ಹುಬ್ಬಳ್ಳಿ : ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆಯಿಂದ ನಾಲ್ಕು ವರ್ಷಗಳ ‘ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಕೋವಿಡ್ ಇನ್ನಿತರ ಕಾರಣಗಳಿ೦ದ ಹಿ೦ದಿನ ಮೂರು ವರ್ಷಗಳಿಂದ ಪ್ರಶಸ್ತಿ ನೀಡಿರಲಿಲ್ಲ. ಈಗ 2020, 2021, 2022 ಹಾಗೂ ಈ ವರ್ಷದ್ದೂ ಸೇರಿ ನಾಲ್ಕು ವರ್ಷಗಳಲ್ಲಿ ಪ್ರಕಟವಾದ ಮುದ್ರಿತ ಕವನ ಸಂಕಲನಗಳಿಗೆ ತಲಾ ರೂ.10,000/- ಮೊತ್ತವಿರುವ ಪ್ರಶಸ್ತಿಯನ್ನು ನೀಡಲಾಗುವುದು. ನವೆಂಬರ್ ತಿಂಗಳಲ್ಲಿ ಕರ್ಕಿ ಅವರ 116ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕವನ ಸಂಕಲನಗಳು ಮೊದಲ ಬಾರಿಗೆ ಪ್ರಕಟವಾಗಿದ್ದಾಗಿರಬೇಕು. ಅನುವಾದಿತ ಕೃತಿಗಳಾಗಿರಬಾರದು. ಈ ಮೊದಲು ಯಾವುದೇ ಪ್ರಶಸ್ತಿ ಪಡೆದಿರಬಾರದು. ಆಸಕ್ತರು ಕವನ ಸಂಕಲನದ ಎರಡು ಪ್ರತಿಗಳನ್ನು ಸೆಪ್ಟೆಂಬರ್ 5ರೊಳಗೆ ಎಂ.ಎ.ಸುಬ್ರಹ್ಮಣ್ಯ, ಸಾಹಿತ್ಯ ಪ್ರಕಾಶನ, ಕೊಪ್ಪಿಕರ ರಸ್ತೆ, ಹುಬ್ಬಳ್ಳಿ-580020 ಇಲ್ಲಿಗೆ ಕಳುಹಿಸಿಕೊಡಬೇಕು.