ಬೆಂಗಳೂರು : ಬೆಂಗಳೂರಿನ ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ ಮತ್ತು ಮೋಹನ ತರಂಗಿಣಿ ಸಂಗೀತ ಸಭಾ ಪ್ರಸ್ತುತ ಪಡಿಸುವ ‘76ನೇ ವಾರ್ಷಿಕ ಸಾಂಸ್ಕೃತಿಕ ಸಂಗೀತ ನೃತ್ಯ ಮಹೋತ್ಸವ’ವು ದಿನಾಂಕ 04-11-2023ರಂದು ನಾದಬ್ರಹ್ಮ ಶಾರದ ಮಂದಿರ ವಿದ್ಯಾಲಯದಲ್ಲಿ ಉದ್ಘಾಟನೆಗೊಳ್ಳಲಿದೆ. ದಿನಾಂಕ 04-11-2023 ಶನಿವಾರದಿಂದ ದಿನಾಂಕ 04-05-2024 ಶನಿವಾರದವರೆಗೆ ಕರ್ನಾಟಕ ಸಂಗೀತ ತ್ರಿಮೂರ್ತಿಗಳ ಹಾಗೂ ಕನಕ ಪುರಂದರ ಸಂಗೀತೋತ್ಸವದ ಅಂಗವಾಗಿ ನಡೆಸುವ 76 ಕಾರ್ಯಕ್ರಮಗಳು.
ಈ ಕಾರ್ಯಕ್ರಮವು ಮೋಹನ ತರಂಗಿಣಿ ಸಂಗೀತ ಸಭಾದ ಕಾರ್ಯದರ್ಶಿ ಶ್ರೀಮತಿ ಮರಿಯಮ್ಮ (ಲಕ್ಷ್ಮೀದೇವಿ) ಮೋಹನ ಕುಮಾರ ಮತ್ತು ಕರ್ನಾಟಕ ಕಾಂಪೋಸ್ಟ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಇದರ ಮಾಜಿ ಉಪಾಧ್ಯಕ್ಷರಾದ ಶ್ರೀ ಎಂ. ವೆಂಕಟೇಶ್ ಇವರ ಉಪಸ್ಥಿತಿಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ‘ಮಂಜುದಾಸ ರಾಜ್ಯ ಪ್ರಶಸ್ತಿ ಪುರಸ್ಕಾರ’ವನ್ನು ಸಾಹಿತ್ಯ ಕ್ಷೇತ್ರದಲ್ಲಿ ಶ್ರೀ ಸುಬ್ಬು ಹೊಲಿಯರ್, ಸಮಾಜಸೇವೆಗೆ ಶ್ರೀ ಜಿ. ಮಾದೇಶ್ ಬೆಂಗಳೂರು, ಹಿಂದೂಸ್ಥಾನಿ ಸಂಗೀತಕ್ಕೆ ಪಂಡಿತ್ ಶ್ರೀ ರಾಮಪ್ಪ ಪಕೀರಪ್ಪ ಭಜಂತ್ರಿ ಮತ್ತು ಶಹನಾಯಿ ವಾದನಕ್ಕೆ ಆನವಟ್ಟಿ ತಿಮ್ಮಾಪುರ ಇವರಿಗೆ ನೀಡಿ ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಕೆ.ಎಸ್. ಮೋಹನ ಕುಮಾರ ಮತ್ತು ವಿದ್ಯಾರ್ಥಿ ವೃಂದದವರು ತಮಗೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.