Subscribe to Updates

    Get the latest creative news from FooBar about art, design and business.

    What's Hot

    ನೀನಾಸಮ್ ತಿರುಗಾಟ – 2025ದಲ್ಲಿ ನಾಟಕ ಪ್ರದರ್ಶನ | ಅಕ್ಟೋಬರ್ 14 ಮತ್ತು 15

    October 11, 2025

    ಮಂಗಳಗಂಗೋತ್ರಿಯಲ್ಲಿ ರಂಗು ಮೂಡಿಸಿದ ‘ಕಲಾದರ್ಪಣ’ ಚಿತ್ರಕಲಾ ಶಿಬಿರ

    October 11, 2025

    ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಸಂಗೀತ ಕಾರ್ಯಕ್ರಮ | ಅಕ್ಟೋಬರ್ 12

    October 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ರಂಗಶಂಕರದಲ್ಲಿ ‘ದಕ್ಲಕಥಾ ದೇವಿಕಾವ್ಯ’ | ಸೆಪ್ಟೆಂಬರ್ 12ರಂದು
    Drama

    ಬೆಂಗಳೂರಿನ ರಂಗಶಂಕರದಲ್ಲಿ ‘ದಕ್ಲಕಥಾ ದೇವಿಕಾವ್ಯ’ | ಸೆಪ್ಟೆಂಬರ್ 12ರಂದು

    September 7, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಜಂಗಮ ಕಲೆಕ್ಟಿವ್ ಪ್ರಸ್ತುತ ಪಡಿಸುವ ‘ದಕ್ಲಕಥಾ ದೇವಿಕಾವ್ಯ’ ನಾಟಕದ ಪ್ರದರ್ಶನವು ಬೆಂಗಳೂರಿನ ರಂಗಶಂಕರದಲ್ಲಿ ದಿನಾಂಕ 12-09-2023ರಂದು ಸಂಜೆ ಗಂಟೆ 7.30ಕ್ಕೆ ನಡೆಯಲಿದೆ.

    ಕೆ.ಬಿ. ಸಿದ್ದಯ್ಯನವರ ಆಯ್ದ ಬರಹಗಳನ್ನು ಆಧರಿಸಿದ ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದು ಲಕ್ಷ್ಮಣ್ ಕೆ.ಪಿ.ಯವರು. ಇವರಿಗೆ ಸ್ಕಂದ ಘಾಟೆ ಹಾಗೂ ಶ್ರೀಹರ್ಷ ಜಿ.ಎನ್. ಸಹನಿರ್ದೇಶಕರಾಗಿ ಸಹಕರಿಸಿದ್ದಾರೆ. ನಾಟಕದ ಬೆಳಕಿನ ವಿನ್ಯಾಸವನ್ನು ಮಂಜು ನಾರಾಯಣ್ ಮಾಡಲಿದ್ದು, ವಸ್ತ್ರ ವಿನ್ಯಾಸ ಶ್ವೇತಾಮಣಿ ಎಚ್.ಕೆ. ಅವರದ್ದು. ನಾಟಕದಲ್ಲಿ ಪಾತ್ರಧಾರಿಗಳು ಮತ್ತು ಸಂಗೀತಗಾರರಾಗಿ ಬಿಂದು ರಕ್ಷಿದಿ, ರಮಿಕ ಚೈತ್ರ, ಸಂತೋಷ್ ದಿಂಡ್ಗೂರು, ನರಸಿಂಹರಾಜು ಬಿ.ಕೆ. ಹಾಗೂ ಭರತ್ ಡಿಂಗ್ರಿ ಕಲಾಭಿಮಾನಿಗಳನ್ನು ರಂಜಿಸಲಿದ್ದಾರೆ.

    ಹೊಸ ರಂಗ ಪರಿಭಾಷೆಯನ್ನು ಬಹಳ ಜತನದಿಂದ ಕಟ್ಟಿ, ಯಾವುದೇ ಅಬ್ಬರವಿಲ್ಲದೆ ಹಿತಮಿತವಾದ ಸಂಗೀತ ಹಾಗೂ minimalistic stage design ಈ ನಾಟಕದ ಮೆರಗು. ಕೇವಲ ಆಧ್ಯಾತ್ಮಿಕ ಪುರಾಣ ಕಥೆಗಳಿಗೆ ಜೋತು ಬಿದ್ದಿರುವ ಈ ಸಮಯದಲ್ಲಿ ವಿಶಿಷ್ಟವಾದ ಒಂದು ಕಥೆಯನ್ನು ರಂಗರೂಪಕ್ಕೆ ತಂದಿರುವುದು, ಸಿದ್ಧ ಮಾದರಿಯನ್ನು ಮುರಿದು ನಟರ ಅಭಿವ್ಯಕ್ತಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಿ, ನಿರಾಕಾರದಿಂದ ಒಂದು ಆಕಾರವನ್ನು ಸೃಷ್ಟಿಸಿದ ನಿರ್ದೇಶಕರ ಸೃಜನಶೀಲತೆ ಶ್ಲಾಘನೀಯ.

    ಮೇಲು ಕೀಳು ಕೇವಲ ಜನರನ್ನು ಮಾತ್ರ ಅಥವಾ ಒಂದು ಜನಾಂಗವನ್ನು ಮಾತ್ರ ದೂರವಿಟ್ಟಿಲ್ಲ. ಅವರ ಆಚರಣೆ, ಬದುಕು, ಕಥೆ ಹಾಗೂ ಅವರ ಸಂಗೀತ ಪರಿಕರಗಳನ್ನು ದೂರವಿಟ್ಟಿದೆ. ಇಂತಹ ನೆಲ ಮೂಲದ ತಮಟೆ, ಅರೆ ವಾದ್ಯಗಳನ್ನು ರಂಗದ ಮೇಲೆ ತಂದು ಸೂಕ್ಷ್ಮಾತಿಸೂಕ್ಷ್ಮ ನಾದ-ಲಯದೊಂದಿಗೆ ಮನುಷ್ಯನ ವಿಕಾರಗಳನ್ನು, ನೋವು-ಹಸಿವನ್ನು, ಮಣ್ಣು-ಹೆಣ್ಣನ್ನು, ಮುಟ್ಟು-ಹುಟ್ಟನ್ನು ಕೆದಕುವ ಪರಿ ಎಲ್ಲೋ ನಮ್ಮನ್ನೇ ಅಣಕಿಸುವಂತಿದೆ. ಶಿಷ್ಟ ಜಗತ್ತಿನ ಸಾತ್ವಿಕರ ನಡುವೆ ಹಸಿವೆಂಬ ಮಹಾಮಾರಿ ನಮ್ಮೆಲ್ಲರನ್ನು ಆವರಿಸಿಕೊಳ್ಳುವ, ನಾನು, ನನ್ನದು ಎನ್ನುವ ಅಹಂಭಾವವನ್ನು ಕೆಣಕುವಂತಿದೆ.

    ಜಂಗಮ ಕಲೆಕ್ಟಿವ್ :
    ಜಂಗಮ ಕಲೆಕ್ಟಿವ್ ಒಂದು ಚಲನೆ ಮತ್ತು ರೂಪಾಂತರ ತತ್ವಗಳಲ್ಲಿ ನಂಬಿಕೆ ಇರುವ ವಿಭಿನ್ನ ಹಿನ್ನಲೆಯ ಕಲಾವಿದರ ಸಮೂಹ. ಸಾಂಸ್ಕೃತಿಕ ಎಚ್ಚರ ಮತ್ತು ಅರಿವನ್ನು ಹಬ್ಬಿಸುವ ಕಾಯಕವನ್ನು ಮುಖ್ಯವೆಂದು ಭಾವಿಸಿ ಅದಕ್ಕಾಗಿ ರಂಗಭೂಮಿಯನ್ನು ತನ್ನ ಅಭಿವ್ಯಕ್ತಿಯ ದಾರಿಯಾಗಿಸಿಕೊಂಡಿದೆ. ಮತ್ತದರ ವಿಸ್ತರಣೆವೆಂಬಂತೆ ಶಿಕ್ಷಣ, ಸಾಹಿತ್ಯ, ಪ್ರಕಾಶನ, ಸಿನೆಮಾ, ಸಾಮಾಜಿಕ ಹೋರಾಟಗಳಂತಹ ಸೃಜನಶೀಲ ಪ್ರಕ್ರಿಯೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಕರ್ನಾಟಕವನ್ನು ತನ್ನ ಮುಖ್ಯ ಪ್ರಯೋಗ ಭೂಮಿಯಾಗಿಸಿಕೊಂಡು ಜೊತೆಗೆ, ದೇಶ ವಿದೇಶಗಳಲ್ಲಿ ಸಾಂಸ್ಕೃತಿಕ ಜೀವಂತಿಕೆಯನ್ನು ಕಾಪಾಡಿಕೊಳ್ಳಲು ಕೈ ಜೋಡಿಸುತ್ತ ಆ ಮೂಲಕ ಜೀವತತ್ವ ಪ್ರತಿಪಾದಿಸುವ ರಾಜಕೀಯ ಪ್ರಶ್ನೆಯನ್ನು ರೂಪಿಸುತ್ತ ನಾವಿರುವ ನೆಲದ ಮತ್ತು ಸುತ್ತಲಿನ ಜನ ಸಮುದಾಯಗಳ ಬದುಕಿನ ಜೊತೆಗೆ ಬೆರೆತು ಹೋಗುವುದು ಜಂಗಮದ ಮುಖ್ಯ ತುಡಿತ.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಕೆ.ಹೆಚ್.ಕಲಾಸೌಧದಲ್ಲಿ ‘ಅಣ್ಣನ ನೆನಪು’ | ಸೆಪ್ಟೆಂಬರ್ 8ರಂದು  
    Next Article ಉಡುಪಿಯಲ್ಲಿ ಪದ್ಮಶ್ರೀ ಮಂಜಮ್ಮ ಜೋಗತಿ ಜೀವಾನಾಧಾರಿತ ‘ಮಾತಾ’ ಏಕವ್ಯಕ್ತಿ ನಾಟಕ ಪ್ರದರ್ಶನ
    roovari

    Add Comment Cancel Reply


    Related Posts

    ನೀನಾಸಮ್ ತಿರುಗಾಟ – 2025ದಲ್ಲಿ ನಾಟಕ ಪ್ರದರ್ಶನ | ಅಕ್ಟೋಬರ್ 14 ಮತ್ತು 15

    October 11, 2025

    ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ‘ಕಾರಂತ ಉಪನ್ಯಾಸ ಮತ್ತು ರಂಗಪ್ರದರ್ಶನ’ | ಅಕ್ಟೋಬರ್ 12

    October 10, 2025

    ಮೈಸೂರು ರಂಗಾಯಣದಲ್ಲಿ ‘ಒಮ್ಮೆ ಹೆಣ್ಣಾಗು’ ನಾಟಕ ಪ್ರದರ್ಶನ | ಅಕ್ಟೋಬರ್ 12

    October 10, 2025

    ಉಡುಪಿಯಲ್ಲಿ ಕಾರಂತ ಜನ್ಮದಿನೋತ್ಸವ-ಸಾಹಿತ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ | ಅಕ್ಟೋಬರ್ 11

    October 10, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.