ಬೆಂಗಳೂರು : ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್ ಪ್ರಸ್ತುತ ಪಡಿಸುವ 19ನೇ ಹಾರ್ಮೋನಿಯಂ ಹಬ್ಬ ಕಾರ್ಯಕ್ರಮವನ್ನು ಪಂಡಿತ್ ಗೋವಿಂದರಾವ್ ಪಟವರ್ಧನ್ ಇವರ ಶತಮಾನೋತ್ಸವ ಆಚರಣೆ ಪ್ರಯುಕ್ತ ದಿನಾಂಕ 15 ಜೂನ್ 2025ರಂದು ಸಂಜೆ 3-30 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸೇವಾ ಸದನದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಅಮೈ ಬೀಚು ಇವರ ಹಾರ್ಮೋನಿಯಂ ಸೋಲೋ, ಅನಿರುದ್ಧ ಐತಾಳ್ ಇವರ ಹಾಡುಗಾರಿಕೆ, ಪಂಡಿತ್ ಪ್ರವೀಣ್ ಶಿಯೋಲಿಕರ್ ಮತ್ತು ಡಾ. ರವೀಂದ್ರ ಗುರುರಾಜ್ ಕಟೋಟಿ ಇವರಿಂದ ವಯೋಲಿನ್ ಮತ್ತು ಹಾರ್ಮೋನಿಯಂ ದ್ವಂದ್ವ ವಾದನ, ಪಂಡಿತ್ ವಿಶ್ವನಾಥ್ ಕನ್ಹೆರೆ ಇವರಿಂದ ಹಾರ್ಮೋನಿಯಂ ಸೋಲೋ ಪ್ರಸ್ತುತಗೊಳ್ಳಲಿದ್ದು, ಇವರಿಗೆ ರೂಪಕ್ ಕಲ್ಲೂರ್ಕರ್ ಮತ್ತು ಪಂಡಿತ್ ಗುರುಮೂರ್ತಿ ವೈದ್ಯ ತಬಲಾ ಹಾಗೂ ತೇಜಸ್ ಕಟೋಟಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.