ಹಾಸನ : 2007 ಜೂಲೈ 18 ರಂದು, ರತ್ನಕಲಾ ಪದ್ಮ ಕುಟೀರ ಟ್ರಸ್ಟ್ (ರ್) ನ ಭಾಗವಾಗಿ, ಸತತವಾಗಿ 18 ವರ್ಷಗಳಿಂದ ಹಾಸನದ ನಾಟ್ಯಕಲಾ ನಿವಾಸ್ ಸಂಸ್ಥೆಯು ಹಲವಾರು ದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವ ವಿಶೇಷ ಸಂಸ್ಥೆಯಾಗಿ ಇಂದು ಹಾಸನದ ಹೆಸರನ್ನ ಭೂಪಟದಲ್ಲಿ ದಾಖಲಿಸಿದೆ. ಭಾರತೀಯ ನೃತ್ಯ ಪರಂಪರೆಯ ವಿಭಿನ್ನ ಶೈಲಿಗಳ ಜೊತೆಯಲ್ಲಿ, ವಿದೇಶಿಯ ನೃತ್ಯ ಪರಂಪರೆಯನ್ನ ಹಾಸನದ ಜನಕ್ಕೆ ಪರಿಚಯಿಸಿದ ಹೆಗ್ಗಳಿಕೆ ಈ ಸಂಸ್ಥೆಗೆ ಸೇರುತ್ತದೆ. 02 ಆಗಸ್ಟ್ 2025 ರಂದು ಹಾಸನದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ತನ್ನ 18ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ‘ ಹರಿಹರ ಸುತ’ – ಅಯ್ಯಪ ಸ್ವಾಮಿಯ ಚರಿತ್ರೆ ಆಧಾರಿತ ನೃತ್ಯ ನಾಟಕವನ್ನು ಸುಮಾರು 100 ಸಂಸ್ಥೆಯ ಮಕ್ಕಳೊಂದಿಗೆ ಪ್ರಸ್ತುತಪಡೆಸಿತು.
ಮೈಸೂರಿನ ಖ್ಯಾತ ವಾದ್ಯ ಕಲಾವಿದರುಗಳಾದ ಶ್ರೀಯುತ ವಿಕ್ರಂ ಭರದ್ವಾಜ, ಶ್ರೀ ಸಮೃದ್ದ್ ಶ್ರೀನಿವಾಸ್ , ಶ್ರೀ ಸುಜೇಯೇಂದ್ರ, ಶ್ರೀ ವಿನಯ್ ರಂಗದೊಳ್ ಹಾಗು ಕೇರಳದ ಶ್ರೀ ಹರಿದಾಸ್ ಸೇರಿದಂತೆ ಶ್ರೀ ಸುಬ್ಬ್ರಮಣ್ಯ ರಾವ್ ಹಾಗು ಶ್ರೀ ಹರಿಣಾಕ್ಷಿ , ವಿದ್ವಾನ್ ಶ್ರೀ ಉನ್ನತ್ ಜೈನ ಹಾಸನ್ ಇವರ ಧ್ವನಿಯೊಂದಿಗೆ ರೂಪುಗೊಂಡ ಪ್ರಸ್ತುತಿ ಹಾಸನದ ಜನಮನ ತಲುಪಿ, ಭಾಗವಹಿಸಿದ ಹಿರಿಯ ಕಿರಿಯ ಕಲಾವಿದರಿಗೆ, ವಿದ್ಯಾರ್ಥಿಗಳಿಗೆ ಶ್ರೀ ಅಯ್ಯಪ್ಪಸ್ವಾಮಿಯ ಕಥಾ ಪರಿಚಯದೊಂದಿಗೆ, ವಿಭಿನ್ನ ಮಾಹಿತಿಯ ಅರಿವು ಮೂಡಿಸಿತು. ರಂಗದಮೇಲಿನ ಪ್ರಸ್ತುತಿಗೆ ತಾಂತ್ರಿಕವಾಗಿ ಹಾಸನದ ಶ್ರೀ ಪ್ರದೀಪ್ ಬೆಳಕಿನ ವಿನ್ಯಾಸ ಮಾಡಿ ಪ್ರಸ್ತುತಿಯ ಸೊಬಗನ್ನ ಹೆಚ್ಚಿಸಿದರು.
ಅಂತಾರಾಷ್ಟ್ರೀಯ ಕಲಾವಿದರಾದ ಉನ್ನತ್ ಜೈನ ಇವರ ಪರಿಕಲ್ಪನೆಯ ಈ ಪ್ರಸ್ತುತಿಗೆ ಸ್ವತಃ ಅವರೇ ಸಾಹಿತ್ಯ, ಹಾಡುಗಳನ್ನ ಬರೆದು ಸಂಪೂರ್ಣ ನೃತ್ಯ ಪ್ರಸ್ತುತಿಯ ಸಂಯೋಜನೆ ಮಾಡಿರುತ್ತಾರೆ. ಅವರ ಶಿಷ್ಯರಾದ ಕುಮಾರಿ ಮಾನಸ ಆರ್. ನಾಡಿಗ್, ಕುಮಾರಿ ಮನನ, ಕುಮಾರಿ ವೈಷ್ಣವಿ ಜೈರಾಮ್, ಕುಮಾರಿ ಮೇಘನಾ ಎಚ್. ಆರ್., ಕುಮಾರಿ ಸುಯ್ಯಜ್ಞ , ಕುಮಾರಿ ಆಪ್ತ ಸಂಯೋಜನೆಯಲ್ಲಿ ಸಹಕರಿಸಿ, ಆಧುರಿಯಾಗಿ, ವಿಜೃಂಭಣೆಯಿಂದ ಕಾರ್ಯಕ್ರಮ ಮೂಡಿಬಂತು. ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಾಸನದ ಪ್ರತಿಷ್ಠಿತ ವೈದ್ಯರಾದ ಶ್ರೀಮತಿ ಸೌಮ್ಯ ಮಣಿ ಹಾಗು ಹಾಸನ ಜಿಲ್ಲೆಯ ಬಹುಮುಖಿ ಕಲಾವಿದೆಯಾದ ರಮ್ಯಾ ಸೂರಜ್ ಈರ್ವರಿಗೂ ‘ ಸಮಾಜ ಸೇವಾ ತಿಲಕ’ ಬಿರುದು ನೀಡಿ ಗೌರವಿಸಲಾಯಿತು.
18 ವರ್ಷದ ವಿಶೇಷ ಕಾರ್ಯಕ್ರಮಕ್ಕೆ ಮೆರಗು ನೀಡಲು ಮಂಗಳೂರಿನ ಶ್ರೀಮತಿ ರಾಧಿಕಾ ಶೆಟ್ಟಿ ಇವರ ನೇತೃತ್ವದ ‘ನಾಟ್ಯ ದಾಸೋಹಂ’ ಇದರ 7 ಪ್ರಸ್ತುತಿಯನ್ನ , ಕರ್ನಾಟಕದ ಪ್ರಸಿದ್ಧ ಹಾಗು ಪ್ರತಿಷ್ಠಿತ ಕಲಾವಿದರಾದ ಮಂಗಳೂರಿನ ಶ್ರೀಮತಿ ರಾಧಿಕಾ ಶೆಟ್ಟಿ, ಪುತ್ತೂರಿನ ಶ್ರೀಮತಿ ಮಂಜುಳಾ ಸುಬ್ರಮಣ್ಯ, ಮಂಗಳೂರಿನ ಪ್ರಸಿದ್ಧ ಕರ್ನಾಟಕ ಕಲಾಶ್ರೀ ಬಿರುದಿನ ಶ್ರೀಮತಿ ಶಾರದಾಮಣಿ ಶೇಖರ್ ಹಾಗು ಶ್ರೀಮತಿ ರಾಜಶ್ರೀ ಶೆಣೈ, ಹಾಸನದ ಶ್ರೀಯುತ ಉನ್ನತ್ ಜೈನ್, ಉಡುಪಿಯ ಶ್ರೀಮತಿ ಮಂಜರಿ ಚಂದ್ರ ಪುಷ್ಪರಾಜ್, ತುಮಕೂರಿನ ಶ್ರೀಯುತ ಡಾ. ಸಾಗರ್ ಟಿ. ಎಸ್. ಹಾಗು ಮಂಗಳೂರಿನ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ ಇವರು ಕರ್ನಾಟಕ, ದಾಸ ಪರಂಪರೆಯ, ಕನ್ನಡ ಸಾಹಿತ್ಯದ ಮೇರು ಸಾಹಿತ್ಯಗಾರರಾದ ಶ್ರೀಪಾದರಾಯರು, ವ್ಯಾಸತೀರ್ಥರು, ವಾದಿರಾಜರು, ಪುರಂದರದಾಸರು, ಕನಕದಾಸರು, ವಿಜಯದಾಸರು ಹಾಗು ಜಗನ್ನಾಥ ದಾಸರ ಅಪರೂಪದ ಸಾಹಿತ್ಯಕೆ ಸಂಚಾರೀಭಾವದೊಂದಿಗೆ ನೃತ್ಯ ಸಂಯೋಜಿಸಿ ಪ್ರಸ್ತುತ ಪಡಿಸಿದರು.
ಹಿಮ್ಮೇಳದಲ್ಲಿ ಬೆಂಗಳೂರಿನ ಖ್ಯಾತ ವಿದ್ವಾನ್ ಶ್ರೀ ನಂದಕುಮಾರಿ ಉನ್ನಿಕೃಷ್ಣನ್ ಹಾಡುಗಾರಿಕೆಗೆ ಮೃದಂಗದಲ್ಲಿ ವಿದ್ವಾನ್ ಶ್ರೀ ಕಾರ್ತಿಕ್ ವೈಧಾತ್ರಿ , ಕೊಳಲಿನಲ್ಲಿ ವಿದ್ವಾನ್ ಶ್ರೀ ನಿತೀಶ್ ಅಮ್ಮಣ್ಣಾಯ ಹಾಗೂ ನಟುವಾಂಗದಲ್ಲಿ ಶ್ರೀಮತಿ ವಿದುಷಿ ಸುಮಂಗಲ ರತ್ನಕರ್ ಸಹಕರಿಸಿರುತ್ತಾರೆ. ದಸರಾ ಸಂಪೂರ್ಣ ಪರಿಚಯ, ಕಾಲಘಟ್ಟ, ಆಯ್ದ ರಚನೆಯ ವಿಶೇಷತೆಯನ್ನ ವಿದುಷಿ ಡಾ. ರಮ್ಯಾ ಸೂರಜ್ ಪ್ರೇಕ್ಷಕರಿಗೆ ಪರಿಚಯಿಸಿಕೊಟ್ಟರು. ನಾಟ್ಯ ದಾಸೋಹಂನ 8ನೇ ಪ್ರಸ್ತುತಿಯನ್ನ ಮೈಸೂರಿನ ರಮಾಗೋವಿಂದ್ ರಂಗಮಂದಿರದಲ್ಲಿ ದಿನಾಂಕ 17 ಆಗಸ್ಟ್ 2025ರ ಭಾನುವಾರ ಸಂಜೆ 6.30 ರಂದು ಪ್ರದರ್ಶಿಸಲಾಗುವುದು.