ಧಾರವಾಡ : ಅಭಿನಯ ಭಾರತಿ (ರಿ.) ಧಾರವಾಡ ಇದರ 45ನೇ ವಾರ್ಷಿಕೋತ್ಸವವನ್ನು ದಿನಾಂಕ 05 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ಧಾರವಾಡದ ಕರ್ಣಾಟಕ ಕಾಲೇಜಿನ ಆವರಣ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅದ್ವೈತ ಪ್ರಭೋಧಕ ಸಂಘದ ಅಧ್ಯಕ್ಷರಾದ ರವಿ ದೇಶಪಾಂಡೆ ಇವರು ಈ ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದು, ವಿದುಷಿ ರೋಹಿಣಿ ಇಮಾರತಿ ಮತ್ತು ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಇದರ ಅಧ್ಯಕ್ಷರಾದ ನಾಗರಾಜ ತಾಯಣ್ಣವರ ಇವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿದ್ವಾನ್ ಸುಜಯ್ ಶಾನಭೋಗ್ ನೃತ್ಯ ಸಂಯೋಜನೆ ಮತ್ತು ಅದ್ವೈತ ಪ್ರಬೋಧಕ ಸಂಘದ ಪ್ರಾಯೋಜಕತ್ವದಲ್ಲಿ ‘ಸನಾತನಿ’ ಎಂಬ ನೃತ್ಯ ರೂಪಕ ಹುಬ್ಬಳ್ಳಿಯ ಕಲಾ ಸುಜಯ ತಂಡದಿಂದ ಪ್ರದರ್ಶನಗೊಳ್ಳಲಿದೆ.