ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ, ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ.ಜಿ.ಎಂ. ಕಾಲೇಜು ಉಡುಪಿ, ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ) ಪರ್ಕಳ ಇವರ ಸಹಯೋಗದಲ್ಲಿ ದಿನಾಂಕ 06 ಡಿಸೆಂಬರ್ 2024 ರಿಂದ 08 ಡಿಸೆಂಬರ್ 2024ರವರೆಗೆ 46ನೆಯ ವಾದಿರಾಜ ಕನಕದಾಸ ಸಂಗೀತೋತ್ಸವ ಉಡುಪಿಯ ಎಂ. ಜಿ. ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಟಿ. ಮೋಹನದಾಸ ಪೈ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಟಿ. ರಂಗ ಪೈ ಮಾತನಾಡಿ “ಈ ಕಾರ್ಯಕ್ರಮ ಯುವ ಜನರಿಗೆ ಮಾದರಿಯಾಗಿದೆ. ಸಂಗೀತ ಆಸಕ್ತಿಯ ಬಗ್ಗೆ ಕೋರ್ಸ್ ಮಾಡಿದರೆ ಮಕ್ಕಳ ಕೌಶಲ ಅಭಿವೃದ್ಧಿ ಸಾಧ್ಯವಾಗಲಿದೆ. ಕಲೆಯನ್ನು ಆಸ್ವಾದಿಸುವವರು, ಕಲಾಕಾರರು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂಗೀತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಸಾಹಿತ್ಯ ಸಂಗೀತ ಕೂಡಿ ಭಕ್ತಿ ರಸವನ್ನು ಉತ್ಪಾದಿಸುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಾದರಿಯಾಗಬೇಕು. ಇದರಿಂದ ಜೀವನದಲ್ಲಿ ಮಾನವೀಯತೆ, ಮೌಲ್ಯಯುತ ಜೀವನ ಸುಂದರವಾಗಿ ರೂಪುಗೊಳ್ಳಲು ಸಾಧ್ಯವಿದೆ.” ಎಂದು ಹೇಳಿದರು.
ಎಂ. ಜಿ. ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಡಾ. ಅನಿಲ್ ಕುಮಾರ್ ಶೆಟ್ಟಿ ಉಪನ್ಯಾಸ ನೀಡಿದರು. ಕನಕದಾಸ ಅಧ್ಯಯನ ಹಾಗೂ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆ ಗೈದರು. ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ಇದರ ನಿರ್ದೇಶಕರಾದ ಉಮಾಶಂಕರಿ ಪ್ರಾರ್ಥಿಸಿ, ಡಾ. ಅರುಣ್ ಕುಮಾರ್ ಎಸ್. ಆರ್. ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ನಂತರ ಬೆಂಗಳೂರಿನ ಕರ್ನಾಟಕ ಕಲಾಶ್ರೀ ತಿರುಮಲೆ ಶ್ರೀನಿವಾಸ ಮತ್ತು ಬಳಗದವರಿಂದ ಸಂಗೀತ ಕಚೇರಿ ನಡೆಯಿತು.
ದಿನಾಂಕ 07 ಡಿಸೆಂಬರ್ 204ರಂದು ಬೆಳಿಗ್ಗೆ 9.30ರಿಂದ ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಮಂಚಿ ಅವರಿಂದ ಕನಕದಾಸರ ಮೋಹನ ತರಂಗಿಣಿಯ ಆಯ್ದ ಭಾಗದ ಕಾವ್ಯ ವಾಚನಕ್ಕೆ ಶ್ರೀ ಸರ್ಪಂಗಳ ಈಶ್ವರ ಭಟ್ ವ್ಯಾಖ್ಯಾನ ನೀಡಿದರು. 10.30ರಿಂದ ಶ್ರೀಮತಿ ಶ್ರೇಯಾ ಕೊಳತ್ತಾಯ ಮತ್ತು ಬಳಗದವರಿಂದ ಸಂಗೀತ ಕಚೇರಿ ನಡೆಯಿತು. ನಂತರ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಾದಿರಾಜ ಕನಕದಾಸ ಕೀರ್ತನಾ ಸ್ಪರ್ಧೆ ನಡೆಯಿತು. ಸ್ಪರ್ಧೆಯ ಪೂರ್ವಪ್ರಾಥಮಿಕ ವಿಭಾಗದ ತೀರ್ಪುಗಾರರಾಗಿ (ಎಲ್. ಕೆ. ಜಿ. – 4ನೇ ತರಗತಿ) ಶ್ರೀಮತಿ ಅನ್ನಪೂರ್ಣ ರಾಘವೇಂದ್ರ ಮಣಿಪಾಲ ಹಾಗೂ ಶ್ರೀಮತಿ ಶ್ರೇಯಾ ಕೊಳತ್ತಾಯ ಸುರತ್ಕಲ್, 5ನೇ ತರಗತಿಯಿಂದ 7ನೇ ತರಗತಿ ವಿಭಾಗದಲ್ಲಿ ಶ್ರೀ ತಿರುಮಲೆ ಶ್ರೀನಿವಾಸ ಬೆಂಗಳೂರು ಹಾಗೂ ಶ್ರೀಮತಿ ಉಮಾಮಹೇಶ್ವರಿ ಭಟ್ ಆತ್ರಾಡಿ ಪರ್ಕಳ, 8ರಿಂದ ಪದವಿಪೂರ್ವ ವಿಭಾಗದಲ್ಲಿ, ಶ್ರೀಮತಿ ವಾರಿಜಾಕ್ಷಿ ಆರ್. ಎಲ್. ಭಟ್ ಉಡುಪಿ ಹಾಗೂ ಶ್ರೀ ಲಕ್ಷ್ಮೀನಾರಾಯಣ ಉಪಾಧ್ಯ ಉಡುಪಿ, ಪದವಿ, ಸ್ನಾತಕೋತ್ತರ ಹಾಗೂ ಸಾರ್ವಜನಿಕ ವಿಭಾಗದಲ್ಲಿ ಶ್ರೀ ನಟರಾಜ ಎಚ್. ಎನ್.ಪಟ್ಲ ಮತ್ತು ಶ್ರೀಮತಿ ಪೂಜಾ ಉಡುಪ ಹಿರಿಯಡ್ಕ ಸಹಕರಿಸಿದರು.
ಸ್ಪರ್ಧಾವಿಜೇತರ ಪಟ್ಟಿ :
ಎಲ್. ಕೆ. ಜಿ. – 4ನೇ ತರಗತಿ
1. ಸಾಂಘವಿ, 4ನೇ ತರಗತಿ ,ಮಾಧವಕೃಪಾ ಇಂಗ್ಲಿಷ್ ಮೀಡಿಯಂ ಸ್ಕೂಲ್,ಮಣಿಪಾಲ – ಪ್ರಥಮ
2. ಧೃತಿ, 4ನೇ ತರಗತಿ, ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ – ದ್ವಿತೀಯ
3. ಸರಯು, 3ನೇ ತರಗತಿ, ಮಾಧವಕೃಪಾ ಇಂಗ್ಲೀಷ್ ಮೀಡಿಯಂ ಸ್ಕೂಲ್, ಮಣಿಪಾಲ – ತೃತೀಯ
5ನೇ ತರಗತಿಯಿಂದ 7ನೇ ತರಗತಿ:
1. ಪರ್ಜನ್ಯ, 7ನೇ ತರಗತಿ, ವಿದ್ಯೋದಯ ಪಬ್ಲಿಕ್ ಸ್ಕೂಲ್,ಉಡುಪಿ – ಪ್ರಥಮ
2. ಅನುಶ್ರೀ, ಅಂಬಿಕಾ ವಿದ್ಯಾಲಯ ಪುತ್ತೂರು ಮಂಗಳೂರು – ದ್ವಿತೀಯ
3. ಸ್ವಸ್ತಿ ಎಂ. ಭಟ್, 7ನೇ ತರಗತಿ, ಮಾಧವ ಕೃಪಾ ಇಂಗ್ಲಿಷ್ ಮೀಡಿಯಂ ಸ್ಕೂಲ್, ಮಣಿಪಾಲ – ತೃತೀಯ
4. ಶ್ರೀಪಾದ ಭಟ್, 5ನೇ ತರಗತಿ, ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪೆರಂಪಳ್ಳಿ,ಕುಂಜಿಬೆಟ್ಟು, ಉಡುಪಿ – ಸಮಾಧಾನಕರ
5. ಸಂಯುಕ್ತ ಆಚಾರ್ಯ, 6ನೇ ತರಗತಿ, ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ – ಸಮಾಧಾನಕರ
8ರಿಂದ ದ್ವಿ. ಪಿ. ಯು. ಸಿ.
1. ಶ್ರೀವತ್ಸ ತಂತ್ರಿ 9ನೇ ತರಗತಿ, ಶ್ರೀ ಲಕ್ಷ್ಮೀ ಜನಾರ್ದನ ಇಂಟರ್ ನ್ಯಾಶನಲ್ ಸ್ಕೂಲ್, ನಂದಳಿಕೆ – ಪ್ರಥಮ
2. ಅಥರ್ವಾ ದೀಪರಾಜ್ ಹೆಗ್ಡೆ, 10ನೇ ತರಗತಿ, ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ – ದ್ವಿತೀಯ
3. ಪ್ರಾರ್ಥನಾ, 10ನೇ ತರಗತಿ, ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ – ತೃತೀಯ
4. ಪ್ರಣತಿ ಎಸ್. ಭಟ್, 9ನೇ ತರಗತಿ, ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ – ಸಮಾಧಾನಕರ
ಪದವಿ, ಸ್ನಾತಕೋತ್ತರ ಹಾಗೂ ಸಾರ್ವಜನಿಕ ವಿಭಾಗ:
1. ಶರಣ್ಯ ತಂತ್ರಿ ನಂದಳಿಕೆ, ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮೆನೇಜ್‌ಮೆಂಟ್ – ಪ್ರಥಮ
2. ಬಿ. ಆರ್. ಅಡಿಗ, ಉಡುಪಿ – ದ್ವಿತೀಯ
3. ರವಿದಾಸ್ ಪೆರ್ಡೂರು – ತೃತೀಯ
4. ರಾಮಚಂದ್ರ ನಾಯಕ್ -ಉಡುಪಿ ತೃತೀಯ
ಸಂಜೆ 4.30ರಿಂದ ಶ್ರೀ ಪೊಳಲಿ ಜಗದೀಶ್ ದಾಸರು ಮತ್ತು ಬಳಗದವರಿಂದ ‘ಸಂತ ಕನಕದಾಸರು’ ಹರಿಕಥಾ ಕಾಲಕ್ಷೇಪ ನಡೆಯಿತು.
ದಿನಾಂಕ 08 ಡಿಸೆಂಬರ್ 2024ರಂದು ಬೆಳಿಗ್ಗೆ ತಿರುಮಲೆ ಶ್ರೀನಿವಾಸ ಬೆಂಗಳೂರು ಇವರಿಂದ ವಾದಿರಾಜ ಕನಕದಾಸ ಕೀರ್ತನಾ ಶಿಬಿರ ನಡೆಯಿತು. ಸಂಜೆ 4.30ರಿಂದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಿತು. ಅಧ್ಯಕ್ಷತೆಯನ್ನು ಕನಕದಾಸ ಅಧ್ಯಯನ, ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ವಹಿಸಿದ್ದರು, ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತಿರುಮಲೆ ಶ್ರೀನಿವಾಸ ಬೆಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಜೆ ಘಂಟೆ 4.30 ರಿಂದ ಶ್ರೀ ಮಂಜುನಾಥ ಭಟ್ ಉಡುಪಿ ಮತ್ತು ಬಳಗದವರಿಂದ ಹಿಂದೂಸ್ಥಾನಿ ಸಂಗೀತ ಕಛೇರಿ ನಡೆಯಿತು. ಈ ಮೂರು ದಿನ ಕಾರ್ಯಕ್ರಮದ ನಿರೂಪಣೆಯಲ್ಲಿ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸಹಸಂಶೋಧಕರಾದ ಡಾ. ಅರುಣ್ ಕುಮಾರ್ ಎಸ್. ಆರ್, ಎಂ. ಜಿ. ಎಂ. ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ರಾಘವೇಂದ್ರ ತುಂಗ ಹಾಗೂ ಅಂಬಿಕಾ ಇವರು ಸಹಕರಿಸಿದರು.