ಮಡಿಕೇರಿ: ವೀರ ಲೋಕ ಪುಸ್ತಕ ಪ್ರಕಾಶನ ಸಂಸ್ಥೆಯು ರಾಜ್ಯಾಂದ್ಯಂತ ಆಯೋಜಿಸಿರುವ ಕಥಾ ಕಮ್ಮಟ ಯೋಜನೆಯಂತೆ ಕೊಡಗಿನಲ್ಲೂ ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕವು ಕೈ ಜೋಡಿಸಿ ಅಕ್ಟೋಬರ್ 7 ಮತ್ತು 8ರಂದು ಮಡಿಕೇರಿಯಲ್ಲಿ ಕಥಾ ಕಮ್ಮಟವನ್ನು ಉಚಿತ ಕಥಾ ಶಿಬಿರವನ್ನು ಉಚಿತವಾಗಿ ಆಯೋಜಿಸಲಾಗಿದೆ.
ಹಿರಿಯ ಸಾಹಿತಿ, ಬರಹಗಾರ ಪ್ರಭಾಕರ ಶಿಶಿಲ ಅವರು ಶಿಬಿರವನ್ನು ನಡೆಸಿಕೊಡಲಿದ್ದಾರೆಂದು ವೀರಲೋಕ ಜಿಲ್ಲಾ ಸಂಚಾಲಕ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದ್ದಾರೆ. ಶಿಬಿರದ ಸಂಚಾಲಕರಾಗಿ ಸಂಪತ್ ಕುಮಾರ್ ಹಾಗೂ ಸಹ ಸಂಚಾಲಕರಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ರೇವತಿ ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಶಿಬಿರವು ವೀರಲೋಕ ಪ್ರಕಾಶನದ ಮುಖ್ಯಸ್ಥ ಶ್ರೀನಿವಾಸ್, ಸಾಹಿತಿಗಳಾದ ಕಾ.ತ.ಚಿಕ್ಕಣ್ಣ ಮತ್ತು ಲಕ್ಷಣ ಕೊಡಸೆ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ. 35 ವರ್ಷ ಮೀರದ ಶಿಭಿರಾರ್ಥಿಗಳು, ನಿಗದಿತ ಅರ್ಜಿಯಲ್ಲಿ ವಿವರಗಳನ್ನು ಸೆಪ್ಟೆಂಬರ್ 30ರ ಒಳಗೆ ಬಿ.ಜಿ. ಅನಂತಶಯನ, ದೇಸಿ ಜಗಲಿ ಕಥಾ ಕಮ್ಮಟ, ‘ಚಿರಂತನ’’ ಕಾನ್ವೆಂಟ್ ಜಂಕ್ಷನ್, ಮಡಿಕೇರಿ – 571201 ಇಲ್ಲಿಗೆ ಕಳುಹಿಸುವುದು. ಮೊದಲ 35 ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಅರ್ಜಿ ನಮೂನೆಗೆ ಸಂಪತ್‌ಕುಮಾರ್ 9448614999 ಇವರನ್ನು ಸಂಪರ್ಕಿಸಬಹುದು.