ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಸಂಯುಕ್ತ ಆಶ್ರಯದಲ್ಲಿ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ–2026’ವನ್ನು ದಿನಾಂಕ 26 ಜುಲೈ 2026ರಂದು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಸಿ. ಸೋಮಶೇಖರ್ ಇವರು ಭಾಗವಹಿಸಲಿದ್ದಾರೆ.
ಭರವಸೆಯ ಬೆಳಕು, ಭರವಸೆಯ ಶಿಕ್ಷಣ ರತ್ನ, ರಾಜಶ್ರೀ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಸದ್ಭವನಾ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ಸದ್ಭವನಾ ರಾಷ್ಟ್ರೀಯ ಪ್ರಶಸ್ತಿ 2026, ನಾಡೋಜ ಡಾ. ಕಯ್ಯಾರ ಸದ್ಭವನಾ ರಾಷ್ಟ್ರೀಯ ಪ್ರಶಸ್ತಿ -2026, ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್ -2026, ಸಮಾಜ ಸೇವಾ ರತ್ನ ಮತ್ತು ಗಡಿನಾಡು ಕಾಸರಗೋಡು ಕನ್ನಡ ಭವನದ ಗೌರವಾರ್ಪಣೆ ಪ್ರದಾನ ಮಾಡಲಾಗುವುದು. ಸಮೂಹ ಶಾಸ್ತ್ರೀಯ ನೃತ್ಯ, ಸಮೂಹ ನೃತ್ಯ, ಸಮೂಹ ಜಾನಪದ ನೃತ್ಯ, ಸಮೂಹ ನೃತ್ಯ ರೂಪಕ, ಯಕ್ಷಗಾನ, ಕಥಕ್ಕಳಿ, ಡೊಳ್ಳು ಕುಣಿತ, ತಮಟೆ, ಪೂಜಾ ಕುಣಿತ, ಪಟ ಕುಣಿತ ಮತ್ತು ಕಲಾ ಪ್ರದರ್ಶನ ಪ್ರಸ್ತುತಗೊಳ್ಳಲಿದೆ.

