Subscribe to Updates
Get the latest creative news from FooBar about art, design and business.
Author: roovari
ಡಾ. ಎ. ಎನ್. ಮೂರ್ತಿರಾವ್ ಎಂದೇ ಪ್ರಸಿದ್ಧರಾದವರು ಕನ್ನಡದ ಖ್ಯಾತ ವಿಮರ್ಶಕ, ಸಾಹಿತಿ ಹಾಗೂ ಶ್ರೇಷ್ಠ ಪ್ರಬಂಧಕಾರ ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾಯರು. 103 ವರ್ಷಗಳ ತುಂಬ ಜೀವನ ನಡೆಸಿ ಶತಾಯುಷಿ ಎಂದು ಕರೆಸಿಕೊಂಡವರು. 16 ಜೂನ್ 1900ರಲ್ಲಿ ಎಂ. ಸುಬ್ಬರಾವ್ ಮತ್ತು ಪುಟ್ಟಮ್ಮ ದಂಪತಿಗಳ ಮಗನಾಗಿ ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು ಎಂಬಲ್ಲಿ ಜನಿಸಿದರು. ಇವರ ಬಾಲ್ಯದ ದಿನಗಳು ಮೇಲುಕೋಟೆ, ನಾಗಮಂಗಲಗಳಲ್ಲಿ ಕಳೆಯಿತು. 1913ರಲ್ಲಿ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲ್ನಲ್ಲಿ ಶಾಲಾ ಶಿಕ್ಷಣ ಮುಗಿಸಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ. ಎ. ಮತ್ತು ಎಂ.ಎ. ಪದವಿಯನ್ನು ಪಡೆದರು. 1924ರಲ್ಲಿ ಮಹಾರಾಜ ಕಾಲೇಜಿನ ಟ್ಯೂಟರ್ ಆಗಿ ಸೇರುವ ಮೂಲಕ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಮುಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಮುಂದೆ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಭಡ್ತಿ ಹೊಂದಿ ಸೇವೆ ಸಲ್ಲಿಸಿ ಅಲ್ಲಿಂದ ಮುಂದೆ ಶಿವಮೊಗ್ಗದ ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. 1943ರಲ್ಲಿ ಆಕಾಶವಾಣಿಯ ನಿರ್ದೇಶಕರಾದರು. ಚಿತ್ರದುರ್ಗ ಕಾಲೇಜಿನಲ್ಲಿ ಮುಖ್ಯಸ್ಥರಾಗಿ ಅನನ್ಯ ಸೇವೆ…
ಮಂಗಳೂರು : ಭರತಾಂಜಲಿ ಕೊಟ್ಟಾರ ಆಯೋಜಿಸಿದ ಎಂ. ಆರ್. ಪಿ. ಎಲ್. ಸಂಸ್ಥೆಯ ನಿವೃತ್ತ ಜನರಲ್ ಮ್ಯಾನೇಜರ್ ವಿ. ಎನ್. ಎಸ್. ವೆಂಕಟರಮಣ ಮತ್ತು ಪದ್ಮ ರಂಜಿನಿ ದಂಪತಿಗಳ ಸುಪುತ್ರಿ ಗುರುಗಳಾದ ವಿದುಷಿ ಪ್ರತಿಮಾ ಶ್ರೀಧರ್, ಶ್ರೀಧರ ಹೊಳ್ಳ ಮತ್ತು ವಿದುಷಿ ಪ್ರಕ್ಷಿಲ ಜೈನ್ ಇವರುಗಳ ಶಿಷ್ಯೆ ವಿ. ಹರಿಣಿ ಇವರ ರಂಗಪ್ರವೇಶ ಕಾರ್ಯಕ್ರಮ ದಿನಾಂಕ 14 ಜೂನ್ 2025 ರಂದು ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಮ್. ಆರ್. ಪಿ. ಎಲ್. ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಜಾರ್ ಮಾತನಾಡಿ “ನೃತ್ಯ ಕಲಾವಿದರು ಸಮಾಜಕ್ಕೆ ನೃತ್ಯದ ಮೂಲಕ ತಮ್ಮ ಸಂದೇಶವನ್ನು ತಲುಪಿಸುತ್ತಾರೆ ನೃತ್ಯವು ಕೇವಲ ಒಂದು ಕಲೆಯಲ್ಲ ಅದು ಸಮಾಜದ ಪ್ರತಿಬಿಂಬವಾಗಿದೆ” ಎಂದು ನುಡಿದರು. ಎಂ. ಆರ್. ಪಿ. ಎಲ್. ವ್ಯವಸ್ಥಾಪಕ ನಿರ್ದೇಶಕರಾದ ಮುಂಡ್ಕೂರು ಶಾಮ್ ಪ್ರಸಾದ್ ಕಾಮತ್ ಮಾತನಾಡಿ “ನೃತ್ಯ ಕಲಾವಿದರು ತಮ್ಮ ಕಲೆಯ…
ಬೆಂಗಳೂರು : ಕರ್ನಾಟಕ ಜಾನಪದ ಅಕಾಡೆಮಿಯು 2024ನೇ ಸಾಲಿನಲ್ಲಿ 01 ಜನವರಿ 2024ರಿಂದ 31 ಡಿಸೆಂಬರ್ 2024ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ (ತಾಂತ್ರಿಕ ಹಾಗೂ ಪೂರ್ವಭಾವಿ ಪುಟಗಳನ್ನು ಹೊರತುಪಡಿಸಿ) ಕನಿಷ್ಠ 150 ಪುಟಗಳಿಗೂ ಮೇಲ್ಪಟ್ಟಿರುವಂತೆ ಜನಪದ ಗದ್ಯ, ಜನಪದ ಪದ್ಯ, ಜನಪದ ವಿಚಾರ-ವಿಮರ್ಶೆ-ಸಂಶೋಧನೆ, ಜನಪದ ಸಂಕೀರ್ಣ ಪ್ರಕಾರಗಳ ಕುರಿತು ಅತ್ಯುತ್ತಮ ಜಾನಪದ ಕೃತಿಗಳಿಗೆ ಪುಸ್ತಕ ಬಹುಮಾನ ಯೋಜನೆಯಡಿಯಲ್ಲಿ ಆಯ್ಕೆಮಾಡಲು ಜಾನಪದ ಕೃತಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ. ಆಸಕ್ತ ಲೇಖಕರು, ಪ್ರಕಾಶಕರು ಅಥವಾ ಸಂಪಾದಕರು ತಮ್ಮ ಒಂದು ಕೃತಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002 ಗೆ ದಿನಾಂಕ 30 ಜೂನ್ 2025ರೊಳಗಾಗಿ ತಲುಪುವಂತೆ ಖುದ್ದಾಗಿ, ಕೊರಿಯರ್ ಅಥವಾ ಅಂಚೆ ಮೂಲಕ ಸಲ್ಲಿಸಬಹುದು.
ಮೂಲ್ಕಿ : ಹೊಸ ಅಂಗಣ ಪ್ರಕಾಶನ ಮೂಲ್ಕಿ ಆಯೋಜಿಸುವ ಲೇಖಕ ಹರಿಶ್ಚಂದ್ರ ಪಿ. ಸಾಲಿಯಾನ್ ಇವರ “ನುಡಿಮುತ್ತು” ಕೃತಿಲೋಕರ್ಪಣಾ ಸಮಾರಂಭವು ದಿನಾಂಕ 18 ಜೂನ್ 2025ನೇ ಬುಧವಾರ ಸಂಜೆ ಗಂಟೆ 5-00ಕ್ಕೆ ಮೂಲ್ಕಿಯ ಸ್ವಾಗತ್ ಹೊಟೇಲ್ ಸಭಾಂಗಣದಲ್ಲಿ ನಡೆಯಲಿದೆ. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ , ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇದರ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಕೃತಿ ಲೋಕಾರ್ಪಣೆಗೊಳಿಸಲಿರುವರು. ಮುಖ್ಯ ಅತಿಥಿಗಳಾಗಿ ಮೂಲ್ಕಿಯ ಖ್ಯಾತ ವೈದ್ಯರಾದ ಡಾ. ಅರುಣ್ ಕುಡ್ವ, ಮೂಲ್ಕಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ನಿಶಾಂತ್ ಶೆಟ್ಟಿ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷರಾದ ಶ್ರೀ ವಾಮನ ಕೋಟ್ಯಾನ್, ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆ ಮೂಲ್ಕಿ ಇದರ ಸಂಚಾಲಕರಾದ ಶ್ರೀ ಹರೀಂದ್ರ ಸುವರ್ಣ, ಕಥಾಬಿಂದು ಸಂಸ್ಥೆ ಮಂಗಳೂರು ಇದರ ಮಾಲಿಕರಾದ ಶ್ರೀ ಪಿ. ವಿ.…
ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಶಾಖೆ, ಆರ್ಟ್ ಕೆನರಾ ಟ್ರಸ್ಟ್ ಮತ್ತು ಚಿರಂತನ ಚಾರಿಟೇಬಲ್ ಟ್ರಸ್ಟ್ ಇದರ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ಕರ್ನಾಟಕದ ಸಂಗೀತ ಪರಂಪರೆ ಸರಣಿ 7ರಲ್ಲಿ ವಿಶ್ವ ಸಂಗೀತ ದಿನದಂದು ಬೈಠಕ್ @ ಕೊಡಿಯಾಲ್‌ಗುತ್ತು ಸಂಗೀತ ಕಛೇರಿಯನ್ನು ದಿನಾಂಕ 21 ಜೂನ್ 2025ರಂದು ಸಂಜೆ 5-30 ಗಂಟೆಗೆ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಂದೂಸ್ತಾನಿ ಗಾಯಕಿ ವಿಭಾ ಎಸ್. ನಾಯಕ್ ಇವರ ಹಾಡುಗಾರಿಕೆಗೆ ರಾಜೇಶ್ ಭಾಗವತ್ ತಬಲಾ ಹಾಗೂ ಕುಮಾರಿ ಮೇಧಾ ಭಟ್ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಸ್ವಾತಂತ್ರ್ಯಪ್ರಿಯರ ಮನಸ್ಸನ್ನು ಪ್ರಚೋದಿಸುವ ಕಮ್ಯೂನಿಸ್ಟ್ ಪಕ್ಷವು ನಡೆಸಿದ ಲೋಕೋತ್ತರ ಹೋರಾಟಗಳಲ್ಲಿ ಕಯ್ಯೂರು ರೈತ ಹೋರಾಟವೂ ಒಂದು. ಅಲ್ಲಿನ ರೈತಾಪಿ ಸಂಗಾತಿಗಳಾದ ಮಠತ್ತಿಲ್ ಅಪ್ಪು, ಕೋಯಿತ್ತಾಟಿಲ್ ಚಿರುಕಂಡನ್, ಪೊಡೋರ ಕುಂಞಂಬು ನಾಯರ್ ಮತ್ತು ಅಬೂಬಕ್ಕರನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತವು 1943 ಮಾರ್ಚ್ 29ರಂದು ಗಲ್ಲಿಗೇರಿಸಿತು. ಕಯ್ಯೂರು ತೇಜಸ್ವಿನಿ ನದಿಯ ತೀರವು ಈ ಕ್ರಾಂತಿಕಾರಿಗಳ ಸಮರ ಗೀತೆಯನ್ನು ಇಂದಿಗೂ ಹಾಡುತ್ತಿದೆ. ಕಯ್ಯೂರಿನ ಚರಿತ್ರೆಯು ಕಾದಂಬರಿಯಾಗಿ, ಕ್ರಾಂತಿಗೀತೆಯಾಗಿ, ಚಲನಚಿತ್ರವಾಗಿ ಜನರ ನಡುವೆ ಹರಿದಾಡುತ್ತಿದೆ. ಭಾರತ ದೇಶದ ಸ್ವಾತಂತ್ರ್ಯ ಹೋರಾಟದ ಪುಟಗಳಲ್ಲಿ ಕಯ್ಯೂರು ಹೋರಾಟಕ್ಕೆ ದೊರಕಬೇಕಾದ ಸ್ಥಾನ ದೊಡ್ಡದು. ಸ್ವಾತಂತ್ರ್ಯಕ್ಕಾಗಿ ನಡೆಸಿದ ಕಯ್ಯೂರು ಸಮರವೇ ಈ ಕಾದಂಬರಿಯ ವಸ್ತು. ಈ ಹೋರಾಟಕ್ಕೆ ಸಮೀಪದ ನಿರೀಕ್ಷಕರಾಗಿದ್ದ ಕನ್ನಡ ಪ್ರಗತಿಶೀಲ ಲೇಖಕ ನಿರಂಜನರು ಬ್ರಿಟಿಷ್ ಏಕಾಧಿಪತ್ಯದ ಕರಾಳ ವ್ಯವಸ್ಥೆಯ ವಿರುದ್ಧ ದಂಗೆಯೆದ್ದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ನಾಲ್ವರು ಹೋರಾಟಗಾರರ ವೀರಗಾಥೆಯನ್ನು ಸರಳ ಭಾಷೆಯಲ್ಲಿ, ಓದುಗರ ಕುತೂಹಲವನ್ನು ಕೆರಳಿಸುವಂತೆ, ದೇಶಪ್ರೇಮ ಹಾಗೂ ಕ್ರಾಂತಿಯನ್ನು ಬಡಿದೆಬ್ಬಿಸುವಂತೆ ವಿವರಿಸಿದ್ದಾರೆ. ಈ ಕಾದಂಬರಿಯ ಮುಖ್ಯ…
ಬೆಂಗಳೂರು : ಸಪ್ತಕ ಬೆಂಗಳೂರು ಇದರ ವತಿಯಿಂದ ‘ಗಾಯನ ಸನ್ಮಾನ ವಂದನ’ ಕಾರ್ಯಕ್ರಮವನ್ನು ದಿನಾಂಕ 21 ಜೂನ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಸೇವಾ ಸದನದಲ್ಲಿ ಆಯೋಜಿಸಲಾಗಿದೆ. ಶ್ರೀಮತಿ ಅರ್ಚನ ಶೆಣೈ ಇವರ ಹಾಡುಗಾರಿಕೆಗೆ ಯೋಗೀಶ್ ಭಟ್ ತಬಲಾ ಮತ್ತು ವಿಘ್ನೇಶ್ ಭಾಗವತ್ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ತಬಲಾ ವಾದಕ ಜಿ.ಜಿ. ಹೆಗಡೆ ಇವರನ್ನು ಸನ್ಮಾನಿಸಲಾಗುವುದು. ಡಾ. ಗಜಾನನ್ ಸಭಾಹಿತ್ ಇವರಿಂದ ಕೊಳಲು ಹಾಗೂ ಶ್ರೀಮತಿ ಸುಮಾ ಹೆಗ್ಡೆ ಇವರಿಂದ ಸಂತೂರ್ ದ್ವಂದ್ವ ವಾದನಕ್ಕೆ ಗುರುಮೂರ್ತಿ ವೈದ್ಯ ತಬಲಾ ಸಾಥ್ ನೀಡಲಿದ್ದಾರೆ.
ಉಡುಪಿ : ಬೆಂಗಳೂರಿನ ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ಆಯೋಜಿಸಿದ `ರಂಗ ದಿಬ್ಬಣ- 2025 ‘ ಕಾರ್ಯಕ್ರಮವು ದಿನಾಂಕ 09 ಜೂನ್ 2025ರ ಸೋಮವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ಸಭಾಂಗಣದಲ್ಲಿ ನಡೆಯಿತು. ಸಮಾರಂಭದಲ್ಲಿ ನಾಡು, ನುಡಿ, ನೆಲ, ಜಲ, ಕಲೆ ಭಾಷೆ, ಸಂಸ್ಕೃತಿ ಹಾಗೂ ಸಮಾಜ ಸೇವೆ ಮಾಡಿದ ನಾಡಿನ ಸಾಧಕರಿಗೆ ನೀಡುವ `ಕರುನಾಡ ಸೇವಾ ಕಣ್ಮಣಿ’ ರಾಜ್ಯ ಪ್ರಶಸ್ತಿಯನ್ನು ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರಿಗೆ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ, ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ, ಅಹಲ್ಯಾ ಫೌಂಡೇಶನ್ ಇದರ ಸಂಸ್ಥಾಪಕಾಧ್ಯಕ್ಷೆಯಾದ ಮಹಾಲಕ್ಷ್ಮಿ, ಸಂಸ್ಥೆಯ ಗೌರವಾಧ್ಯಕ್ಷರಾದ ಡಾ. ಕೆಂಚನೂರು ಶಂಕರ, ಮಂಗಳೂರು ಶ್ರೀಮಾತಾ ಅನ್ನಪೂರ್ಣ ಸಿಂಗ್, ಡಾ. ಮಂಜುಳಾ ಮಹಾದೇವ್, ಡಾ. ಅನು ಮೊದಲಾದವರು ಉಪಸ್ಥಿತರಿದ್ದರು. ಡಾ.ತಲ್ಲೂರು ಶಿವರಾಮ ಶೆಟ್ಟಿ ಪ್ರಸ್ತುತ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ, ರಂಗಭೂಮಿ ಉಡುಪಿ…
ಬ್ರಹ್ಮಾವರ : ಬಡಗುತಿಟ್ಟಿನ ಪ್ರಸಿದ್ಧ ಚಂಡೆ ವಾದಕರಾದ ನೀಲಾವರ ಸೂರ್ಯ ದೇವಾಡಿಗರು ದಿನಾಂಕ 14 ಜೂನ್ 2025ರಂದು ನಿಧನ ಹೊಂದಿದರು. ಅವರಿಗೆ 56ವರ್ಷ ವಯಸ್ಸಾಗಿತು. ಮಡಮಕ್ಕಿ, ಅಮೃತೇಶ್ವರಿ, ಮೇಗರವಳ್ಳಿ, ಹಾಲಾಡಿ ಮತ್ತು ದೀರ್ಘಕಾಲ ಮಂದಾರ್ತಿ ಮೇಳ ಹೀಗೆ ಒಟ್ಟು ಮೂರು ದಶಕಗಳ ಕಾಲ ಚಂಡೆವಾದಕರಾಗಿ ಸೇವೆಗೈದಿದ್ದರು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಎ. ಪಿ. ಪಾಠಕರ ಶಿಷ್ಯರಾಗಿ ಚಂಡೆ, ಮದ್ದಲೆ ವಾದನ ನುಡಿಸುವುದನ್ನು ಕರಗತ ಮಾಡಿಕೊಂಡಿದ್ದರು. ಜೊತೆಗೆ ಕುಲಕಸುಬಾದ ವಾದ್ಯ ನುಡಿಸುವುದನ್ನು, ಮುಖ್ಯವಾಗಿ ನೀಲಾವರ ದೇವಳದಲ್ಲಿ, ತನ್ನ ಪ್ರವೃತ್ತಿಯಾಗಿ ಸ್ವೀಕರಿಸಿ ಅದರಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ವರ್ಷದ ಹಿಂದೆ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಆಗಿದ್ದು, ಈ ತಿರುಗಾಟದಲ್ಲಿ ಒಂದು ತಿಂಗಳು ಮಾತ್ರ ಮಾರಣಕಟ್ಟೆ ಮೇಳದಲ್ಲಿ ಚಂಡೆವಾದಕರಾಗಿ ಸೇವೆ ಸಲ್ಲಿಸಿದ್ದರು. ಸರಳ ಸಜ್ಜನಿಕೆಯ ಇವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಕಲಾಭಿಮಾನಿಗಳನ್ನು ಅಗಲಿದ್ದಾರೆ..
ಉಡುಪಿ : ಮಂಗಳೂರಿನ ಕಲ್ಲಚ್ಚು ಪ್ರಕಾಶನ ಮತ್ತು ಮಂಡ್ಯದ ಶ್ರೀರಾಮ ಪ್ರಕಾಶನ ಇವರ ಸಂಯುಕ್ತ ಆಶ್ರಯದಲ್ಲಿ ‘ಸುಪ್ತದೀಪ್ತಿ’ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಗಿರುವ ಜ್ಯೋತಿ ಮಹಾದೇವ್ ಇವರ ಪ್ರಬಂಧ ಮತ್ತು ಕವನ ಸಂಕಲನಗಳ ಅನಾವರಣ ದಿನಾಂಕ 21 ಜೂನ್ 2025ರಂದು ಅಪರಾಹ್ನ ಗಂಟೆ 3-30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ‘ಅಕ್ಷರ ಲೋಕದ ನೋಟಗಳು’ ಪ್ರಬಂಧ ಸಂಕಲನವನ್ನು ಆರ್.ಆರ್.ಸಿ. ಸಹಸಂಶೋಧಕ ಡಾ. ಅರುಣ ಕುಮಾರ್ ಎಸ್.ಆರ್. ಹಾಗೂ ಕವನ ಸಂಕಲನ ‘ದೀಪ ನಕ್ಕಿತು’ ಕೃತಿಯನ್ನು ಪ್ರಸಿದ್ಧ ಕಾದಂಬರಿಕಾರ ಎಂ.ಆರ್. ದತ್ತಾತ್ರಿ ಇವರು ಬಿಡುಗಡೆಗೊಳಿಸುವರು. ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಇವರು ಅಭ್ಯಾಗತರಾಗಿ ಆಗಮಿಸಲಿದ್ದು, ಮಂಗಳೂರಿನ ಕಲ್ಲಚ್ಚು ಪ್ರಕಾಶನದ ಪ್ರಕಾಶಕ, ಸಾಹಿತಿ ಮಹೇಶ ಆರ್. ನಾಯಕ್ ಮತ್ತು ಶ್ರೀರಾಮ ಪ್ರಕಾಶನದ ಅಚ್ಯುತಾನಂದ ಎಂ.ಸಿ ಉಪಸ್ಥಿತರಿರುವರು. ಅಮೇರಿಕ ಕನ್ನಡಿತಿ ಕಥೆಗಾರ್ತಿ ತ್ರಿವೇಣಿ ಶ್ರೀನಿವಾಸ ರಾವ್ ನಿರೂಪಿಸುವರು.…