ಮಂಗಳೂರು : ಕವನ ಸಂಕಲನಗಳಿಗೆ ಲೇಖಕ-ಲೇಖಕಿಯರಿಂದ ಕವನಗಳ ಆಹ್ವಾನ. ಮಂಗಳೂರಿನ ಕಥಾಬಿಂದು ಪ್ರಕಾಶನ ಕನ್ನಡ ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಹಲವು ಸಾಹಿತ್ಯ ಸ್ನೇಹಿ ಯೋಜನೆಗಳನ್ನು ನೀಡುತ್ತಾ ಬಂದಿದೆ. ಈ ವರ್ಷದ ಅಕ್ಟೋಬರ್ 29ರಂದು ಸಂಸ್ಥೆಯ 16ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ದಿನಪೂರ್ತಿ ಕಾರ್ಯಕ್ರಮವನ್ನು ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಿಯಾಯಿತಿ ದರದಲ್ಲಿ ಪುಸ್ತಕ ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರ ಅನ್ವಯ 32 ಪುಟ ಮೀರದ ಸೈಡ್ ಪಿನ್ ಪುಸ್ತಕಗಳನ್ನು ಹೊರ ತರುವ ಗುರಿ ಇಡಲಾಗಿದೆ. ಲೇಖಕರು ಈ ಕೆಳಗಿನ ಒಳ ಹೂರಣವನ್ನು ಕಳಿಸಬೇಕಾಗುತ್ತದೆ.
1. ಒಂದು ಪುಟ ಮೀರದ 30 ಕವನಗಳನ್ನು ವಾಟ್ಸಪ್ ಮುಖಾಂತರ 9341410153 WhatsApp ಗೆ ಸೆಪ್ಟೆಂಬರ್ 20ರ ಒಳಗಾಗಿ ತಲುಪಿಸಬೇಕು.
2. 150 ಶಬ್ದ ಮೀರದ ಲೇಖಕರ ಮಾತು
3. 150 ಶಬ್ದ ಮೀರದ ಮುನ್ನುಡಿ
4. 50 ಶಬ್ಬ ಮೀರದ ಲೇಖಕರ ಪರಿಚಯ ಮತ್ತು ಕಲರ್ ಫೋಟೋ ಇವೆಲ್ಲವನ್ನೂ ಏಕ ಕಂತಿನಲ್ಲಿ ಕಳುಹಿಸಬೇಕು.
ಪುಸ್ತಕಗಳನ್ನು 70gsm ಕಾಗದದಲ್ಲಿ ಅಚ್ಚು ಹಾಕಿ 20 ಪ್ರತಿಗಳನ್ನು ನೀಡಲಾಗುವುದು. ಪುಸ್ತಕವನ್ನು ಪ್ರಕಾಶಕರ ಖರ್ಚಿನಲ್ಲಿ ಲೋಕಾರ್ಪಣೆ ಮಾಡಿ ಸನ್ಮಾನಿಸಲಾಗುವುದು. ಹೊರ ಕವಚದ ತಯಾರಿ ಮತ್ತು ಕರಡು ತಿದ್ದುವ ಕೆಲಸ, ಪುಸ್ತಕದ ವಿನ್ಯಾಸ, ಒಳಪುಟ ವಿನ್ಯಾಸ (DTP) ಪ್ರಕಾಶಕರು ನಿರ್ವಹಿಸುತ್ತಾರೆ. ಇವೆಲ್ಲದರ ಒಟ್ಟು ಖರ್ಚು ರೂ.3,500/- ಆಗಿರುತ್ತದೆ. ಆಸಕ್ತ ಉದಯೋನ್ಮುಖರು 9341410153 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಹೆಸರು ನೋಂದಾಯಿಸಿ ಮುಂದಿನ ಪ್ರಕ್ರಿಯೆಗೆ ತೊಡಗಬಹುದು, ಪುಸ್ತಕದ ಹಕ್ಕುಗಳು ಲೇಖಕರದ್ದಾಗಿರುತ್ತದೆ. ಇದು ಈ ವಿಶೇಷ ಸಂದರ್ಭದ ಯೋಜನೆಯಾಗಿದ್ದು ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳುವುದು, ಮೊದಲು ಬಂದ ಮೂವತ್ತು ಕವಿಗಳಿಗೆ ಮಾತ್ರ ಈ ಅವಕಾಶ. ಹೆಚ್ಚಿನ ಮಾಹಿತಿಗೆ 9341410153 ಪಿ.ವಿ. ಪ್ರದೀಪ್ ಕುಮಾರ್ ಮಂಗಳೂರು.