Subscribe to Updates

    Get the latest creative news from FooBar about art, design and business.

    What's Hot

    ಬೆದ್ರಂಪಳ್ಳ ಪರಿಶ್ರಮ ಗಾರ್ಡನ್ಸ್ ನಲ್ಲಿ ಆಷಾಢ ಸಾಹಿತ್ಯ ಸಂಭ್ರಮಾಚರಣೆ

    July 28, 2026

    ವಿಶೇಷ ಲೇಖನ | ಬೇಂದ್ರೆಯವರ ಜ್ಞಾನ ಪುತ್ರ ಡಾ. ವಾಮನ ದತ್ತಾತ್ರೇಯ ಬೇಂದ್ರೆ

    July 28, 2026

    ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ

    July 28, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ
    Awards

    ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ

    July 28, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಿನ್ನಿಗೋಳಿ : ‘ಯುಗಪುರುಷ’ದ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ, ಕೊ. ಅ. ಉಡುಪ ಪ್ರಶಸ್ತಿ ಪ್ರದಾನ, ವೇದವಿದ್ವಾಂಸರ ಸಂಮಾನ, ಕೃತಿ ಬಿಡುಗಡೆ ಸಮಾರಂಭ, ವಿದ್ಯಾರ್ಥಿವೇತನ ವಿತರಣೆಯು ದಿನಾಂಕ 24 ಜುಲೈ 2026ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ “ಯುಗಪುರುಷ ಸಂಸ್ಥೆಯು ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿರುವ ಸೇವಾ ಕಾರ್ಯಕ್ರಮಗಳು ಅಭಿನಂದನೀಯ” ಎಂದರು. ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ದ. ಕ. ಜಿಲ್ಲಾ ಕ.ಸಾ.ಪ. ಮಾಜೀ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರರವರು ಸಂಸ್ಮರಣ ಭಾಷಣ ಮಾಡಿದರು. ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಪಿ.ವಿ. ಪ್ರದೀಪ್‌ಕುಮಾರ್ ಕಥಾಬಿಂದು ರಚಿತ ‘ಅದಿತಿ’ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರುರವರು ಬಿಡುಗಡೆಗೊಳಿಸಿದರು.

    ಕಾರ್ಯಕ್ರಮದಲ್ಲಿ ಸಾಹಿತಿ ಚಿದಂಬರ ಬೈಕಂಪಾಡಿಯವರಿಗೆ ಕೊ. ಅ. ಉಡುಪ ಪ್ರಶಸ್ತಿ ನೀಡಿ ಹಾಗೂ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ರಾಮದಾಸ ಆಚಾರ್ಯ ಇವರನ್ನು ಕಮಲಾಕ್ಷಿ ಉಡುಪ ಸ್ಮರಣಾರ್ಥ ವೇದ ವಿದ್ವಾಂಸರ ನೆಲೆಯಲ್ಲಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಮುಂಬಯಿ ಉದ್ಯಮಿಗಳಾದ ತಾಳಿಪಾಡಿಗುತ್ತು ರಾಮಚಂದ್ರ ಶೆಟ್ಟಿ, ಪೃಥ್ವಿರಾಜ್ ಆಚಾರ್ಯ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಮಂಗಳೂರಿನ ನೆಲ್ಲಿಕಾಯಿ ರಾಘವೇಂದ್ರ ಮಠದ ಅರ್ಚಕ ಜಯರಾಮ್ ಉಡುಪ, ಸಾಹಿತಿ ಡಾ. ಹರೀಶ್ಚಂದ್ರ ಪಿ ಸಾಲ್ಯಾನ್, ಕೃತಿಕಾರ ಪಿ.ವಿ. ಪ್ರದೀಪ್‌ಕುಮಾರ್, ಡಾ. ನಯನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು. ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿ, ಅನುಷಾ ಕರ್ಕೇರ ಹಾಗೂ ಪು. ಗುರುಪ್ರಸಾದ ಭಟ್ ಸನ್ಮಾನ ಪತ್ರ ವಾಚಿಸಿ, ಶರತ್ ಶೆಟ್ಟಿ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ. ಜಿಲ್ಲೆಯ ಸಹಕಾರದೊಂದಿಗೆ ಖ್ಯಾತ ಕಲಾವಿದರಿಂದ ಯಕ್ಷಗಾನ ನಡೆಯಿತು.

    award baikady Book release commemoration felicitation roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಸಾಧನ ಸಂಗಮದ ಅನುಪಮ ‘ನೃತ್ಯ ಸಮಾಗಮ’ 2026
    Next Article ವಿಶೇಷ ಲೇಖನ | ಬೇಂದ್ರೆಯವರ ಜ್ಞಾನ ಪುತ್ರ ಡಾ. ವಾಮನ ದತ್ತಾತ್ರೇಯ ಬೇಂದ್ರೆ
    roovari

    Add Comment Cancel Reply


    Related Posts

    ಬೆದ್ರಂಪಳ್ಳ ಪರಿಶ್ರಮ ಗಾರ್ಡನ್ಸ್ ನಲ್ಲಿ ಆಷಾಢ ಸಾಹಿತ್ಯ ಸಂಭ್ರಮಾಚರಣೆ

    July 28, 2026

    ವಿಶೇಷ ಲೇಖನ | ಬೇಂದ್ರೆಯವರ ಜ್ಞಾನ ಪುತ್ರ ಡಾ. ವಾಮನ ದತ್ತಾತ್ರೇಯ ಬೇಂದ್ರೆ

    July 28, 2026

    ಸಾಧನ ಸಂಗಮದ ಅನುಪಮ ‘ನೃತ್ಯ ಸಮಾಗಮ’ 2026

    July 28, 2026

    ಡಾ. ಕೃಷ್ಣಪ್ರಸಾದ್ ಬಾಳಿಕೆ ಇವರ ‘ಕೆನಡಾ ಕಥನ’ ಲೇಖನ ಸಂಕಲನ ಲೋಕಾರ್ಪಣೆ

    July 27, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.