ಸುರತ್ಕಲ್ : ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಸುರತ್ಕಲ್ ಘಟಕದ ಪಂಚಮ ವಾರ್ಷಿಕೋತ್ಸವ ಹಾಗೂ ಯಕ್ಷಗಾನ ಸಾಧಕ ಕಲಾವಿದರಿಗೆ ಸಮ್ಮಾನ ಸಮಾರಂಭ ದಿನಾಂಕ 15 ಮಾರ್ಚ್ 2025ರ ಶನಿವಾರದಂದು ಸುರತ್ಕಲ್ಲಿನ ಬಂಟರ ಭವನ ವಠಾರದಲ್ಲಿ ಜರಗಿತು.
ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಂಕರನಾರಾಯಣ ಭಟ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಗರಿ ಎಂಟರ್ ಪ್ರೈಸಸ್ ಮಾಲಕ ಅಗರಿ ರಾಘವೇಂದ್ರ ರಾವ್ ಮಾತನಾಡಿ “ಜಾಗತಿಕ ಮಟ್ಟದಲ್ಲಿ ಯಕ್ಷಗಾನ ಪರಂಪರೆಯನ್ನು ಬೆಳಗಿಸಿದ ಕೀರ್ತಿ ಪಟ್ಲ ಸತೀಶ್ ಶೆಟ್ಟಿ ಇವರದ್ದು. ಯಕ್ಷಗಾನದ ಪ್ರಸಿದ್ದ ಹಾಗೂ ಕಲಾವಿದರ ಏಳಿಗೆಗೆ ಶ್ರಮಿಸುತ್ತಿರುವ ಟ್ರಸ್ಟ್ ಜತೆ ಕೈಜೋಡಿಸಿ ಯಕ್ಷಗಾನ ಉಳಿಸಿ ಬೆಳೆಸಲು ನಾವೆಲ್ಲರೂ ಮುಂದಾಗಬೇಕು” ಎಂದು ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ “ಟ್ರಸ್ಟ್ ವತಿಯಿಂದ ಮಾಡುತ್ತಿರುವ ಹಲವು ಸಮಾಜಮುಖೀ ಕೆಲಸಗಳಿಗೆ ಯಕ್ಷಗಾನ ಅಭಿಮಾನಿಗಳು ಸಹಕಾರ ನೀಡುತ್ತಿದ್ದಾರೆ” ಎಂದರು. ಸುರತ್ಕಲ್ ಘಟಕದ ಅಧ್ಯಕ್ಷರಾದ ಸುಧಾಕರ ಎಸ್. ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳ ವೆಂಕಟ್ರಾಯ ಐತಾಳ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ನಾರಾಯಣ ಮೈರ್ಪಾಡಿ, ಅರ್ಥಧಾರಿ ಶ್ರೀಧರ ಶೆಟ್ಟಿ ರಂಗಸ್ಥಳ ವಿನ್ಯಾಸಗಾರ ಜಗದೀಶ್, ಆಚಾರ್ಯ, ಯಕ್ಷಗಾನ ಸೇವಾಕರ್ತ ಕೃಷ್ಣಪ್ಪ ಪೂಜಾರಿ, ನೇಪಥ್ಯ ಕಲಾವಿದ ಜನಾರ್ದನ ಡಿ. ಶೆಟ್ಟಿಗಾರ್ ಇವರನ್ನು ಸಮ್ಮಾನಿಸಲಾಯಿತು.
ಗೌರವಾಧ್ಯಕ್ಷ ಮಹಾಬಲ ಪೂಜಾರಿ, ಉದ್ಯಮಿ ಡಿ.ಕೆ. ಶೆಟ್ಟಿ, ಉದ್ಯಮಿ ಮನೋಹರ ಶೆಟ್ಟಿ ಸುರತ್ಕಲ್, ಬಂಟರ ಸಂಘದ ನಿರ್ದೇಶಕ ಜಗದೀಶ್ ಶೆಟ್ಟಿ, ಶ್ರೀಕಾಂತ್ ಕಾಮತ್, ಪಟ್ಲ ಫೌಂಡೇಶನ್ ಇದರ ಕೇಂದ್ರ ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆಳ್ವ, ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಉಪಾಧ್ಯಕ್ಷ ಲೀಲಾಧರ್ ಶೆಟ್ಟಿ ಕಟ್ಲ, ಸಂಚಾಲಕ ವಿನಯ ಆಚಾರ್ಯ, ಕೋಶಾಧಿಕಾರಿ ಟಿ. ಎನ್. ರಮೇಶ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರೀಯ ಘಟಕದ ಸಂಘಟನ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ, ಟ್ರಸ್ಟಿಗಳಾದ ಧನಪಾಲ್ ಶೆಟ್ಟಿಗಾರ್, ಚರಣ್ ಜೆ. ಶೆಟ್ಟಿ ನಾರಾಯಣ ಶೆಟ್ಟಿ, ಪುಷ್ಪರಾಜ ಶೆಟ್ಟಿ, ಸಹನಾ ರಾಜೇಶ್ ರೈ, ಕೇಸರಿ ಪೂಂಜ, ಚಿತ್ರಾ ಜೆ. ಶೆಟ್ಟಿ, ಶೈಲಾ ಶಂಕರ್ ಶೆಟ್ಟಿ ಉಪಸ್ಥಿತರಿದ್ದರು. ಸುಧಾ ಚಂದ್ರಶೇಖರ ಶೆಟ್ಟಿ ನಿರೂಪಿಸಿ, ಗಂಗಾಧರ ಪೂಜಾರಿ ಬಾಳ ವಂದಿಸಿದರು.