ಮಂಡ್ಯ : ಕನ್ನಡ ಸಾಹಿತ್ಯ ಪರಿಷತ್ತು ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು ಇದರ ವತಿಯಿಂದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 20 ಡಿಸೆಂಬರ್ 2024ರಿಂದ 22 ಡಿಸೆಂಬರ್ 2024ರವರೆಗೆ ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 20 ಡಿಸೆಂಬರ್ 2024ರಂದು ಪ್ರಧಾನ ವೇದಿಕೆಯಲ್ಲಿ ಬೆಳಿಗ್ಗೆ 6-00 ಗಂಟೆಗೆ ಧ್ವಜಾರೋಹಣ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ನಾಡೋಜ ಡಾ. ಗೊ.ರು. ಚನ್ನಬಸಪ್ಪ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಇವರ ದಿವ್ಯ ಸಾನಿಧ್ಯದಲ್ಲಿ ಕರ್ನಾಟಕ ಸರಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಇವರು ಈ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆ, ಮಹಾಮಂಟಪ, ಮಹಾದ್ವಾರ, ಪ್ರವೇಶ ದ್ವಾರ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ, ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆ, ಪುಸ್ತಕ ಬಿಡುಗಡೆ, ಸ್ಮರಣ ಸಂಚಿಕೆ ಬಿಡುಗಡೆ ಮತ್ತು ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳ್ಳಲಿದೆ. ಮಧ್ಯಾಹ್ನ 2-00 ಗಂಟೆಗೆ ಖ್ಯಾತ ಇತಿಹಾಸ ತಜ್ಞರಾದ ಪ್ರೊ. ಎಂ.ವಿ. ಶ್ರೀನಿವಾಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಗೋಷ್ಠಿ -1ರಲ್ಲಿ ‘ಮಂಡ್ಯ ಜಿಲ್ಲೆಗೆ ಕೊಡುಗೆ ನೀಡಿದ ಮಹನೀಯರು’ ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ನಡೆಯಲಿದೆ. ಸಂಜೆ 3-30 ಗಂಟೆಗೆ ನಡೆಯುವ ಗೋಷ್ಠಿ -2ರಲ್ಲಿ ಕವಿಗೋಷ್ಠಿ -1ರಲ್ಲಿ ‘ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ’ ಮತ್ತು ಕವಿಗೋಷ್ಠಿ -2ರಲ್ಲಿ ‘ಮಹಿಳಾ ವಿಶೇಷ ಕವಿಗೋಷ್ಠಿ’ ಪ್ರಸ್ತುತಗೊಳ್ಳಲಿದೆ. ಸಂಜೆ 6-00 ಗಂಟೆಗೆ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಾಗೂ ಸುವರ್ಣ ಮಹೋತ್ಸವದ ನೆನಪಿನಲ್ಲಿ ಸಾಧಕರಿಗೆ ಸನ್ಮಾನ ನಡೆಯುಲಿದೆ.
ಸಮಾನಾಂತರ ವೇದಿಕೆ ಒಂದರಲ್ಲಿ ಮಧ್ಯಾಹ್ನ 2-00 ಗಂಟೆಗೆ ಗೋಷ್ಠಿ -1ರಲ್ಲಿ ‘ಕನ್ನಡ ಪುಸ್ತಕೋದ್ಯಮದ ಸವಾಲುಗಳು ಮತ್ತು ಪರಿಹಾರಗಳು’, ಗೋಷ್ಠಿ -2ರಲ್ಲಿ ‘ಸಂಕೀರ್ಣ ನೆಲೆಗಳು -1’ ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ನಡೆಯಲಿದೆ. ಸಂಜೆ 7-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.
ಸಮಾನಾಂತರ ವೇದಿಕೆ ಎರಡರಲ್ಲಿ ಮಧ್ಯಾಹ್ನ 2-00 ಗಂಟೆಗೆ ಗೋಷ್ಠಿ -1ರಲ್ಲಿ ‘ಕೃಷಿ ಮತ್ತು ಕೃಷಿಕರ ಸಂಕಷ್ಟ : ಸವಾಲುಗಳು ಮತ್ತು ಪರಿಣಾಮಗಳು’, ಗೋಷ್ಠಿ -2ರಲ್ಲಿ ‘ರಂಗಭೂಮಿ, ಚಲನಚಿತ್ರ, ಕಿರುತೆರೆ ಕ್ಷೇತ್ರದ ಸವಾಲುಗಳು’ ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ನಡೆಯಲಿದೆ. ಸಂಜೆ 7-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.
ದಿನಾಂಕ 21 ಡಿಸೆಂಬರ್ 2024ರಂದು ಪ್ರಧಾನ ವೇದಿಕೆಯಲ್ಲಿ ಬೆಳಗ್ಗೆ 9-30 ಗಂಟೆಗೆ ನಡೆಯುವ ಗೋಷ್ಠಿ -3ರಲ್ಲಿ ನೀರಾವರಿ ತಜ್ಞರಾದ ಕ್ಯಾಪ್ಟನ್ ರಾಜಾರಾವ್ ಇವರ ಅಧ್ಯಕ್ಷತೆಯಲ್ಲಿ ‘ನೆಲ-ಜಲ ಸಾಕ್ಷರತೆ’ : ಅವಲೋಕನ ನಡೆಯಲಿದೆ. 11-00 ಗಂಟೆಗೆ ನಡೆಯುವ ಗೋಷ್ಠಿ -4ರಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಹೆಚ್.ಕೆ. ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ‘ಸಾಹಿತ್ಯದಲ್ಲಿ ರಾಜಕೀಯ : ರಾಜಕೀಯದಲ್ಲಿ ಸಾಹಿತ್ಯ’, ಗೋಷ್ಠಿ -5ರಲ್ಲಿ ಹಿರಿಯ ವಿದ್ವಾಂಸರಾದ ಡಾ. ನರಹಳ್ಳಿ ಬಾಲ ಸುಬ್ರಹ್ಮಣ್ಯ ಇವರ ಅಧ್ಯಕ್ಷತೆಯಲ್ಲಿ ‘ಕರ್ನಾಟಕ 50 : ಹಿನ್ನೋಟ – ಮುನ್ನೋಟ ಕನ್ನಡವೆಂದರೆ ಬರೀ ನುಡಿಯಲ್ಲ’, ಗೋಷ್ಠಿ -6ರಲ್ಲಿ ಖ್ಯಾತ ವಾಗ್ಮಿಗಳಾದ ಪ್ರೊ. ಎಂ. ಕೃಷ್ಣೇಗೌಡ ಇವರ ಅಧ್ಯಕ್ಷತೆಯಲ್ಲಿ ‘ಮಂಡ್ಯ ನೆಲ ಮೂಲದ ಮೊದಲುಗಳು’, ಗೋಷ್ಠಿ -7ರಲ್ಲಿ ಹಿರಿಯ ಜಾನಪದ ತಜ್ಞರಾದ ಡಾ. ವೀರಣ್ಣ ದಂಡೆ ಇವರ ಅಧ್ಯಕ್ಷತೆಯಲ್ಲಿ ‘ಕರ್ನಾಟಕದ ಮೌಖಿಕ ಪರಂಪರೆಗಳ ಪ್ರದರ್ಶನ ಮತ್ತು ವಿವರಣೆ’ ಎಂಬ ವಿಷಯಗಳ ಬಗ್ಗೆ ವಿಷಯ ಮಂಡನೆ ನಡೆಯಲಿದೆ. ಸಂಜೆ 5-00 ಗಂಟೆಗೆ ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ ನಡೆಯಲಿದ್ದು, ಬಳಿಕ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಾಗೂ ಸುವರ್ಣ ಮಹೋತ್ಸವದ ನೆನಪಿನಲ್ಲಿ ಸಾಧಕರಿಗೆ ಸನ್ಮಾನ ನಡೆಯುಲಿದೆ. ಸಂಜೆ 7-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.
ಸಮಾನಾಂತರ ವೇದಿಕೆ ಒಂದರಲ್ಲಿ ಬೆಳಿಗ್ಗೆ 9-30 ಗಂಟೆಗೆ ಗೋಷ್ಠಿ -3ರಲ್ಲಿ ‘ಸೃಜನಶೀಲತೆ – ವಿದ್ಯುನ್ಮಾನ ಮಾಧ್ಯಮಗಳ ಸವಾಲುಗಳು’, ಗೋಷ್ಠಿ -4ರಲ್ಲಿ ‘ದಲಿತ ಸಾಹಿತ್ಯದ ನೆಲೆಗಳು’, ಗೋಷ್ಠಿ -5ರಲ್ಲಿ ‘ಕರ್ನಾಟಕ – ಪ್ರಕೃತಿ ವಿಕೋಪದ ಆತಂಕಗಳು’, ಗೋಷ್ಠಿ -6ರಲ್ಲಿ ‘ಶತಮಾನೋತ್ಸವ ವರ್ಷದ ಕನ್ನಡ ಲೇಖಕರು’ ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ಮತ್ತು ಗೋಷ್ಠಿ -7ರಲ್ಲಿ ಕವಿಗೋಷ್ಠಿ -3 ನಡೆಯಲಿದೆ. ಸಂಜೆ 7-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.
ಸಮಾನಾಂತರ ವೇದಿಕೆ ಎರಡರಲ್ಲಿ ಬೆಳಗ್ಗೆ 9-30 ಗಂಟೆಗೆ ಗೋಷ್ಠಿ -3ರಲ್ಲಿ ‘ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಸಾಹಿತ್ಯದ ಪಾತ್ರ’, ಗೋಷ್ಠಿ -4ರಲ್ಲಿ ‘ಕರ್ನಾಟಕದ ಚಿತ್ರಣ ಬದಲಿಸಿದ ಚಳವಳಿಗಳು’, ಗೋಷ್ಠಿ -5ರಲ್ಲಿ ‘ಸಾಹಿತ್ಯ ಪಾತ್ರಗಳ ಮುಖಾಮುಖಿ’, ಗೋಷ್ಠಿ -6ರಲ್ಲಿ ವಿಶೇಷ ಉಪನ್ಯಾಸ ‘ಶತಮಾನ – ರಜತ – ಸುವರ್ಣ ಸಂಭ್ರಮ’, ಗೋಷ್ಠಿ -7ರಲ್ಲಿ ‘ಯುವಜನತೆ ಮತ್ತು ಸಬಲೀಕರಣ’, ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ನಡೆಯಲಿದೆ. ಸಂಜೆ 7-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.
ದಿನಾಂಕ 22 ಡಿಸೆಂಬರ್ 2024ರಂದು ಪ್ರಧಾನ ವೇದಿಕೆಯಲ್ಲಿ ಬೆಳಗ್ಗೆ 9-30 ಗಂಟೆಗೆ ನಡೆಯುವ ಗೋಷ್ಠಿ -8ರಲ್ಲಿ ಅಮೆರಿಕಾದ ಶ್ರೀ ಅಮರನಾಥ ಗೌಡ ಇವರ ಅಧ್ಯಕ್ಷತೆಯಲ್ಲಿ ‘ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ’, ಗೋಷ್ಠಿ -9ರಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಇದರ ಅಧ್ಯಕ್ಷರಾದ ಶ್ರೀಮತಿ ನಾಗಲಕ್ಷ್ಮಿ ಚೌಧರಿ ಇವರ ಅಧ್ಯಕ್ಷತೆಯಲ್ಲಿ ‘ಸ್ತ್ರೀ ಎಂದರೆ ಅಷ್ಟೇ ಸಾಕೆ ?’, ಗೋಷ್ಠಿ -10ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರ ಅಧ್ಯಕ್ಷತೆಯಲ್ಲಿ ‘ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣ : ಸಾಧ್ಯತೆ ಮತ್ತು ಸವಾಲುಗಳು’ ಎಂಬ ವಿಷಯಗಳ ಬಗ್ಗೆ ವಿಷಯ ಮಂಡನೆ ನಡೆಯಲಿದೆ. ಮಧ್ಯಾಹ್ನ ಗಂಟೆ 2-10ರಿಂದ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಾಗೂ ಸುವರ್ಣ ಮಹೋತ್ಸವದ ನೆನಪಿನಲ್ಲಿ ಸಾಧಕರಿಗೆ ಸನ್ಮಾನ ನಡೆಯುಲಿದೆ. 3-30 ಗಂಟೆಗೆ ಬಹಿರಂಗ ಅಧಿವೇಶನ ಮತ್ತು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 7-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.
ಸಮಾನಾಂತರ ವೇದಿಕೆ 1ರಲ್ಲಿ ಬೆಳಿಗ್ಗೆ 9-30 ಗಂಟೆಗೆ ಗೋಷ್ಠಿ -8ರಲ್ಲಿ ‘ಪುನಶ್ಚೇತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು’, ಗೋಷ್ಠಿ -9ರಲ್ಲಿ ‘ಸಮಾನತೆ ಸಾರಿದ ದಾರ್ಶನಿಕರು’, ಗೋಷ್ಠಿ -10ರಲ್ಲಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ – 2022 : ಪರಿಣಾಮಕಾರಿ ಅನುಷ್ಠಾನ’, ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ನಡೆಯಲಿದೆ. ಸಂಜೆ 7-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.
ಸಮಾನಾಂತರ ವೇದಿಕೆ ಎರಡರಲ್ಲಿ ಬೆಳಗ್ಗೆ 9-30 ಗಂಟೆಗೆ ಗೋಷ್ಠಿ -8ರಲ್ಲಿ ‘ಹೊಸ ತಲೆಮಾರಿನ ಸಾಹಿತ್ಯ’, ಗೋಷ್ಠಿ -9ರಲ್ಲಿ ‘ಸಂಕೀರ್ಣ ನೆಲೆಗಳು -2’ ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ಮತ್ತು ಗೋಷ್ಠಿ -10ರಲ್ಲಿ ಕವಿಗೋಷ್ಠಿ -4 ನಡೆಯಲಿದೆ. ಸಂಜೆ 7-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.