ಮೈಸೂರು : ಕುಮಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ (ರಿ.) ಮೈಸೂರು ಪ್ರಸ್ತುತಪಡಿಸುವ 26ನೇ ‘ರಾಷ್ಟ್ರೀಯ ನಿರಂತರ ಕಲೆಮನೆ ಉತ್ಸವ’ವು ದಿನಾಂಕ 27-08-2023ರಂದು ಸಂಜೆ 3.00ರಿಂದ ಮೈಸೂರಿನ ಹೆಬ್ಬಾಳ 2ನೇ ಹಂತದ ಸರಕಾರಿ ಪದವಿಪೂರ್ವ ಕಾಲೇಜಿನ ಹಿಂಭಾಗದ ಅಭಿಷೇಕ್ ವೃತ್ತದ ಬಳಿ ಇರುವ ಕಲೆಮನೆ ಸಭಾಂಗಣದಲ್ಲಿ ನಡೆಯಲಿರುವುದು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ನಾಟ್ಯಾರಾಧನ ಸಂಸ್ಥೆಯ ಸ್ಥಾಪಕಿ ಮತ್ತು ನಿರ್ದೇಶಕಿಯಾದ ಗುರು ವಿದುಷಿ ವೀಣಾ ಶ್ರೀಧರ್ ಮೊರಬ್ ಇವರ ಶಿಷ್ಯವೃಂದದವರಿಂದ ಭರತನಾಟ್ಯ ಪ್ರದರ್ಶನ, ಬೆಂಗಳೂರಿನ ನಟನ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ ಇದರ ಸ್ಥಾಪಕಿ ಮತ್ತು ನಿರ್ದೇಶಕಿಯಾದ ಗುರು ವಿದುಷಿ ಡಾ.ರಕ್ಷಾ ಕಾರ್ತಿಕ್ ಮತ್ತು ಶಿಷ್ಯವೃಂದದವರಿಂದ ‘ದಾಸ ಶ್ರೇಷ್ಠ ಪುರಂದರ’ ಎಂಬ ನೃತ್ಯರೂಪಕ, ಬೆಂಗಳೂರಿನ ಶ್ರೀ ಮಾರಿಕಾಂಬಾ ನೃತ್ಯ ಕಲಾಕೇಂದ್ರ ಇದರ ಸ್ಥಾಪಕಿ ಮತ್ತು ನಿರ್ದೇಶಕಿಯಾದ ಗುರು ವಿದುಷಿ ಸ್ಮಿತಾ ಪ್ರಕಾಶ್ ಶಿರಸಿ ಇವರ ಶಿಷ್ಯವೃಂದದವರಿಂದ ಹೆಜ್ಜೆ ಗೆಜ್ಜೆ ನೃತ್ಯ ಸಂಭ್ರಮ ಹಾಗೂ ಬೆಂಗಳೂರಿನ ಸ್ವಯುಕ್ತಿ ನಾಟ್ಯಾಶಾಲಾ ಇದರ ಸ್ಥಾಪಕಿ ಮತ್ತು ನಿರ್ದೇಶಕಿಯಾದ ವಿದುಷಿ ರಾಗಿಣಿ ಐಯ್ಯರ್ ಇವರ ಶಿಷ್ಯವೃಂದದವರಿಂದ ಭಾರತನಾಟ್ಯ ಪ್ರದರ್ಶನ ನಡೆಯಲಿರುವುದು.
ಈ ಕಾರ್ಯಕ್ರಮಕ್ಕೆ ಮೈಸೂರಿನ ಕುಮಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.