ಯಲ್ಲಾಪುರ : ಶ್ರೀ ಸುಮೇರು ಜ್ಯೋತಿರ್ವನಮ್ ಇವರು ಭಾರತೀಯ ಜ್ಞಾನ ವಿಜ್ಞಾನ ಪರಿಷದ್ (ರಿ.) ಮೈಸೂರು, ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ರಿ.) ಹಾಗೂ ಸಾತ್ವಿಕ್ ಫೌಂಡೇಶನ್ (ರಿ.) ಕಾಗಾರಕೊಡ್ಲು ಇದರ ಸಹಯೋಗದೊಂದಿಗೆ ‘ಭಾರತೀಯತೆಯ ಗರಿಮೆ’ ಎಂಬ ವಿಷಯದಲ್ಲಿ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆ ನಡೆಸುತ್ತಿದ್ದು ಆಸಕ್ತರು 30-08-2023ರ ಒಳಗೆ ತಮ್ಮ ಪ್ರಬಂಧವನ್ನು ಕಳುಹಿಸಲು ಈ ಮೂಲಕ ಕೇಳಿಕೊಳ್ಳಲಾಗಿದೆ.
ನಿಯಮಗಳು :
ಪ್ರಬಂಧವು ನಮ್ಮ ನಾಡು, ನಡೆ, ನುಡಿ, ಸಂಸ್ಕೃತಿ, ಕಾವ್ಯ ಸಾಹಿತ್ಯ ಮತ್ತು ಇತಿಹಾಸ ಆಚರಣೆ ಇತ್ಯಾದಿಗಳ ವಿಷಯಗಳನ್ನು ಒಳಗೊಂಡಿರಲಿ. ಪ್ರಬಂಧವು ಬಿಂದು ರೂಪವಾಗಿರಲಿ ಮತ್ತು ಒಂದು ಬಿಂದುವಿನ ವಿವರಣೆ ನಾಲ್ಕೈದು ವಾಕ್ಯಗಳನ್ನು ಮೀರದಿರಲಿ. ಭಾರತೀಯತೆಯ ಎಲ್ಲಾ ಮಜಲುಗಳನ್ನು ಮುಟ್ಟುವ ಅನೇಕ ಬಿಂದುಗಳಿಂದ ಕೂಡಿದ ಸಂಕ್ಷೇಪ ಹಾಗೂ ಸಾರಭೂತ ಪ್ರಬಂಧವಾಗಿರಲಿ. ಪುಟಗಳ ನಿರ್ಬಂಧ ಇರುವುದಿಲ್ಲ ಮತ್ತು ವಯೋಮಾನ ನಿರ್ಬಂಧ ಇರುವುದಿಲ್ಲ. ಕೈ ಬರಹದಕಲ್ಲಿ ಅಥವಾ ಟೈಪ್ ಮಾಡಿದ ಪ್ರಬಂಧವನ್ನು ನೇರವಾಗಿ, ಅಂಚೆ, ವಾಟ್ಸ್ ಆ್ಯಪ್ ಅಥವಾ ಮೇಲ್ ಮೂಲಕ ತಲುಪಿಸಬಹುದು. ಬರಹವು ಕನ್ನಡ ಭಾಷೆಯಲ್ಲಿರಲಿ. ನಿರ್ಣಾಯಕರ ತೀರ್ಮಾನವೇ ಅಂತಿಮ. ಹೆಸರು, ವಿಳಾಸ, ವಯಸ್ಸು, ದೂರವಾಣಿ ಸಂಖ್ಯೆ, ಇ ಮೇಲ್, ಸ್ಪಷ್ಟವಾಗಿ ನಮೂದಿಸಬೇಕು. ಆಯ್ಕೆಯಾದ ಮೊದಲ ಐದು ಪ್ರಬಂಧಗಳಿಗೆ ಬಹುಮಾನ ನೀಡಲಾಗುವುದು.
ಬಹುಮಾನಗಳು :
ಪ್ರಥಮ- ರೂಪಾಯಿ 4,000, ದ್ವಿತೀಯ- ರೂಪಾಯಿ 3,000, ತೃತೀಯ- ರೂಪಾಯಿ 2,000, ಮತ್ತು 2 ಪ್ರೋತ್ಸಾಹಕ ಬಹುಮಾನಗಳಿಗೆ ತಲಾ ರೂಪಾಯಿ 500/- ರಂತೆ ಬಹುಮಾನಗಳನ್ನು ನೀಡಲಾಗುವುದು.
ಪ್ರಬಂಧಗಳನ್ನು ಇ ಮೇಲ್- [email protected] , ವಾಟ್ಸ್ ಆ್ಯಪ್- 9481184788, ವಿಳಾಸ – ಸುಮೇರು ಜ್ಯೋತಿರ್ವನಮ್, ಉಮ್ಮಚಗಿ ಅಂಚೆ, ಯಲ್ಲಾಪುರ ತಾಲೂಕು (ಉ.ಕ) 581347 ಈ ವಿಳಾಸಗಳಿಗೆ ಕಳುಹಿಸಿಕೊಡಬಹುದು.