ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಹಾಗೂ ಶ್ರವಣರಂಗ ಸವಣೂರು ಹಮ್ಮಿಕೊಂಡಿರುವ ‘ಯಕ್ಷಾಷಾಢ -6’ ತಾಳಮದ್ದಳೆ ಕಾರ್ಯಕ್ರಮ ಶ್ರೀ ಮಹಾಮಾಯಾ ದೇವಸ್ಥಾನ ಪುತ್ತೂರು ಇಲ್ಲಿನ ಶ್ರೀ ದೇವಿಯ ಸನ್ನಿಧಿಯಲ್ಲಿ ದಿನಾಂಕ 26 ಜುಲೈ 2026ರಂದು ‘ಶಾಂಭವಿ ವಿಲಾಸ’ ಎಂಬ ಆಖ್ಯಾನದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಇರ್ದೆ, ನಿತೀಶ್ ಎಂಕಣ್ಣಮೂಲೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ ತಾರಾನಾಥ ಸವಣೂರು, ಅನೀಶ್ ಕೃಷ್ಣ ಪುಣಚ, ಸಮರ್ಥ ವಿಷ್ಣು ಕಡಂಬಳಿಕೆ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ ಮತ್ತು ಸಾವಿತ್ರಿ ಶಾಸ್ತ್ರಿ ಶಿರಂಕಲ್ಲು (ಕೌಶಿಕೆ), ಗುಂಡ್ಯಡ್ಕ ಈಶ್ವರ ಭಟ್ (ರಕ್ತಬೀಜ), ಹರಿಣಾಕ್ಷಿ ಜೆ. ಶೆಟ್ಟಿ (ಶುಂಭ), ತಾರಾನಾಥ ಸವಣೂರು (ನಿಶುಂಭ), ಸುಬ್ಬಪ್ಪ ಕೈಕಂಬ (ಚಂಡ), ದುಗ್ಗಪ್ಪ ನಡುಗಲ್ಲು (ಮುಂಡ), ಗುಡ್ಡಪ್ಪ ಬಲ್ಯ (ಸುಗ್ರೀವ), ಅಚ್ಯುತ ಪಾಂಗಣ್ಣಾಯ (ದೂಮ್ರಾಕ್ಷ), ಕಿಶೋರಿ ದುಗ್ಗಪ್ಪ ನಡುಗಲ್ಲು (ದೇವೇಂದ್ರ) ಸಹಕರಿಸಿದರು. ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ತಾರಾನಾಥ ಸವಣೂರು ವಂದಿಸಿದರು. ಶ್ರೀ ದೇವಳದ ಆಡಳಿತ ಮೊಕ್ತೇಸರ ಬಂಗಾರದ ಕಟ್ಟೆ ಜ್ಯುವೆಲ್ಲರಿ ಮಾಲೀಕ ಸತೀಶ್ ನಾಯಕ್ ಹಾಗೂ ಸದಸ್ಯ ಪ್ರಕಾಶ್ ಪೈ ಇವರನ್ನು ಉಭಯ ಸಂಘಗಳ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು. ದೇವಳದ ಅರ್ಚಕ ಕಲಾವಿದರಿಗೆ ಶ್ರೀ ದೇವರ ಪ್ರಸಾದವನ್ನಿತ್ತು ಗೌರವಿಸಿದರು.

