ಎಡನೀರು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಷಷ್ಠಿ ಚಾತುರ್ಮಾಸ್ಯ ವೃತಾಚರಣೆ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ದಿನಾಂಕ 21 ಸೆಪ್ಟೆಂಬರ್ 2026ರಂದು ಅಪರಾಹ್ನ 3-00 ಗಂಟೆಗೆ ಶ್ರೀ ಎಡನೀರು ಮಠದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಡಾ. ರಮಾನಂದ ಬನಾರಿಯವರ ‘ಬೆಟ್ಟದ ಬುಡದಲ್ಲಿರುವ ಬಂಡಿ’ ಕವನ ಸಂಕಲನ ಬಿಡುಗಡೆಗೊಳ್ಳಲಿದೆ.
ಡಾ. ಪ್ರಮೀಳಾ ಮಾಧವ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಡಾ. ವಸಂತ ಕುಮಾರ್ ಪೆರ್ಲ ಇವರು ಉದ್ಘಾಟನೆ ಮಾಡಲಿದ್ದಾರೆ. ಡಾ. ಧನಂಜಯ ಕುಂಬ್ಳೆ ಇವರು ಕೃತಿ ಪರಿಚಯ ಮಾಡಲಿದ್ದು, ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮತ್ತು ಡಾ. ರತ್ನಾಕರ ಮಲ್ಲಮೂಲೆ ಇವರಿಂದ ಕಾವ್ಯ ಚಿಂತನ ಹಾಗೂ ಪ್ರಮೀಳಾ ಚುಳ್ಳಿಕಾನ, ಲಕ್ಷ್ಮೀ ವಿ ಭಟ್ ತಲಂಚೇರಿ ಮಂಜೇಶ್ವರ, ಸತ್ಯವತಿ ಎಸ್. ಭಟ್ ಕೊಳಚಪ್ಪು, ಡಾ. ಗೋವಿಂದ ಭಟ್ ಕೊಳಚಪ್ಪೆ, ಬಾಲಕೃಷ್ಣ ಹೊಸಂಗಡಿ, ಡಾ. ಮಹೇಶ್ವರಿ ಯು, ಜೋತ್ಸ್ನಾ ಕಡಂದೇಲು, ಕವಿತಾ ಕೂಡ್ಲು, ವಿಜಯಲಕ್ಷ್ಮಿ ಶ್ಯಾನುಭೋಗ್, ಟಿ.ಎ.ಎನ್. ಖಂಡಿಗೆ. ಶಶಿಕಲಾ ಟೀಚರ್, ಸ್ನೇಹಲತಾ ದಿವಾಕರ್, ಬಾಲ ಮಧುರಕಾನನ, ಸುಭಾಷ್ ಪೆರ್ಲ, ಪ್ರೊ. ಎ. ಶ್ರೀನಾಥ್, ವೆಂಕಟ್ ಭಟ್ ಎಡನೀರು, ಪಾರ್ವತಿ ದಿನೇಶ್ ತಂಬಿಲಕೋಡಿ ಇವರಿಂದ ಕವಿ ಕಾವ್ಯ ಮಿಲನ ನಡೆಯಲಿದೆ.

