ಬೆಂಗಳೂರು : ಸಿವಗಂಗ ರಂಗಮಂದಿರ ಲೋಕಾರ್ಪಣೆಗೊಂಡು ಹತ್ತು ವರ್ಷಗಳು ಸಂದಿರುವ ನೆನಪಿಗೆ ಹಮ್ಮಿಕೊಳ್ಳಲಾಗುವ ತಿಂಗಳ ಕಾರ್ಯಕ್ರಮ ಮಾಲೆ -4ರಲ್ಲಿ ರಂಗಮಂಡಲ ಮತ್ತು ಮಗ್ಗೆ ಸುಗ್ಗಿ ಇವರ ಸಹಯೋಗದಲ್ಲಿ ‘ಸಂಸ್ಕೃತಿ ಸಿರಿ ಸಂಗಮ’ ಕಾರ್ಯಕ್ರಮವನ್ನು ದಿನಾಂಕ 20 ಸೆಪ್ಟೆಂಬರ್ 2026ರಂದು ಮಧ್ಯಾಹ್ನ 3-30 ಗಂಟೆಗೆ ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ರಂಗ ನಿರ್ದೇಶಕ ಚಲನಚಿತ್ರ ನಿರ್ದೇಶಕ ಸಾಕ್ಷಿ ಚಿತ್ರಕಾರ ಮತ್ತು ಕವಿ ವೀರಪ್ಪ ಮರಳವಾಡಿ ಇವರ ‘ಮತ್ತೆ ಕಲ್ಯಾಣದೆಡೆಗೆ’ ಆಧುನಿಕ ವಚನಗಳ ವಾಚನದಲ್ಲಿ ಚಿಕ್ಕಮಗಳೂರಿನ ಸಿ.ಕೆ. ಗುಂಡಣ್ಣ ಪ್ರವೇಶಿಕೆ ಹಾಗೂ ಡಾ. ರಾಜಶೇಖರ ಮಠಪತಿ ಇವರು ವಚನಗಳ ಕುರಿತು ಮಾತನಾಡಲಿದ್ದಾರೆ. ವಚನಕಾರ ವೀರಪ್ಪ ಮರಳವಾಡಿ, ಗುಂಡೀಗೆರೆ ವಿಶ್ವನಾಥ್, ಪುಷ್ಪ ಮುರಹರಿ ಎಸ್.ಎಮ್., ಆರ್. ವಿಜಯಕುಮಾರ್, ರಾಜು ಪವಾರ್, ವಿ. ಮಂಜುಳ ಪಟೇಲ್, ಮನೆಮಾರಿಗೆ ರಂಗಸ್ವಾಮಿ, ಚೈತ್ರ ಟಿ., ಮಹಾದೇವಿ ಜಿ., ಸಿ.ಎಸ್. ಪಂಕಜ, ಕಗ್ಗೆರೆ ಮಂಜು, ನಂ. ವಿಜಯ ಕುಮಾರ್, ನಂದಿನಿ ಎಸ್.ಎನ್., ರಮೇಶ್ ನಾಯಕ್, ಸುಮತಿ ದೇವಗಿರಿಮಠ, ಚೇತನ್ ಬಿ.ಆರ್., ತೇಜಸ್ವಿನಿ ಆರ್. ಮತ್ತು ಹಿರಿಯ ನಾಗರಿಕರ ವೇದಿಕೆ ಸದಸ್ಯರು ವಚನಗಳನ್ನು ವಾಚಿಸಲಿದ್ದಾರೆ.

