಸಬಹುದು.
ಕರ್ನಾಟಕದ ಮೈಸೂರು-ಕೋಲಾರ ಭಾಗದಲ್ಲಿ ಹುಟ್ಟಿ ಬೆಳೆದವರಿಗೆ, ಸಾಹಿತ್ಯ-ಅಕಾಡಮಿಕ್ ಕ್ಷೇತ್ರದಿಂದ ಹೊರತಾಗಿದ್ದರೆ, ಎರಡು ಕೊರತೆಗಳಿರುತ್ತವೆ. ಮೊದಲನೆಯದು ಉತ್ತರ ಕರ್ನಾಟಕದ ಸಮಕಾಲೀನ ಚರಿತ್ರೆಯ ಪರಿಚಯ ಇರುವುದೇ ಇಲ್ಲ ಅಥವಾ ಕಡಿಮೆ ಇರುತ್ತದೆ. ಇನ್ನು ಕರಾವಳಿ/ದಕ್ಷಿಣ ಕನ್ನಡದ ಸಾಂಸ್ಕೃತಿಕ ಜಗತ್ತಿನ ಪರಿಚಯ ಬಹುಮಟ್ಟಿಗೆ ಇರುವುದಿಲ್ಲ. ಇವೆರಡೂ ಕೊರತೆಗಳನ್ನು ನೀಗಿಸಿಕೊಳ್ಳಲು ನನಗೆ ನೆರವಾಗಿದ್ದು ಸಾಹಿತ್ಯಾಧ್ಯಯನ ಮತ್ತು ಸಾಮಾಜಿಕ ಚಟುವಟಿಕೆ, ಇಷ್ಟಾದರೂ ಡಾ. ಸುಂದರ ಕೇನಾಜೆ ಇವರ ‘ಮಾತಿಲ್ಲದ ಮಾತು’ ಶೀರ್ಷಿಕೆಯ ಅಂಕಣ ಬರಹಗಳ ಸಂಕಲನದ ಪುಟ ತಿರುವುತ್ತಿದ್ದಾಗ, ನನ್ನ ಅರಿವು ಎಷ್ಟು ಹಿಂದುಳಿದಿದೆ ಎನಿಸಿದ್ದು ಸತ್ಯ. ವಿಜಯವಾಣಿ ಪತ್ರಿಕೆಯ ‘ನಿಲುಮೆ’ ಅಂಕಣದ 51 ಲೇಖನಗಳನ್ನು ಡಾ. ಕೇನಾಜೆ ಬಹಳ ಸುಂದರವಾಗಿ ಓದುಗರ ಮುಂದಿಟ್ಟಿದ್ದಾರೆ. ಮೊದಲ 14 ಬರಹಗಳನ್ನು ಓದಿದಾಗ ಬಹುಶಃ ಈ ಲೇಖಕರು ಕರಾವಳಿಯನ್ನು ದಾಟಿರಲಾರರು ಎಂದು ಭಾಸವಾಗಿದ್ದು ನಿಜ. ಆದರೆ ಇಡೀ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಅನ್ನಿಸಿದ್ದು, ಡಾ. ಕೇನಾಜೆ ಸ್ಪರ್ಶಿಸದ ವಿಷಯವೇ ಇಲ್ಲ ಎಂದು, ಈ ಮೊದಲ 15 ಲೇಖನಗಳನ್ನು ಓದುತ್ತಾ ಹೋದರೆ,…
ಪೆರಿಯ : ಬೇಕಲ್ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ಅಡಿಯಲ್ಲಿ ಆಷಾಢ ಏಕಾದಶಿಯ ಪ್ರಯುಕ್ತ ಎರಡು ದಿನಗಳ ಕಾಲ ನಡೆದ ನೃತ್ಯ ಗಾನ ಕಾರ್ಯಕ್ರಮಗಳಲ್ಲಿ ದಿನಾಂಕ 25 ಜುಲೈ 2026ರ ಶುಕ್ರವಾರ ನಡೆದ ಕೊಳಲು ಕಚೇರಿ ಬಹಳ ಗಮನಾರ್ಹವಾಗಿತ್ತು. ಮುತ್ತುಸ್ವಾಮಿ ದೀಕ್ಷಿತರ ನಾಟ ರಾಗದಲ್ಲಿನ ಮಹಾಗಣಪತಿಯಿಂದ ಕಚೇರಿ ಆರಂಭವಾಗಿ, ಹಂಸಾನಂದಿ ರಾಗದಲ್ಲಿನ ಬಂತುರೀತಿ ಹಾಗೂ ಸ್ವಾತಿ ತಿರುನಾಳರ ಪರಿಪಾಲಯಮಾಂ, ನಂತರ ಜನರಂಜಿನಿ, ಸಾರಮತಿ, ಆಹಿರ್ ಭೈರವ್, ದರ್ಬಾರಿ ಕಾನಡ, ವನಮಾಲಿ, ಸಿಂಧು ಭೈರವಿ, ದೇಶ್ ಎಂಬ ರಾಗಗಳಲ್ಲಿನ ಕೃತಿಗಳನ್ನು ಜೆ.ಎ. ಜಯಂತ್ ಇವರು ಕೊಳಲಿನಲ್ಲಿ ನುಡಿಸಿದರು. ಇವರ ಶಿಷ್ಯಂದಿರಾದ ಫಣಿ ತೇಜ, ಪವನ್ ಕಲ್ಯಾಣ್, ವಿಕಾಸ್ ಕೃಷ್ಣನ್ ಇವರೂ ಕೊಳಲಿನಲ್ಲಿ ಸಹಕರಿಸಿದರು. ಕುಲೂರ್ ಜಯಚಂದ್ರ ರಾವ್ ಮೃದಂಗದಲ್ಲಿ ಮತ್ತು ಪಯ್ಯನ್ನೂರ್ ಗೋವಿಂದ ಪ್ರಸಾದ್ ಮುಖರಶಂಖದಲ್ಲಿ ಪಕ್ಕವಾದ್ಯ ನೀಡಿದರು.
ಪ್ರೊ. ಎಂ. ಮರಿಯಪ್ಪ ಭಟ್ಟರು ಒಬ್ಬ ಉದ್ಧಾಮ ಪಂಡಿತ, ಕನ್ನಡದ ಕಾಯಕದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು. ಹೊರನಾಡಿನಲ್ಲಿ ಕನ್ನಡದ ಕೆಲಸ ಮಾಡಿದವರಲ್ಲಿ ಇವರೂ ಒಬ್ಬರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದ ಮುಂಗ್ಲಿ ಮನೆಯಲ್ಲಿ 27 ಜುಲೈ 1906ರಂದು ಗೋವಿಂದ ಭಟ್ಟ ಮತ್ತು ಕಾವೇರಿ ಅಮ್ಮ ದಂಪತಿಗಳ ಪುಣ್ಯ ಗರ್ಭದಲ್ಲಿ ಜನಿಸಿದರು. ಪ್ರಾರಂಭಿಕ ಶಿಕ್ಷಣ ಪುತ್ತೂರು ಸಮೀಪದ ಪೋಳ್ಯದಲ್ಲಿ, ಪ್ರೌಢಶಾಲಾ ವಿದ್ಯಾಭ್ಯಾಸ ಪುತ್ತೂರಿನಲ್ಲಿ ಹಾಗೂ ಬಿ.ಎ. ಪದವಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಆಯಿತು. ಮುಂದೆ ತಮ್ಮ ಸ್ವಂತ ಪ್ರಯತ್ನದಿಂದ ಕನ್ನಡ ಎಂ.ಎ. ಪದವಿ ಮತ್ತು ಕನ್ನಡ ವಿದ್ವಾನ್ ಪದವಿಯನ್ನು ಗಳಿಸಿದರು. ಮದರಾಸಿನ ಪ್ರಾಚ್ಯ ಹಸ್ತಪ್ರತಿ ಸಂಶೋಧನಾ ಗ್ರಂಥ ಭಂಡಾರದಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿ ವೃತ್ತಿ ಜೀವನಕ್ಕೆ ಪ್ರವೇಶಿಸಿದರು. ಇವರು ಮದರಾಸಿನ ಕ್ರಿಶ್ಚಿಯನ್ ಹೈಸ್ಕೂಲಿನ ಗಣಿತ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 1940ರಲ್ಲಿ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡ ಮರಿಯಪ್ಪ ಭಟ್ಟರು ಮೂರು ದಶಕಗಳಿಗೂ ಹೆಚ್ಚಿನ ಕಾಲ…
ಮೂಡಬಿದಿರೆ : ಡಾ. ವಸಂತಕುಮಾರ ಪೆರ್ಲ ಇವರು ಸಂಕೇತಿ ಮತ್ತು ಕನ್ನಡ ಭಾಷೆಯಿಂದ ತುಳುವಿಗೆ ಅನುವಾದಿಸಿದ ಪ್ರಣತಾರ್ತಿ ಹರನ್ ಅವರ ‘ಯಾತ್ರೆ’ ಕಾದಂಬರಿಯನ್ನು ಮಾಡಬಿದಿರೆಯಲ್ಲಿ ಜರಗಿದ ಆಳ್ವಾಸ್ ನುಡಿಸಿರಿಯ ಸಿದ್ಧತಾ ಸಭೆಯಲ್ಲಿ ಡಾ. ಎಂ. ಮೋಹನ ಆಳ್ವ ಅವರು ದಿನಾಂಕ 26 ಜುಲೈ 2026ರಂದು ಬಿಡುಗಡೆಗೊಳಿಸಿದರು. ಅನುವಾದಕರಾದ ಕವಿ-ಸಾಹಿತಿ ಡಾ. ವಸಂತಕುಮಾರ ಪೆರ್ಲ, ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ್, ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್, ಬಂಟ್ವಾಳದ ರಾಣಿ ಅಬ್ಬಕ್ಕ ಕೇಂದ್ರದ ಡಾ. ತುಕಾರಾಮ ಪೂಜಾರಿ, ಮಂಗಳೂರು ವಿ.ವಿ. ಕನ್ನಡ ವಿಭಾಗದ ಡಾ. ಧನಂಜಯ ಕುಂಬ್ಳೆ, ವಿಮರ್ಶಕ ಸತ್ಯನಾರಾಯಣ ಮಲ್ಲಿಪಟ್ಟಣ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಯೋಗೀಶ್ ಕೈರೋಡಿ ಸ್ವಾಗತಿಸಿದರು. ಅನುವಾದ ಕಾರ್ಯಗಳು ತುಳು ಸಾಹಿತ್ಯಕ್ಷೇತ್ರವನ್ನು ಸಮೃದ್ಧಗೊಳಿಸಲಿ ಎಂದು ಡಾ. ಮೋಹನ ಆಳ್ವ ಹೇಳಿದರು. ಅನುವಾದಕರಾದ ಡಾ. ವಸಂತಕುಮಾರ ಪೆರ್ಲ ಅವರು ಕೃತಿಯ ಕುರಿತು ಮಾತಾಡಿದರು.
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಹಾಗೂ ಶ್ರವಣರಂಗ ಸವಣೂರು ಹಮ್ಮಿಕೊಂಡಿರುವ ‘ಯಕ್ಷಾಷಾಢ -6’ ತಾಳಮದ್ದಳೆ ಕಾರ್ಯಕ್ರಮ ಶ್ರೀ ಮಹಾಮಾಯಾ ದೇವಸ್ಥಾನ ಪುತ್ತೂರು ಇಲ್ಲಿನ ಶ್ರೀ ದೇವಿಯ ಸನ್ನಿಧಿಯಲ್ಲಿ ದಿನಾಂಕ 26 ಜುಲೈ 2026ರಂದು ‘ಶಾಂಭವಿ ವಿಲಾಸ’ ಎಂಬ ಆಖ್ಯಾನದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಇರ್ದೆ, ನಿತೀಶ್ ಎಂಕಣ್ಣಮೂಲೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ ತಾರಾನಾಥ ಸವಣೂರು, ಅನೀಶ್ ಕೃಷ್ಣ ಪುಣಚ, ಸಮರ್ಥ ವಿಷ್ಣು ಕಡಂಬಳಿಕೆ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ ಮತ್ತು ಸಾವಿತ್ರಿ ಶಾಸ್ತ್ರಿ ಶಿರಂಕಲ್ಲು (ಕೌಶಿಕೆ), ಗುಂಡ್ಯಡ್ಕ ಈಶ್ವರ ಭಟ್ (ರಕ್ತಬೀಜ), ಹರಿಣಾಕ್ಷಿ ಜೆ. ಶೆಟ್ಟಿ (ಶುಂಭ), ತಾರಾನಾಥ ಸವಣೂರು (ನಿಶುಂಭ), ಸುಬ್ಬಪ್ಪ ಕೈಕಂಬ (ಚಂಡ), ದುಗ್ಗಪ್ಪ ನಡುಗಲ್ಲು (ಮುಂಡ), ಗುಡ್ಡಪ್ಪ ಬಲ್ಯ (ಸುಗ್ರೀವ), ಅಚ್ಯುತ ಪಾಂಗಣ್ಣಾಯ (ದೂಮ್ರಾಕ್ಷ), ಕಿಶೋರಿ ದುಗ್ಗಪ್ಪ ನಡುಗಲ್ಲು (ದೇವೇಂದ್ರ) ಸಹಕರಿಸಿದರು. ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ತಾರಾನಾಥ ಸವಣೂರು ವಂದಿಸಿದರು.…
ಶೈಲಜಾ ಉಡಚಣ ಓರ್ವ ಮಹತ್ವದ ಕವಯಿತ್ರಿ. ಕಾವ್ಯ, ವಚನ ಸಾಹಿತ್ಯ ಮತ್ತು ಸ್ತ್ರೀ ಪರ ಚಿಂತನೆಗಳಿಗೆ ಇವರು ನೀಡಿದ ಕೊಡುಗೆ ಅಪಾರ. 1935 ಜುಲೈ 26ರಂದು, ಜನಿಸಿದ ಇವರು ಮೂಲತಃ ರಾಯಚೂರು ಜಿಲ್ಲೆಯ ಉಡಚಣದವರು. ಶೈಲಜಾ ಉಡಚಣ ಎಂಬ ಕಾವ್ಯನಾಮದಲ್ಲಿ ಸಾಹಿತ್ಯ ರಚನೆ ಮಾಡುವ ಇವರ ಮೂಲ ಹೆಸರು ಮಹಾಂತಮ್ಮ ಹಸ್ಮಕಲ್. ಶೈಲಜಾ ಹುಟ್ಟಿದಾಗ ತಂದೆ ಗಿರಿಮಲ್ಲಪ್ಪ ತಮ್ಮ ತಂದೆಯ ಕಾಲದಲ್ಲಿಯೇ ಬಿಜಾಪುರದಿಂದ ವಲಸೆ ಬಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹಸ್ಮಕಲ್ ಗ್ರಾಮದಲ್ಲಿ ನೆಲೆಸಿದರು. ಆದ್ದರಿಂದಲೇ ಅವರ ಮನೆತನದ ಹೆಸರು ಹಸ್ಮಕಲ್ ಎಂದಾಯಿತು ಎಂಬ ಪ್ರತೀತಿ ಇದೆ. “ಕಲ್ಯಾಣ ಕರ್ನಾಟಕದ ಹೆಣ್ಣು ಮಕ್ಕಳು ಸಗಣಿ ಬುಟ್ಟಿ ಹೊರುವವರು, ಇವರಿಗೆ ಓದುಬರಹದ ಅವಶ್ಯಕತೆ ಇಲ್ಲ, ಕಲಿತು ಯಾವ ಹುದ್ದೆಯನ್ನು ಅಲಂಕರಿಸಬೇಕಾಗಿಲ್ಲ” ಎಂಬ ಧೋರಣೆ ಇದ್ದ ಆ ಕಾಲ ಘಟ್ಟದಲ್ಲಿ ಶೈಲಜಾ ಅವರನ್ನು ಪ್ರೋತ್ಸಾಹಿಸಿದ್ದು ಅವರ ತಂದೆ ತಾಯಿ. ಅಕ್ಷರ ಜ್ಞಾನವಿದ್ದ ಅಮ್ಮ ಪಾರ್ವತಿ, ವ್ಯಾಪಾರದಲ್ಲಿ ನೈಪುಣ್ಯತೆ ಹೊಂದಿದ್ದ ಅಪ್ಪ ಗಿರಿ ಮಲ್ಲಪ್ಪ…
ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಸಂಯುಕ್ತ ಆಶ್ರಯದಲ್ಲಿ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ–2026’ವನ್ನು ದಿನಾಂಕ 26 ಜುಲೈ 2026ರಂದು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಸಿ. ಸೋಮಶೇಖರ್ ಇವರು ಭಾಗವಹಿಸಲಿದ್ದಾರೆ. ಭರವಸೆಯ ಬೆಳಕು, ಭರವಸೆಯ ಶಿಕ್ಷಣ ರತ್ನ, ರಾಜಶ್ರೀ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಸದ್ಭವನಾ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ಸದ್ಭವನಾ ರಾಷ್ಟ್ರೀಯ ಪ್ರಶಸ್ತಿ 2026, ನಾಡೋಜ ಡಾ. ಕಯ್ಯಾರ ಸದ್ಭವನಾ ರಾಷ್ಟ್ರೀಯ ಪ್ರಶಸ್ತಿ -2026, ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್ -2026, ಸಮಾಜ ಸೇವಾ ರತ್ನ ಮತ್ತು ಗಡಿನಾಡು ಕಾಸರಗೋಡು ಕನ್ನಡ ಭವನದ ಗೌರವಾರ್ಪಣೆ ಪ್ರದಾನ ಮಾಡಲಾಗುವುದು. ಸಮೂಹ ಶಾಸ್ತ್ರೀಯ ನೃತ್ಯ, ಸಮೂಹ ನೃತ್ಯ, ಸಮೂಹ ಜಾನಪದ ನೃತ್ಯ, ಸಮೂಹ ನೃತ್ಯ ರೂಪಕ, ಯಕ್ಷಗಾನ, ಕಥಕ್ಕಳಿ,…
ಬೆಂಗಳೂರು : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಇದರ ವತಿಯಿಂದ ‘ಕವಿಚಕ್ರವರ್ತಿ ರನ್ನ ಸಾಹಿತ್ಯ ಸಂಭ್ರಮ -2026’ ಕಾರ್ಯಕ್ರಮವನ್ನು ದಿನಾಂಕ 26 ಜುಲೈ 2026ರಂದು ಮಧ್ಯಾಹ್ನ 3-00 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಉಪನ್ಯಾಸ, ಸಂಸ್ಕೃತಿಕ ಕಾರ್ಯಕ್ರಮ ಹಾಗೂ ರನ್ನ ಗೌರವ ಪುರಸ್ಕಾರ ಸಮಾರಂಭ ನಡೆಯಲಿದೆ. ಹಿರಿಯ ಕಲಾವಿದೆ ಮಾತಾ ಮಂಜಮ್ಮ ಜೋಗುತಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ತೊಗಲು ಗೊಂಬೆ ಹಾಗೂ ರಂಗಭೂಮಿ ಕಲಾವಿದ ಡಾ. ಸುರೇಂದ್ರಸ್ವಾಮಿ ಬೇವಿನಹಳ್ಳಿ ಇವರು ಸಂಭ್ರಮದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.