ಮಂಗಳೂರು : ನಡೂರು ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮೇಳದವರು ನಗರದ ಡಾನ್ಬಾಸ್ಕೋ ಹಾಲ್ನಲ್ಲಿ ‘ಕೃಷ್ಣ ಗಾರುಡಿ’ ಯಕ್ಷಗಾನ ಪ್ರದರ್ಶಿಸಿದರು. ಈ ವೇಳೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪ್ ಕುಮಾರ ಕಲ್ಕೂರ ಅವರು “ಮಳೆಗಾಲದಲ್ಲಿ ಯಕ್ಷಗಾನ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ” ಎಂದರು. ಕರ್ನಾಟಕ ಯಕ್ಷಧಾಮ ಮತ್ತು ಕಲ್ಕೂರ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭಾಗವತರಾದ ಶ್ರೀ ಸದಾಶಿವ ಅಮೀನ್ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸಮ್ಮಾನಿಸಲಾಯಿತು.
ಸಿ.ಎ. ಶಿವಾನಂದ ಪೈ. ಪಿ.ಲಕ್ಷ್ಮೀ ನಾರಾಯಣ ಉಪಾಧ್ಯ, ಪೊಳಲಿ ನಿತ್ಯಾನಂದ ಕಾರಂತ ಮೊದಲಾದವರು ಉಪಸ್ಥಿತರಿದ್ದರು. ಶ್ರೀ ಜನಾರ್ದನ ಹಂದೆ ಸ್ವಾಗತಿಸಿ, ವಂದಿಸಿದರು. ಕೊನೆಗೆ ಯಕ್ಷಗಾನ ಪ್ರದರ್ಶನ ಮನೋಜ್ಞವಾಗಿ ನೆರವೇರಿತು.