ಉಡುಪಿ : ಸುಶಾಸನ ಉಡುಪಿ ಪ್ರಾಯೋಜಕತ್ವದಲ್ಲಿ ಸುಧಾಕರ ಆಚಾರ್ಯರ ಕಲಾರಾಧನೆಯ 33ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಕಾರ್ಯಕ್ರಮವು ಉಡುಪಿ ಕಿದಿಯೂರು ಹೊಟೇಲ್‌ನಲ್ಲಿ ದಿನಾಂಕ 15-08-2023 ಮಂಗಳವಾರದಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಪಟ್ಟ ಸತೀಶ ಶೆಟ್ಟಿಯವರು “ಯಕ್ಷಗಾನ ತಾಳಮದ್ದಳೆಯ ಮೂಲಕ ‘ಕಾಶ್ಮೀರ ವಿಜಯ’ ಪ್ರಸ್ತುತಿಯೊಂದಿಗೆ ಜನಮಾನಸದಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಿಗೊಳಿಸುವ ಸಂಕಲ್ಪ ಶ್ಲಾಘನೀಯ. ದೇಶಪ್ರೇಮವನ್ನು ಉದ್ದೀಪನಗೊಳಿಸುವ ಕಥೆಯಾಧಾರಿತ ಸ್ವರಾಜ್ಯ ವಿಜಯ, ಹೈದರಾಬಾದ್ ವಿಜಯ, ಕಾಶ್ಮೀರ ವಿಜಯ ಎನ್ನುವ ಪ್ರಸಂಗಗಳನ್ನು ಪ್ರಸ್ತುತಪಡಿಸಿದ ಹೆಚ್ಚುಗಾರಿಕೆಯೊಂದಿಗೆ 33 ವರ್ಷಗಳಿಂದ ಸ್ವಾತಂತ್ರ್ಯೋತ್ಸವದಂದು ತಾಳಮದ್ದಳೆ ಆಯೋಜಿಸಿಕೊಂಡು ಬರುತ್ತಿರುವ ಸುಧಾಕರ ಆಚಾರ್ಯರದ್ದು ಐತಿಹಾಸಿಕ ಹೆಜ್ಜೆಯಾಗಿದೆ” ಎಂದು ಹೇಳಿದರು.
ಪ್ರಸಂಗಕರ್ತ ಪ್ರೊ. ಪವನ್ ಕಿರಣ್ ಕೆರೆ ಪ್ರಸ್ತಾವನೆಗೈದರು. ಶಾಸಕರಾದ ಯಶ್ ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಶುಭ ಹಾರೈಸಿದರು. ಅಮೆರಿಕ ನ್ಯೂಜೆರ್ಸಿಯ ಪುತ್ತಿಗೆ ಮಠದ ಅರ್ಚಕ ರಾಘವೇಂದ್ರ ಮೂಡುಬಿದಿರೆ, ಹರ್ಷದ ಪ್ರಕಾಶ್ ರಿಟೇಲ್ ಪೈ.ಲಿ.ನ ಎಂ.ಡಿ. ಶ್ರೀ ಕೆ. ಸೂರ್ಯಪ್ರಕಾಶ್, ತೋಟದಮನೆ ದಿವಾಕರ ಶೆಟ್ಟಿ, ಉದ್ಯಮಿಗಳಾದ ಬಿ.ರಮಾನಂದ ರಾವ್, ಬಿ.ರಾಮಪ್ರಸಾದ ರಾವ್, ಕಿದಿಯೂರು ಹೊಟೇಲ್‌ನ ಡಾ.ಅಭಿನ್ ದೇವದಾಸ ಶ್ರೀಯಾನ್, ವಿ.ಜಿ. ಶೆಟ್ಟಿ, ನರಸಿಂಹ ಭಟ್ ಖಂಡಿಗೆ, ಡಾ.ಹರೀಶ ಜೋಷಿ, ಡಾ.ಪ್ರಖ್ಯಾತ್ ಶೆಟ್ಟಿ, ಟಿ.ಶಂಭು ಶೆಟ್ಟಿ, ಭುವನ ಪ್ರಸಾದ ಹೆಗ್ಡೆ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ತ್ರಿಲೋಚನ ಶಾಸ್ತ್ರಿ ಅಮಿತಾ ಸುಧಾಕರ ಆಚಾರ್ಯ, ಡಾ.ದಿವ್ಯಾ ಸತ್ರಾಜಿತ ಭಾರ್ಗವ್ ಉಪಸ್ಥಿತರಿದ್ದರು.
ಭಾಗವತರಾದ ಎಂ. ದಿನೇಶ ಅಮ್ಮಣ್ಣಾಯ, ಪಟ್ಲ ಸತೀಶ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಡಾ. ಪ್ರಖ್ಯಾತ್ ಶೆಟ್ಟಿ ಹಾಗೂ ಪ್ರಸಿದ್ಧ ಅರ್ಥಧಾರಿಗಳ ಸಹಭಾಗಿತ್ವದಲ್ಲಿ ಸುಂದರ ಭ್ರಾತೃತ್ವ ‘ಕಾಶ್ಮೀರ ವಿಜಯ’ ತಾಳಮದ್ದಳೆ ಪ್ರಸ್ತುತಿಗೊಂಡಿತು. ಸ್ವಾತಂತ್ರ್ಯೋತ್ಸವ ತಾಳಮದ್ದಳೆಯ ಸಂಘಟಕ ಸುಧಾಕರ ಆಚಾರ್ಯ ಸ್ವಾಗತಿಸಿದರು. ಉಪನ್ಯಾಸಕ ಸುಜಯೀಂದ್ರ ಹಂದೆ ನಿರೂಪಿಸಿ, ವಂದಿಸಿದರು.