ಉಡುಪಿ : ಉಡುಪಿಯ 26 ಬಡಗುಬೆಟ್ಟು ಬೈಲೂರು ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಸಿಂಹ ಮಾಸದ ಐದು ಶುಕ್ರವಾರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ಸರಣಿಯ ಮೂರನೆಯ ಶುಕ್ರವಾರ ದಿನಾಂಕ 01-09-2023ರ ಸಂಜೆ ಕುಮಾರಿ ಹಿತಾ ಮಯ್ಯ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಲಿಟ್ಟಲ್ ರಾಕ್ ಇಂಡಿಯನ್ ಸ್ಕೂಲ್ ಇಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ರಾಘವೇಂದ್ರ ಮಯ್ಯ ಮತ್ತು ರಮಣಿ ಮಯ್ಯ ಇವರ ಸುಪುತ್ರಿ. ಸನಾತನ ನಾಟ್ಯಾಲಯದ ವಿದುಷಿ ವಾಣಿಶ್ರೀ ಇವರ ಶಿಷ್ಯೆಯಾಗಿರುವ ಕುಮಾರಿ ಹಿತಾ ಮಯ್ಯ ಕಳೆದ ಏಳು ವರ್ಷಗಳಿಂದ ಭಾರತ್ಯನಾಟ್ಯ ಅಭ್ಯಾಸ ಮಾಡುತಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಮಧೂರು ಬಾಲಸುಬ್ರಮಣ್ಯಂ ಇವರಿಂದ ಅಭ್ಯಾಸ ಮಾಡುತ್ತಿದ್ದಾರೆ.
ತನ್ನ ಐದನೇ ವಯಸ್ಸಿನಿಂದ ಭಾರತ್ಯನಾಟ್ಯ ಕಾರ್ಯಕ್ರಮ ನೀಡಲು ಆರಂಭಿಸಿರುವ ಈಕೆ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಈಕೆಯ ಸಾಧನೆಗೆ ಬೆಂಗಳೂರಿನ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ಆರ್ಟ್ಸ್ ನಿಂದ ಕಲಾಯಶಸ್ವಿ ಪ್ರಶಸ್ತಿ , ಎ.ಐ.ಡಿ.ಎ ಇಂದ ಬಾಲಶ್ರೀ ಪ್ರಶಸ್ತಿ ಹಾಗೂ ವಿಜಯಕರ್ನಾಟಕದಿಂದ ವಿಕ ಸಕ್ಕತ್ ಸ್ಟಾರ್ ಮುಂತಾದ ಪ್ರಶಸ್ತಿಗಳು ಲಭಿಸಿವೆ.