Subscribe to Updates
Get the latest creative news from FooBar about art, design and business.
Author: roovari
ಮಿಜಾರು: ಮಂಗಳೂರಿನ ಸಸಿಹಿತ್ಲುವಿನಲ್ಲಿ ದಿನಾಂಕ 01 ಡಿಸೆಂಬರ್ 2024ರಂದು ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಸ್ಪರ್ಧಿಸಿದ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜನಪದ ನೃತ್ಯ (ಡೊಳ್ಳು- ಪ್ರಥಮ), ಜನಪದ ನೃತ್ಯ (ಏಕವ್ಯಕ್ತಿ) ಪ್ರಥಮ, ಕತೆ ಬರೆಯುವುದು- ಪ್ರಥಮ ಮತ್ತು ದ್ವಿತೀಯ, ಭಾಷಣ ಕಲೆ -ಪ್ರಥಮ, ಕವಿತೆ ಬರೆಯುವುದು -ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದಿದ್ದಾರೆ. ಸ್ಪರ್ಧೆಯ ಪ್ರಥಮ ಬಹುಮಾನ ವಿಜೇತರು ರಾಜ್ಯಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ ಅಭಿನಂದಿಸಿದ್ದಾರೆ.
ಬೆಂಗಳೂರು : ಡಾ. ಶಿವರಾಮ ಕಾರಂತರು ಯಕ್ಷಗಾನವನ್ನು ಪ್ರವೇಶಿಸಿದಾಗ ಅವರೊಂದಿಗೆ ದೊಡ್ಡಮಟ್ಟದಲ್ಲಿ ವಿದ್ಯಾವಂತರು, ನೌಕರರು, ಯಕ್ಷಗಾನ ಆಸಕ್ತರು, ಕೃಷಿಕರು ಯಕ್ಷಗಾನದತ್ತ ಹೊರಳಿದ್ದು ಯಕ್ಷಗಾನದ ಮಟ್ಟಿಗೆ ದೊಡ್ಡ ಬೆಳವಣಿಗೆ. ಇದು ಯಕ್ಷಗಾನವನ್ನು ವೃತ್ತಿರಂಗದ ಜೊತೆ ಜೊತೆಯಲ್ಲಿ ಹವ್ಯಾಸಿ ರಂಗಭೂಮಿಯನ್ನು ದೊಡ್ಡ ಮಟ್ಟದಲ್ಲಿ ಕಟ್ಟುವುದಕ್ಕೆ ನಾಂದಿಯಾಯಿತು. ಈ ಕಾರಣಕ್ಕೆ ನಮ್ಮ ಬಹುತೇಕ ಊರಿಗಳಲ್ಲಿ ಯಕ್ಷಗಾನಕ್ಕಾಗಿಯೇ ಸಂಘ ಸಂಸ್ಥೆಗಳು ಹುಟ್ಟಿಕೊಂಡು ಅದರಲ್ಲಿ ಕಲಾವಿದರಾಗಿ ಕಾಣಿಸಿಕೊಂಡು ವರ್ಷದಲ್ಲಿ ಅನೇಕ ಪ್ರಯೋಗಗಳನ್ನು ಪ್ರದರ್ಶನಗಳನ್ನು ಮಾಡುತ್ತಾ ತಮ್ಮ ಕಲಾರಾಧನೆಯನ್ನು ಮಾಡುತ್ತಾ ಬರುತ್ತಿರುವುದು ಗಮನಾರ್ಹವಾದ ಸಂಗತಿಯಾಗಿದೆ. 80-90ರ ದಶಕದಲ್ಲಿ ಔದ್ಯೋಗಿಕ ವಲಯದಲ್ಲಿ ಉಂಟಾದಂತಹ ಕ್ರಾಂತಿಯ ಕಾರಣಕ್ಕೆ ಹಲವಾರು ಮಂದಿಗಳು ನಮ್ಮ ಊರುಗಳಿಂದ ಪಟ್ಟಣಗಳನ್ನು, ಬೇರೆ ಬೇರೆ ನಗರಗಳನ್ನು ಆಶ್ರಯಿಸಿ ಉದ್ಯೋಗ ವ್ಯವಹಾರಗಳನ್ನು ಮಾಡುತ್ತಾ ತಮ್ಮ ಜೀವನವನ್ನು ರೂಪಿಸಿಕೊಂಡರು. ಆದರೆ ಅವರೊಳಗಿದ್ದ ಕಲಾಪ್ರೇಮ, ಯಕ್ಷಗಾನದ ಬಗೆಗಿನ ಪ್ರೀತಿ ಒಂದಿನಿತು ಕಡಿಮೆಯಾಗಲಿಲ್ಲ. ತಾವು ಹೋದ ಸ್ಥಳದಲ್ಲಿಯೇ ಯಕ್ಷಗಾನ ಸಂಸ್ಥೆಗಳನ್ನು, ಸಂಘಗಳನ್ನು ಕಟ್ಟಿದರು, ಯಕ್ಷಗಾನವನ್ನು ಕಲಿತರು, ಬಣ್ಣ ಹಚ್ಚಿ ಕುಣಿದು ಸಂತೋಷವನ್ನು ಅನುಭವಿಸಿದರು. ಇದೆಲ್ಲ ಯಕ್ಷಗಾನದ…
ಉಡುಪಿ : ನಾಟಕಸ್ಪರ್ಧಾ ಸಮಿತಿ, ರಂಗಭೂಮಿ ಉಡುಪಿ ಇದರ 60ರ ಸಂಭ್ರಮದಲ್ಲಿ ದಿ. ಡಾ. ಟಿ. ಎಂ. ಎ. ಪೈ, ದಿ. ಎಸ್. ಎಲ್. ನಾರಾಯಣ ಭಟ್ ಮತ್ತು ಮಲ್ಪೆ ಮಧ್ವರಾಜ್ ಸ್ಮಾರಕ 45ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ -2024 ಇದರ ಉದ್ಘಾಟನಾ ಸಮಾರಂಭವು ದಿನಾಂಕ 04 ಡಿಸೆಂಬರ್ 2024ರಂದು ಉಡುಪಿಯ ಎಂ. ಜಿ. ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್.ಬಲ್ಲಾಳ್ ಮಾತನಾಡಿ ನಾಟಕ, ಯಕ್ಷಗಾನದಲ್ಲಿ ನಟಿಸುವುದು ಅಷ್ಟು ಸುಲಭವಲ್ಲ. ಸಿನೆಮಾದಂತೆ ಇಲ್ಲಿ ರೀ ಟೇಕ್ ಸಾಧ್ಯವಿಲ್ಲ. ನಾಟಕ ವೀಕ್ಷಣೆಗೆ ಪ್ರೇಕ್ಷಕರ ಕೊರತೆಯಿರುವುದು ಬೇಸರ ತರಿಸುತ್ತಿದೆ. ಜನರು ನಾಟಕ ವೀಕ್ಷಿಸಲು ಬಂದು ಪ್ರೇರೇಪಿಸಬೇಕು. ನಾಟಕ ಕಲೆ ಉಳಿಸಿ, ಬೆಳೆಸುವಲ್ಲಿ ನಾಟಕ ಕಲೆಗಾರರು ಮಾತ್ರ ಮುಖ್ಯವಾಗುವುದಿಲ್ಲ. ಪ್ರೇಕ್ಷಕ ವರ್ಗ ತುಂಬಾ ಪ್ರಾಮುಖ್ಯ ಪಡೆಯುತ್ತದೆ. ನಾವೆಲ್ಲರೂ ನಾಟಕ ಕಲೆ ಉಳಿಸುವಲ್ಲಿ ಕೈ ಜೋಡಿಸಬೇಕು.” ಎಂದರು. ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಗೋಪಾಲ್ ಸಿ.…
ಮಡಿಕೇರಿ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಸಕ್ತ ವರ್ಷದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಇಲಾಖೆ ಪ್ರಮುಖ ಕಾರ್ಯಕ್ರಮಗಳಾದ ಯುವಜನ ಮೇಳ ಹಾಗೂ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತೇಜಿಸುವ ದೃಷ್ಟಿಯಿಂದ ಪರಿಶಿಷ್ಟ ಜಾತಿ ಯುವ ಜನರಿಗೆ ಜಾನಪದ ಕಲಾ ಪ್ರಾಕಾರಗಳ ತರಬೇತಿ ಶಿಬಿರವನ್ನು 50 ಶಿಬಿರಾರ್ಥಿಗಳಿಗೆ ದಿನಾಂಕ 10 ಡಿಸೆಂಬರ್ 2024ರಿಂದ 17 ಡಿಸೆಂಬರ್ 2024ರವರೆಗೆ ಎಂಟು ದಿನಗಳ ಕಾರ್ಯಕ್ರಮವನ್ನು ನಿಯಮಾನುಸಾರ ಮಾರ್ಗಸೂಚಿಗಳನ್ವಯ ಆಯೋಜನೆ ಮಾಡಲು ಕೇಂದ್ರ ಕಚೇರಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಅದರಂತೆ ತರಬೇತಿ ಪಡೆಯಲು ಇಚ್ಚಿಸುವ ಪರಿಶಿಷ್ಟ ಜಾತಿ ಯುವ ಜನರಿಗೆ ತರಬೇತಿ ಶಿಬಿರಗಳ ಅರ್ಜಿ ಸಲ್ಲಿಸಲು ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಮಡಿಕೇರಿ ಈ ಕಚೇರಿಯಿಂದ ಪಡೆದು ದಿನಾಂಕ 08 ಡಿಸೆಂಬರ್ 2024ರೊಳಗೆ ಅರ್ಜಿಗಳನ್ನು ಈ ಕಚೇರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08272-2220986 ರಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು…
ಮಂಗಳೂರು: ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ (ರಿ) ಮಂಗಳೂರು ಇದರ ಆಶ್ರಯದಲ್ಲಿ ಜನವರಿ ತಿಂಗಳಲ್ಲಿ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ 04 ಜನವರಿ 2025ರಂದು ‘ವಚನ ಸಾಹಿತ್ಯ ಸಮ್ಮೇಳನ’ ಜರಗಲಿದ್ದು, ಆ ಪ್ರಯುಕ್ತ ‘ಸಮೂಹ ವಚನ ನೃತ್ಯ’ ಹಾಗೂ ‘ಸಮೂಹ ವಚನ ಗಾಯನ’ ಸ್ಪರ್ಧೆ ನಡೆಯಲಿದೆ. 25 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ‘ಸಮೂಹ ವಚನ ಗಾಯನ’ ಸ್ಪರ್ಧೆ ನಡೆಯಲಿದ್ದು, ತಂಡದಲ್ಲಿ 6 ಮಂದಿ ಮಹಿಳೆಯರು ಭಾಗವಹಿಸಬಹುದಾಗಿದೆ. ಅದೇ ರೀತಿ 18 ವರ್ಷ ಮೆಲ್ಪಟ್ಟ ಮಹಿಳೆಯರು ಹಾಗೂ ಪುರುಷರಿಗಾಗಿ ‘ಸಮೂಹ ವಚನ ನೃತ್ಯ ಸ್ಪರ್ಧೆ’ಯನ್ನು ಹಮ್ಮಿಕೊಳ್ಳಲಾಗಿದ್ದು, ಕನಿಷ್ಠ 6 ರಿಂದ ಗರಿಷ್ಠ 10 ಮಂದಿ ಸದಸ್ಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈ ಎರಡೂ ಸ್ಪರ್ಧೆಗಳಿಗೆ ಮೊದಲು ಬಂದ 20 ತಂಡಗಳಿಗೆ ಆದ್ಯತೆ ನೀಡಲಾಗುವುದು. ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನದ ಜೊತೆಗೆ ನಗದು ಬಹುಮಾನ ನೀಡಲಾಗುವುದು. ಸ್ಪರ್ಧೆಗೆ ಹೆಸರು ನೋಂದಾಯಿಸಲು 22 ಡಿಸೆಂಬರ್ 2024 ಕೊನೆಯ ದಿನ. ಹೆಚ್ಚಿನ…
ಪೆರ್ಡೂರು : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ‘ಹಿರಿಯೆರೊಟ್ಟಿಗೊಂಜಿ ದಿನ’ ಕಾರ್ಯಕ್ರಮವು ದಿನಾಂಕ 01 ಡಿಸೆಂಬರ್ 2024ರಂದು ಸಂಭ್ರಮದಿಂದ ಜರಗಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ 60ರಿಂದ 92 ವರ್ಷಗಳವರೆಗಿನ ನೂರಾರು ಹಿರಿಯ ನಾಗರಿಕರು ಪಾಲ್ಗೊಂಡು ಆಡಿ, ಹಾಡಿ, ನರ್ತಿಸಿ ಸಂಭ್ರಮಿಸಿದ್ದು ಈ ಕಾರ್ಯಕ್ರಮ ಅವರಲ್ಲಿ ಹೊಸಹುರುಪನ್ನು ನೀಡಿತು. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಐಸಿರಿ ಕೋಟ್ಯಾನ್ ಇವರ ನೃತ್ಯ ಪ್ರದರ್ಶನದೊಂದಿಗೆ ಆರಂಭವಾಯಿತು. ದೀಪ ಬೆಳಗಿ ಉದ್ಘಾಟಿಸಿದ ಗ್ರಾಮದ ಮುಖಂಡರೂ, ಸಮಿತಿಯ ಗೌರವಾಧ್ಯಕ್ಷರೂ ಆದ ಶಾಂತಾರಾಮ ಸೂಡ ಇವರು ಮಾತನಾಡಿ “ಇಂದಿನ ಕಾಲಮಾನದಲ್ಲಿ ವೃದ್ಧಾಪ್ಯ ಒಂದು ನೀರಸ ಜೀವನವಾಗಿ ಹೆಚ್ಚಿನವರು ಮನರಂಜನೆಯಿಂದ ವಂಚಿತರಾಗಿದ್ದಾರೆ. ಅಂತಹ ಹಿರಿಯರಿಗೆ ಇಂತಹ ಕಾರ್ಯಕ್ರಮಗಳು ಅತೀ ಅಗತ್ಯವಾಗಿದೆ. ಈ ಸಮಿತಿ ನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಹೊಸತನವನ್ನು ನೀಡುತ್ತಿರುವುದು ಸಂತಸದ ಸಂಗತಿ” ಎಂದರು. ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ ಅವರು ಮಾತನಾಡಿ “ತಮ್ಮ ಜೀವನವಿಡೀ…
ಬೆಂಗಳೂರು : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಮತ್ತು ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ.) ಇವುಗಳ ಸಹಯೋಗದಲ್ಲಿ 69 ಣೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ‘ಕರ್ನಾಟಕ ರಾಜ್ಯ ವಕೀಲರ ಸಾಹಿತ್ಯ ಸಮ್ಮೇಳನ – 2024’ವನ್ನು ದಿನಾಂಕ 07 ಡಿಸೆಂಬರ್ 2024ರಂದು ಬೆಳಿಗ್ಗೆ 9-00 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ವೃತ್ತಿಪರ ಮತ್ತು ನಿವೃತ್ತ ವಕೀಲರಿಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮಗಳು ನಡೆಯಲಿದೆ. ಜಾಗೃತಿ ಟ್ರಸ್ಟ್ ಮತ್ತು ರೋಟರಿ ಕ್ಲಬ್ ಇದರ ಅಧ್ಯಕ್ಷರಾದ ಶ್ರೀ ಬಿ. ನಾಗೇಶ್ ಇವರಿಂದ ಮೆರವಣಿಗೆಗೆ ಚಾಲನೆ, ಕವಯತ್ರಿ ಶ್ರೀಮತಿ ವಿಜಯಲಕ್ಷ್ಮೀ ದೊಡ್ಡಮನೆ ಇವರಿಂದ ಪುಸ್ತಕ ಮಳಿಗೆ ಉದ್ಘಾಟನೆ ಹಾಗೂ ಭಾರತೀಯ ಸ್ತ್ರೀ ಶಕ್ತಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಭಾಗ್ಯ ಸರವನ್ ಇವರಿಂದ ಭುವನೇಶ್ವರಿಗೆ ಪುಷ್ಪಾರ್ಚನೆ ನಡೆಯಲಿದೆ. ವಕೀಲರಾದ ಶ್ರೀ ನಂಜಪ್ಪ ಕಾಳೇಗೌಡ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ವಕೀಲರಾದ…
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 09-12-2024ರಂದು ಸಂಜೆ ಗಂಟೆ 6-25ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಶ್ರೀಗೌರೀ ಉಪಾಧ್ಯ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಶ್ರೀಗೌರೀಯು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಸಂಸ್ಕ್ರತ ಶಾಸ್ತ್ರ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿನಿಯಾಗಿದ್ದು, ತನ್ನ ಕಲಾ ಪ್ರಯಾಣವನ್ನು 2011ರಲ್ಲಿ ಕರ್ನಾಟಕ ಕಲಾಶ್ರೀ ಆಚಾರ್ಯ ಅಶೋಕ್ ಕುಮಾರ್ ಇವರಲ್ಲಿ ಪ್ರಾರಂಭಿಸಿದಳು. ಕರ್ನಾಟಕ ವಿಶ್ವವಿದ್ಯಾಲಯವು ನಡೆಸುವ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, 2024ರಲ್ಲಿ ರಂಗಪ್ರವೇಶವನ್ನೂ ಮಾಡಿರುತ್ತಾಳೆ. ನಾಟ್ಯಗುರುಗಳ ಮಾರ್ಗದರ್ಶನದಲ್ಲಿ ಭರತನಾಟ್ಯದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಬಾಲ ಭವನ, ಬೆಂಗಳೂರು ಗಣೇಶೋತ್ಸವ ಇತ್ಯಾದಿಗಳು ಉಲ್ಲೇಖನೀಯ.
ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ 80ರ ಸಂಭ್ರಮ ಕಾರ್ಯಕ್ರಮ, ಕೀರಿಕ್ಕಾಡು ಪುರಸ್ಕಾರ ಪ್ರದಾನ ಹಾಗೂ ಆರೋಗ್ಯ ತರಬೇತಿ ಶಿಬಿರ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ದಿನಾಂಕ 01 ಡಿಸೆಂಬರ್ 2024ರ ಭಾನುವಾರ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಇವರಿಗೆ ಕೀರಿಕ್ಕಾಡು ಪುರಸ್ಕಾರವನ್ನು ಪ್ರದಾನಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಡಿ. ರಾಮಣ್ಣ ಮಾಸ್ತರ್ ಅಭಿನಂದನಾ ಭಾಷಣ ಮಾಡಿದರು. ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ರಮಾನಂದ ಬನಾರಿ, ಕಾರ್ಯದರ್ಶಿ ವಿಶ್ವವಿನೋದ ಬನಾರಿ, ನಂದಕಿಶೋರ ಬನಾರಿ ಮತ್ತಿತರರು ಉಪಸ್ಥಿತರಿದ್ದರು. ನಮಿತ ಬೆಳ್ಳಿಪ್ಪಾಡಿ ಪ್ರಾರ್ಥನೆ ಹಾಡಿ, ಪೂಜಾಶ್ರೀ ದೇಲಂಪಾಡಿ ಸ್ವಾಗತಿಸಿ, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿ, ರಮಾನಂದ ರೈ ವಂದಿಸಿದರು. ಬಳಿಕ ಹಿರಿಯ ಯಕ್ಷಗಾನ ಕಲಾವಿದರ ನೇತೃತ್ವದಲ್ಲಿ ಶ್ರೀರಾಮ ದರ್ಶನ…
ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ- 82’ರ ಕಾರ್ಯಕ್ರಮ ದಿನಾಂಕ 05 ಡಿಸೆಂಬರ್ 2024ರಂದು ತೆಕ್ಕಟ್ಟೆ ಕನ್ನುಕೆರೆಯ ನವಶಕ್ತಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಧುವರರಾದ ಸತ್ಯಶ್ರೀ ಹಾಗೂ ಅರುಣ್ ಇವರನ್ನು ಅಭಿವಂದಿಸಿದ ಪ್ರಸಿದ್ಧ ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ ಮಾತನಾಡಿ “ಸಾಂಸ್ಕೃತಿಕ ಕಾರ್ಯಕ್ರಮಗಳು ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಪಸರಿಸಿದಾಗ ಸಾಮಾಜಿಕವಾಗಿ ಬೆಳೆಯುತ್ತದೆ. ಸಾಂಸ್ಕೃತಿಕ ಸ್ಪರ್ಷ ಜೀವನಕ್ಕೆ ಬಹು ಮುಖ್ಯ. ರಾಗ, ತಾಳ, ಲಯಗಳ ಸಮ್ಮಿಳಿತದೊಂದಿಗೆ ಸಾಂಸ್ಕೃತಿಕ ಪಕ್ವತೆಯನ್ನು ಪಡೆಯುವುದು ಹೇಗೋ, ಅದೇ ತರಹ ಜೀವನದಲ್ಲಿಯೂ ಕಷ್ಟ, ಸುಖಗಳ ಸಾಮ್ಯತೆಯನ್ನು ಸಾಧಿಸಿ ಪಕ್ವತೆಯನ್ನು ಸಾಧಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜೀವನದಲ್ಲಿ ಸಮತೋಲನವನ್ನು ಸಾಧಿಸುವುದೇ ಜೀವನಕ್ಕೆ ಬಹುಮುಖ್ಯ.” ಎಂದರು. ತೆಕ್ಕಟ್ಟೆ ವೆಂಕಟೇಶ ಹತ್ವಾರ್, ಶ್ರೀಮತಿ ಕಲಾವತಿ, ಇಂದಿರಾ, ಶ್ರೀನಿಧಿ ಹತ್ವಾರ್, ಗುರು ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ಸ್ಕಂದಾ ಉರಾಳ್, ಪಂಚಮಿ ವೈದ್ಯ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಬಳಿಕ ‘ಯಕ್ಷ ರಸ ಗಾಯನ’ ರಂಗದಲ್ಲಿ ಸಂಪನ್ನಗೊಂಡಿತು.