ಬೆಂಗಳೂರು : ಬೆಂಗಳೂರಿನ ಚಿಕ್ಕಲ್ಲಸಂದ್ರದ ಸುಮುಖ ಲೇಔಟ್ ಇಲ್ಲಿರುವ ಶ್ರೀವಾಣಿ ಸೆಂಟರ್ ಫಾರ್ ಪರ್ ಫಾರ್ಮಿಂಗ್ ಆರ್ಟ್ಸ್ (ರಿ.) 25ನೇ ವಾರ್ಷಿಕೋತ್ಸವವು ದಿನಾಂಕ 05-01-2024ರಂದು ದೊಡ್ಡಕಲ್ಲಸಂದ್ರ, ಕನಕಪುರ ರಸ್ತೆಯಲ್ಲಿರುವ ಶಂಕರ ಫೌಂಡೇಷನ್ ಮತ್ತು 07-01-2024ರಂದು ಎನ್.ಆರ್. ಕಾಲೋನಿಯ ಪತ್ತಿ ಸಭಾಂಗಣದಲ್ಲಿ ನಡೆಯಲಿದೆ.
ದಿನಾಂಕ 05-01-2024ರಂದು ಗಂಟೆ 5-10ಕ್ಕೆ ಕರ್ನಾಟಕ ಕಲಾಶ್ರೀ ಗುರು ಶ್ರೀ ಸತ್ಯನಾರಾಯಣ ರಾಜ್ ಇವರ ಶಿಷ್ಯೆಯರಾದ ವಿದುಷಿ ಪೃಥ್ವಿ ಪಾರ್ಥಸಾರಥಿ, ವಿದುಷಿ ಗೌರಿ ಸಾಗರ್ ಮತ್ತು ವಿದುಷಿ ತೇಜಸ್ವಿನಿ ರಾಜ್ ಇವರಿಂದ ‘ನೃತ್ಯ ವೈಭವಂ’ ಮತ್ತು ಗಂಟೆ 5-45ಕ್ಕೆ ನೃತ್ಯ ಗುರು ಶ್ರೀಮತಿ ಕೃಪಾ ಭಾಸ್ಕರನ್ ಇವರ ಶಿಷ್ಯೆಯರಾದ ಕು.ಕೃತಿ ಗೋಪಿನಾಥ್, ಕು.ಅನ್ವೇಷ ಗುರು, ಕು. ನವ್ಯ ಫ್ರಾನ್ಸಿಸ್ ನಂದಿದಾ ವರಿಯತೋಡಿ ಮತ್ತು ಮಹಾಲಕ್ಷ್ಮೀ ಶ್ರೀನಿವಾಸನ್, 7 ಗಂಟೆಗೆ ಗುರು ಶ್ರೀಮತಿ ಆಶಾ ಅಡಿಗ ಆಚಾರ್ಯ ಇವರ ಶಿಷ್ಯೆಯರಾದ ಕು. ಹರ್ಷಿತ್ ವೆಟ್ರಿವೇಲ್ ಮತ್ತು ಕು. ಅದಿತಿ ಆಚಾರ್ಯ ಮತ್ತು ಗಂಟೆ 7.45ಕ್ಕೆ ಕರ್ನಾಟಕ ಕಲಾಶ್ರೀ ಗುರು ಶ್ರೀಮತಿ ಪದ್ಮಿನಿ ರವಿಯವರ ಶಿಷ್ಯೆಯರಾದ ವಿದುಷಿ ವಿಭಾ ಹರಿಕಾರ್, ಕು. ಮರಳಿ ಹರಿಕಾರ್ ಮತ್ತು ಕು. ದ್ಯುತಿ ಹರಿಕಾರ್ ಇವರಿಂದ ನೃತ್ಯ ವಾಚನ ಪ್ರಸ್ತುತಿಗೊಳ್ಳಲಿದೆ. ಇದೇ ಸಂದರ್ಭದಲ್ಲಿ ‘ಶ್ರೀವಾಣಿ 2024’ ಪ್ರಶಸ್ತಿ ಪ್ರದಾನ ನಡೆಯಲಿರುವುದು.
ದಿನಾಂಕ 07-01-2024ರಂದು ಖ್ಯಾತ ಮೃದಂಗ ಕಲಾವಿದ ಕರ್ನಾಟಕ ಕಲಾ ಆಚಾರ್ಯ ಗುರು ವಿದ್ವಾನ್ ಶ್ರೀ ಎಂ. ವಾಸುದೇವ ರಾವ್ ಇವರಿಂದ ಉದ್ಘಾಟನೆಗೊಳ್ಳಲಿದೆ. ಗಂಟೆ 10ಕ್ಕೆ ಶ್ರೀ ಎಸ್.ವಿ. ಬಾಲಕೃಷ್ಣ, ಲಕ್ಷ್ಮೀನಾರಾಯಣ ಜಿ. ಮತ್ತು ವಿನಯ್ ನಾಗರಾಜನ್ ಇವರ ಶಿಷ್ಯರಿಂದ ‘ಲಯ ವೈಭವಮ್’, ಗಂಟೆ 11.20ಕ್ಕೆ ಕರ್ನಾಟಕ ಕಲಾಶ್ರೀ ಗುರು ವಿದ್ವಾನ್ ಶ್ರೀ ಎಚ್.ಎಸ್. ವೇಣುಗೋಪಾಲ್ ಅವರ ಶಿಷ್ಯರಾದ ಚಿ. ಅಚ್ಯುತ ಆತ್ರೇಯ, ಚಿ. ಅಪ್ರಮೇಯ ಶೇಷಾದ್ರಿ, ಕು. ಆರಭಿ ಎಸ್. ರಾವ್ ಇವರ ಕೊಳಲು ವಾದನಕ್ಕೆ ಕು. ಪ್ರಣವಿ ಜಿ. ಪಿಟೀಲು ಹಾಗೂ ಪ್ರಣವ್ ಎಸ್. ಬಾಲಕೃಷ್ಣ ಇವರು ಮೃದಂಗ ಸಾಥ್ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮೃದಂಗ ತಯಾರಕರಾದ ಶ್ರೀ ಕುಮಾರ್ ಪರಮೇಶ್ವರನ್, ತಾಳವಾದ್ಯ ಕಲಾವಿದ ಮತ್ತು ಮೃದಂಗ ತಯಾರಕರಾದ ವಿದ್ವಾನ್ ಶ್ರೀ ಶ್ರೀನಿವಾಸ ಅನಂತರಾಮಯ್ಯ ಮತ್ತು ಓಂಕಾರ್ ಡಿಜಿಟಲ್ ರೆಕಾರ್ಡಿಂಗ್ ಸ್ಟುಡಿಯೋಸ್ ಇದರ ಮಾಲಕರಾದ ಶ್ರೀ ಓಂಕಾರ ಮೂರ್ತಿ ಇವರುಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಲಯ ಸಂವಾದದಲ್ಲಿ ಲಯಕಲಾ ಪ್ರತಿಭಾಮಣಿ ವಿದ್ವಾನ್ ಶ್ರೀ ಎನ್. ವಾಸುದೇವ ಮತ್ತು ಕಲೈಮಾಮಣಿ ವಿದ್ವಾನ್ ಶ್ರೀ ಟಿ.ಆರ್. ಸುಂದರೇಶನ್ ಇವರಿಂದ ಮೃದಂಗ ವಾದನ ನಡೆಯಲಿದೆ.
ಗಂಟೆ 4ರಿಂದ ಕರ್ನಾಟಕ ಕಲಾಶ್ರೀ ಗುರು ವಿದ್ವಾನ್ ಶ್ರೀ ಎಂ. ವಾಸುದೇವ ರಾವ್ ಇವರ ಶಿಷ್ಯರಿಂದ ‘ಲಯ ಸುರಭಿ’ ಗಂಟೆ 4.30ಕ್ಕೆ ಲಕ್ಷ್ಮೀನಾರಾಯಣ ಜಿ., ರಮೇಶ್ ಅಯ್ಯರ್, ವಿನಯ್ ನಾಗರಾಜನ್, ಅನಂತ ಆತ್ರೇಯ ಮತ್ತು ಪ್ರಣವ್ ಎಸ್. ಬಾಲಕೃಷ್ಣ
ಇವರಿಂದ ‘ಲಯ ವೈಭವ್’, ವಿದ್ವಾನ್ ಶ್ರೀ ಜಯಶಂಕರ ಭಟ್ ಇವರಿಂದ ‘ವೇದಘೋಷ’ ನಡೆಯಲಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಗೀತ ನಾಟಕ ಪ್ರಶಸ್ತಿ ಪುರಸ್ಕೃತ ಗಾನಕಲಾಭೂಷಣ ಪ್ರಸಿದ್ಧ ಗಾಯಕ ಮತ್ತು ಗುರು ವಿದ್ವಾನ್ ಡಾ. ಆರ್ ಕೆ ಪದ್ಮನಾಭ ಇವರಿಗೆ ಶ್ರೀವಾಣಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಸಂಸ್ಥಾಪಕರಾದ ವಿದ್ವಾನ್ ಶ್ರೀ ಎಸ್.ವಿ. ವೆಂಕಟೇಶಯ್ಯ ಇವರ ‘ಸ್ಮಾರಕ ಪ್ರಶಸ್ತಿ-2024’ ಮತ್ತು ಖ್ಯಾತ ಮೃದಂಗ ಕಲಾವಿದರಾದ ಲಯಕಲಾ ಪ್ರತಿಭಾಮಣಿ ವಿದ್ವಾನ್ ಶ್ರೀ ಎನ್. ವಾಸುದೇವ ಇವರಿಗೆ ‘ಶ್ರೀವಾಣಿ 2024’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಗಂಟೆ 6.30ಕ್ಕೆ ಸಂಗೀತ ನಾಟಕ ಯುವ ಪುರಸ್ಕಾರ ಪುರಸ್ಕೃತ ವಿದ್ವಾನ್ ಶ್ರೀ ಸಾಕೇತರಾಮನ್ ಇವರ ಗಾಯನ ಗೋಷ್ಠಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗಾನಕಲಾಶ್ರೀ ವಿದ್ವಾನ್ ಶ್ರೀ ಎಚ್.ಕೆ.ವೆಂಕಟರಾಮ್ ಇವರು ಪಿಟೀಲು, ಕಲೈಮಾಮಣಿ ವಿದ್ವಾನ್ ಶ್ರೀ ಮನ್ನಾರ್ಗುಡಿ ಎ. ಈಶ್ವರನ್ ಈಯರು ಮೃದಂಗ ಮತ್ತು ಖಂಜೀರ ಪ್ರವೀಣ ವಿದ್ವಾನ್ ಶ್ರೀ ಎನ್. ಅಮೃತ್ ಇವರು ಖಂಜೀರದಲ್ಲಿ ಸಾಥ್ ನೀಡಲಿದ್ದಾರೆ.