ಧಾರವಾಡ : ಚೇತನ ಫೌಂಡೇಶನ್ ಧಾರವಾಡ, ಆರ್ಯಭಟ ಎಜುಕೇಶನಲ್ ಟ್ರಸ್ಟ್ ಕರ್ನಾಟಕ ಹಾಗೂ ಜನತಾಪ್ರಭಾ ದಿನಪತ್ರಿಕೆ ಇವರ ಸಹಯೋಗದೊಂದಿಗೆ ಚಂದ್ರಶೇಖರ ಮಾಡಲಗೇರಿ ಸಾರಥ್ಯದ 267ನೇ ಕಾರ್ಯಕ್ರಮ ‘ಕವಿ ಕಾವ್ಯ ಸಮ್ಮೇಳನ’ವನ್ನು ದಿನಾಂಕ 20 ಸೆಪ್ಟೆಂಬರ್ 2026ರಂದು ಬೆಳಿಗ್ಗೆ 9-30 ಗಂಟೆಗೆ ಧಾರವಾಡ ರಂಗಾಯಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದೇಶದ ವಿವಿಧ ಕ್ಷೇತ್ರದ ಸಾಧಕರಿಗೆ ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ, ಶಿಕ್ಷಣ ಕ್ಷೇತ್ರದ ಸಾಧಕರಿಗೆ ಡಾ. ಎಸ್. ರಾಧಾಕೃಷ್ಣನ್ ಅತ್ಯುತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ, ವಿದ್ಯಾಭೂಷಣ ರಾಷ್ಟ್ರ ಪ್ರಶಸ್ತಿ, ಕವಿಗಳಿಗೆ ಬೇಂದ್ರೆ ಭಾವಚೇತನ ರಾಜ್ಯ ಪ್ರಶಸ್ತಿ, ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹಿರಿಯ ಲೇಖಕ ಡಾ. ಆರ್.ಜಿ. ಚಿಕ್ಕಮಠ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಲೇಖಕರಾದ ಮಹಾದೇವ ಬಸರಕೋಡ ಇವರು ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.

