ಪೆರಿಯ : ಬೇಕಲ್ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ಅಡಿಯಲ್ಲಿ ಆಷಾಢ ಏಕಾದಶಿಯ ಪ್ರಯುಕ್ತ ಎರಡು ದಿನಗಳ ಕಾಲ ನಡೆದ ನೃತ್ಯ ಗಾನ ಕಾರ್ಯಕ್ರಮಗಳಲ್ಲಿ ದಿನಾಂಕ 25 ಜುಲೈ 2026ರ ಶುಕ್ರವಾರ ನಡೆದ ಕೊಳಲು ಕಚೇರಿ ಬಹಳ ಗಮನಾರ್ಹವಾಗಿತ್ತು.
ಮುತ್ತುಸ್ವಾಮಿ ದೀಕ್ಷಿತರ ನಾಟ ರಾಗದಲ್ಲಿನ ಮಹಾಗಣಪತಿಯಿಂದ ಕಚೇರಿ ಆರಂಭವಾಗಿ, ಹಂಸಾನಂದಿ ರಾಗದಲ್ಲಿನ ಬಂತುರೀತಿ ಹಾಗೂ ಸ್ವಾತಿ ತಿರುನಾಳರ ಪರಿಪಾಲಯಮಾಂ, ನಂತರ ಜನರಂಜಿನಿ, ಸಾರಮತಿ, ಆಹಿರ್ ಭೈರವ್, ದರ್ಬಾರಿ ಕಾನಡ, ವನಮಾಲಿ, ಸಿಂಧು ಭೈರವಿ, ದೇಶ್ ಎಂಬ ರಾಗಗಳಲ್ಲಿನ ಕೃತಿಗಳನ್ನು ಜೆ.ಎ. ಜಯಂತ್ ಇವರು ಕೊಳಲಿನಲ್ಲಿ ನುಡಿಸಿದರು. ಇವರ ಶಿಷ್ಯಂದಿರಾದ ಫಣಿ ತೇಜ, ಪವನ್ ಕಲ್ಯಾಣ್, ವಿಕಾಸ್ ಕೃಷ್ಣನ್ ಇವರೂ ಕೊಳಲಿನಲ್ಲಿ ಸಹಕರಿಸಿದರು. ಕುಲೂರ್ ಜಯಚಂದ್ರ ರಾವ್ ಮೃದಂಗದಲ್ಲಿ ಮತ್ತು ಪಯ್ಯನ್ನೂರ್ ಗೋವಿಂದ ಪ್ರಸಾದ್ ಮುಖರಶಂಖದಲ್ಲಿ ಪಕ್ಕವಾದ್ಯ ನೀಡಿದರು.

