ತುಮಕೂರು : ಹಾವೇರಿಯ ಗಳಗನಾಥ ಮತ್ತು ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನ ಕೊಡಮಾಡುವ 2024ನೇ ಸಾಲಿನ ‘ನಾ.ಶ್ರೀ.ರಾಜಪುರೋಹಿತ ಸಂಶೋಧನಾ’ ಪ್ರಶಸ್ತಿಗೆ ಸಂಶೋಧಕ ಆರ್ಾ. ಶೇಷಶಾಸ್ತ್ರಿ ಹಾಗೂ ‘ಗಳಗನಾಥ ಕಾದಂಬರಿ’ ಪ್ರಶಸ್ತಿಗೆ ಕೃಷಿ ವಿಜ್ಞಾನಿ, ಲೇಖಕ ಕೆ.ಎನ್. ಗಣೇಶಯ್ಯ ಭಾಜನರಾಗಿದ್ದಾರೆ.
ಪ್ರಶಸ್ತಿಯು ರೂ.50,000/- ನಗದು, ಫಲಕ ಒಳಗೊಂಡಿದ್ದು, ದಿನಾಂಕ 30 ಜುಲೈ 2026ರಂದು ತುಮಕೂರಿನ ಶ್ರೀದೇವಿ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಕೆ.ಆರ್ೊ. ಕಮಲೇಶ್ ತಿಳಿಸಿದ್ದಾರೆ. ‘ಗಳಗನಾಥರನ್ನು ಕಾದಂಬರಿಯ ಪಿತಾಮಹ ಎಂದು ಗುರುತಿಸಲಾಗುತ್ತಿದೆ. ಕೇವಲ ಪದ್ಯ ರೂಪದಲ್ಲಿದ್ದ ಸಾಹಿತ್ಯಕ್ಕೆ ಗದ್ಯ ರೂಪ ಕೊಟ್ಟರು. ರಾಜಪುರೋಹಿತರು ಶಿಕ್ಷಕರಾಗಿ ಕೆಲಸ ಮಾಡುತ್ತಾ ಅನೇಕ ಸಂಶೋಧನೆ ಕೈಗೊಂಡಿದ್ದರು. ಇವರ ಹೆಸರಿನಲ್ಲಿ 2016ರಿಂದ ಪ್ರತಿ ವರ್ಷ ಒಬ್ಬರು ಕಾದಂಬರಿಕಾರರು ಮತ್ತು ಸಂಶೋಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
