ಕನಕಪುರ : ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಕ್ಕಳ ಸಂಸ್ಥೆ ‘ರಂಗಕಹಳೆ’ ಬೆಂಗಳೂರು ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ‘23ನೇ ಕುವೆಂಪು ನಾಟಕೋತ್ಸವ 2024-25’ವನ್ನು ದಿನಾಂಕ 18 ಜನವರಿ 2025 ಮತ್ತು 19 ಜನವರಿ 2025ರಂದು ಪ್ರತಿದಿನ ಸಂಜೆ 6-00 ಗಂಟೆಗೆ ಕನಕಪುರದ ಡಾ. ಬಿ.ಆರ್. ಅಂಬೇಡ್ಕರ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 18 ಜನವರಿ 2025ರಂದು ‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’ ಮತ್ತು ‘ಮೋಡಣ್ಣನ ತಮ್ಮ’ ಎಂಬ ನಾಟಕ ಪ್ರದರ್ಶನ ಹಾಗೂ ಶ್ರೀ ಕುವೆಂಪು ಗೀತೆ ಗಾಯನ ಮತ್ತು ನೃತ್ಯ ಪ್ರದರ್ಶನ ನಡೆಯಲಿದೆ. ದಿನಾಂಕ 19 ಜನವರಿ 2025ರಂದು ಬಾಲಕ ಕುವೆಂಪು ಕಿರುಚಿತ್ರ ಹಾಗೂ ‘ಶೂದ್ರತಪಸ್ವಿ’ ಮತ್ತು ‘ಯಮನ ಸೋಲು’ ನಾಟಕ ಪ್ರದರ್ಶನಗೊಳ್ಳಲಿದೆ.