Subscribe to Updates

    Get the latest creative news from FooBar about art, design and business.

    What's Hot

    ಸಾಹಿತಿ ಸವಿತಾ ನಾಗಭೂಷಣ ಇವರ ಕೃತಿ ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ

    May 24, 2025

    ಕೊಡಗು ಕಲಾವಿದರ ಸಂಘದಿಂದ ಹಿರಿಯ ಕಲಾವಿದ ಚೆಕ್ಕೆರ ತ್ಯಾಗರಾಜರಿಗೆ ಸನ್ಮಾನ

    May 24, 2025

    ಮಂಗಳೂರು ವಿಶ್ವವಿದ್ಯಾನಿಲಯದ ‘ಯಕ್ಷಮಂಗಳ ಪ್ರಶಸ್ತಿ’ ಪ್ರಕಟ

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನಲ್ಲಿ ‘ಜನಪದ ದೀಪಾರಾಧನೆ 43’ ಪ್ರಶಸ್ತಿ ಪ್ರದಾನ
    Awards

    ಬೆಂಗಳೂರಿನಲ್ಲಿ ‘ಜನಪದ ದೀಪಾರಾಧನೆ 43’ ಪ್ರಶಸ್ತಿ ಪ್ರದಾನ

    September 9, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಹೊನ್ನಾವರದ ಜಾನಪದ ವಿಶ್ವಪ್ರತಿಷ್ಠಾನ, ಅಭಿನವ ಬಳಗ, ಪ್ರಣತಿ ದೊಡ್ಡಹೊಂಡ ಮತ್ತು ಬುಕ್ ಬ್ರಹ್ಮ ಸಹಯೋಗದಲ್ಲಿ ಏರ್ಪಡಿಸಿದ್ದ ‘ಜನಪದ ದೀಪಾರಾಧನೆ 43’ ಪ್ರಶಸ್ತಿ ಪ್ರದಾನ, ಧ್ವನಿ ಸಾಂದ್ರಿಕೆ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭವು ದಿನಾಂಕ 05-09-2023ರಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿನ ಭಾರತೀಯ ವಿದ್ಯಾಭವನದ ಕೆ.ಆರ್.ಜಿ. ಹಾಲ್ ಇಲ್ಲಿ ನಡೆಯಿತು.

    ಈ ಸಮಾರಂಭದಲ್ಲಿ ಕುವೆಂಪು ದೀಪಪ್ರಶಸ್ತಿ ಸ್ವೀಕರಿಸಿದ ಬಹುಮುಖಿ ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡುತ್ತಾ “ಜಾನಪದರಿಗೆ ಲೋಕಜ್ಞಾನ ಅರಿವಿತ್ತು ಅವರು ಯಾವತ್ತೂ ಆತ್ಮತೃಪ್ತಿ ಮತ್ತು ಸಹಬಾಳ್ವೆಗೆ ಹೆಚ್ಚು ಮಹತ್ವ ನೀಡುತ್ತಿದ್ದರು. ಮಾಸ್ತಿಯವರು ಯಾವಾಗಲೂ ಹೇಳುತ್ತಿದ್ದ ಮಾತೆಂದರೆ ಸಾತ್ವಿಕ ಶಕ್ತಿ ಸುಮ್ಮನಿದ್ದರೆ ತಾಮಸ ಶಕ್ತಿ ವಿಜೃಂಭಿಸುತ್ತದೆ. ಆಧುನಿಕ ಶಿಕ್ಷಣ ಪದ್ಧತಿ ನಮ್ಮ ಪರಿಸರವನ್ನು ಮಾತ್ರವಲ್ಲ ಅಂತರಂಗವನ್ನು ಕಲುಷಿತಗೊಳಿಸಿದೆ. ನಾವು ಮತ್ತೆ ಸ್ಥಳೀಯ ಸಂಸ್ಕೃತಿಯ ಕಡೆಗೆ ಮುಖಮಾಡಬೇಕಿದೆ ಎಂದರು. ಹೊನ್ನಾವರದಂಥ ತಾಲ್ಲೂಕು ಕೇಂದ್ರದಲ್ಲಿ ನಲವತ್ತು ವರ್ಷಗಳಿಂದ ದೀಪಾರಾಧನೆಯಂಥ ವಿಶಿಷ್ಟ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಎನ್.ಆರ್.ನಾಯಕ ದಂಪತಿಯ ಕೆಲಸ ಮಾದರಿಯಾದದ್ದು. ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕೆಲಸವನ್ನು ಈ ದಂಪತಿಗಳು ಮಾಡುತ್ತಿರುವುದು ಸ್ತುತ್ಯಾರ್ಹ” ಎಂದರು.

    ಇದೇ ಸಂದರ್ಭದಲ್ಲಿ ಅಭಿನವ ಮತ್ತು ಜಾನಪದ ಪ್ರಕಾಶನ ಪ್ರಕಟಿಸಿರುವ ‘ಮಕ್ಕಳೇ ದೇವರು’ (ಎನ್.ಆರ್.ನಾಯಕರ ಆಯ್ದ ಮಕ್ಕಳ ಕವಿತೆಗಳು) ಸಂ: ಆನಂದ ಪಾಟೀಲ, ಡಾ. ಎನ್.ಆರ್.ನಾಯಕರ ಕಾವ್ಯದ ಛಂದೋವಿನ್ಯಾಸ ಒಂದು ನೋಟ: ಪ್ರೊ.ಆರ್.ಎಸ್.ನಾಯಕ, ಮುಖ್ಯಸ್ಥರು, ಕನ್ನಡ ವಿಭಾಗ, ಅಂಜುಮಾನ್ ಕಾಲೇಜು ಭಟ್ಕಳ, ಉ.ಕ. ಕೃತಿಗಳನ್ನು ಗಾಯಕಿ ಎಂ.ಡಿ.ಪಲ್ಲವಿ ಸಂಗೀತ ಸಂಯೋಜಿಸಿರುವ ‘ಕಾದಲರು’ (ನಾಯಕರ ಬದುಕು ಮಹಾಕಾವ್ಯದ ಗೀತೆಗಳು) ಧ್ವನಿಸಾಂದ್ರಿಕೆಯನ್ನು ಬಿಡುಗಡೆಗೊಳಿಸಿದ ಭಾರತದ ನಿವೃತ್ತ ನ್ಯಾಯಮೂರ್ತಿ ಮಾನ್ಯ ಎನ್. ಸಂತೋಷ್ ಹೆಗ್ಡೆ ಅವರು ಮಾತನಾಡಿ “ಸಮಾಜದಲ್ಲಿ ಒಳ್ಳೆಯ ಕೆಲಸಮಾಡುವವರನ್ನು ಗೌರವಿಸಿದಾಗ ಬೇರೆಯವರಿಗೂ ಪ್ರೇರಣೆಯಾಗುತ್ತದೆ ಮಾತ್ರವಲ್ಲ ಹಾಗೆ ಸಾಧನೆ ಮಾಡಿದವರಿಗೂ ಆಸಕ್ತಿ ಹೆಚ್ಚಾಗಿ ಅವರಲ್ಲಿಯೂ ಹುರುಪು ಬಂದು ಮತ್ತಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಹೀಗೆ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿತ್ವಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸಮಾಜ ನಿರಂತರವಾಗಿ ಮಾಡಬೇಕಿದೆ” ಎಂದರು.

    ಇದೇ ಸಂದರ್ಭದಲ್ಲಿ ಕಾರಂತದೀಪ ಪ್ರಶಸ್ತಿ ಪುರಸ್ಕೃತರಾದ ಡಾ. ಸಿ.ನಾಗಭೂಷಣ ಅವರು ಮಾತನಾಡಿ “ಕೃಷಿಯ ಬಗೆಗೆ ಜಾನಪದದಲ್ಲಿ ಮಾತ್ರವಲ್ಲ ಅನೇಕ ಶಾಸನ ಮತ್ತು ಹಸ್ತಪ್ರತಿಗಳಲ್ಲಿ ಹಲವು ವಿವರಗಳಿವೆ. ಅವುಗಳನ್ನು ಹೊಸ ಬೆಳಕಿನಲ್ಲಿ ವಿಶ್ಲೇಷಿಸಿ ರೈತರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಒಂದು ಹಸ್ತಪ್ರತಿಯಲ್ಲಿ ಹತ್ತು ಬಗೆಯ ಅಡಿಕೆ ತಳಿಗಳ ಬಗೆಗೆ ಹೇಳುತ್ತಾರೆ. ಅವುಗಳನ್ನು ಗುರುತಿಸಿ ಹೆಚ್ಚು ಇಳುವರಿ ಪಡೆಯಬಹುದಾದ ತಳಿಯನ್ನು ಮುನ್ನಲೆಗೆ ತಂದರೆ ರೈತ ಸಮುದಾಯಕ್ಕೆ ಒಳಿತಾಗುತ್ತದೆ” ಎಂದರು.

    ಕಲಾದೀಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾರತೀಯ ವಿದ್ಯಾಭವನದ ನಿರ್ದೇಶಕ ಶ್ರೀ ಎಚ್.ಎನ್.ಸುರೇಶ್ ಮಾತನಾಡಿ “ಇವತ್ತು ಸನಾತನ ಧರ್ಮದ ಬಗೆಗೆ ಚರ್ಚೆಯಾಗುತ್ತಿದೆ. ಆದರೆ ಸರ್ವಪಲ್ಲಿ ರಾಧಾಕೃಷ್ಣನ್ ಅವರ ವಿಚಾರಗಳನ್ನು ಓದಿದರೆ ಆ ಬಗೆಗೆ ಸ್ಪಷ್ಟ ಕಲ್ಪನೆ ಬರುತ್ತದೆ” ಎಂದರು.

    ಇದೇ ಸಂದರ್ಭದಲ್ಲಿ 2023ನೇ ಸಾಲಿನ ‘ಕುವೆಂಪು ದೀಪ’ ಪ್ರಶಸ್ತಿಗೆ ಬಹುಮುಖಿ ಚಿಂತಕ, ಲೇಖಕ, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಹಾಗೂ ‘ಕಾರಂತ ದೀಪ ಪ್ರಶಸ್ತಿ’ಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಡೀನ್ ಸಿ.ನಾಗಭೂಷಣ ಹಾಗೂ ‘ಕಲಾದೀಪ ಪ್ರಶಸ್ತಿ’ಗೆ ಕಲಾವಿದ ಎಚ್.ಎನ್.ಸುರೇಶ್, ‘ದೇವಮ್ಮ ರಾಮನಾಯಕ ದೀಪ ಪ್ರಶಸ್ತಿಗೆ ಅಂಕೋಲದ ಕಮ್ಮಾರ ಚಂದ್ರಕಾಂತ ಮುಕುಂದ ಆಚಾರಿ, ‘ವಿದ್ಯಾರ್ಥಿದೀಪ ಪ್ರಶಸ್ತಿ’ಗೆ ಯೋಗಪಟು ಶ್ರೀನಿಧಿ ಪ್ರಕಾಶ್ ಗೌಡ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎನ್.ಆರ್.ನಾಯಕ ಮತ್ತು ಶಾಂತಿ ನಾಯಕ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ರೂಪಾಯಿ 6,000/- ನಗದು ಮತ್ತು ಸ್ಮರಣಿಕೆಯನ್ನೊಳಗೊಂಡಿತ್ತು.
    ಎನ್.ಆರ್.ನಾಯಕ್ ಅವರ ಬದುಕು ಮಹಾಕಾವ್ಯದ ಗೀತೆಗಳನ್ನು ಎಂ.ಡಿ.ಪಲ್ಲವಿ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಡಾ.ರಾಜೇಶ್ವರಿ ಪುಸ್ತಕ ಪರಿಚಯಮಾಡಿಕೊಟ್ಟರು. ಲಕ್ಷ್ಮಣ ನಾಯಕ, ಬೋರಯ್ಯ, ಜಿ.ವಿ.ಗಾಂವ್ಕರ್ ಮುಂತಾದವರನ್ನು ಗೌರವಿಸಲಾಯಿತು. ಡಾ.ನಿಜಲಿಂಗಪ್ಪ ಮಟ್ಟಿಹಾಳ ಅಭಿನಂದನ ನುಡಿಗಳನ್ನು ಆಡಿದರು. ಅಭಿನವದ ನ.ರವಿಕುಮಾರ್ ಸ್ವಾಗತಿಸಿ, ಜಾನಪದ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಸವಿತಾ ಉದಯ್ ಪ್ರಸ್ತಾವನೆಯ ಮಾತುಗಳನ್ನಾಡಿದರು. ಡಾ.ಸಂಧ್ಯಾ ಹೆಗಡೆ ನಿರೂಪಿಸಿ, ದಿವ್ಯ ಪ್ರಕಾಶ್ ವಂದಿಸಿದರು. ಡಾ.ಪಿ.ಚಂದ್ರಿಕಾ. ವೈ.ಜಿ.ಮುರಳೀಧರ, ರಜನಿ ನರಹಳ್ಳಿ, ಬಿ.ಆರ್.ಲಕ್ಷ್ಮಣರಾವ್, ವಿದ್ಯಾ ಭವನದ ನಾಗಲಕ್ಷ್ಮಿ ಕೆ.ರಾವ್, ಸೀತಾ ರಾಮಚಂದ್ರ ಮುಂತಾದವರು ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಕಲಾಗ್ರಾಮದಲ್ಲಿ ‘ತಲ್ಕಿ’ ನಾಟಕದ ಪ್ರದರ್ಶನ | ಸೆಪ್ಟೆಂಬರ್ 15ರಂದು  
    Next Article ಶಿಕ್ಷಕ ಸಾಹಿತಿ ಜಯಾನಂದ ಪೆರಾಜೆಯವರಿಗೆ ರಾಜ್ಯ ಮಟ್ಟದ ಅಮೃತ ಸಮ್ಮಾನ ಗೌರವ ಪ್ರಶಸ್ತಿ
    roovari

    Add Comment Cancel Reply


    Related Posts

    ಸಾಹಿತಿ ಸವಿತಾ ನಾಗಭೂಷಣ ಇವರ ಕೃತಿ ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ

    May 24, 2025

    ಮಂಗಳೂರು ವಿಶ್ವವಿದ್ಯಾನಿಲಯದ ‘ಯಕ್ಷಮಂಗಳ ಪ್ರಶಸ್ತಿ’ ಪ್ರಕಟ

    May 24, 2025

    ರಾಜ್ಯ ಮಟ್ಟದ ಸಂಶೋಧನಾ ಕಮ್ಮಟ ‘ಕನ್ನಡ ನಾಟಕಗಳ ವಿಭಿನ್ನ ನೆಲೆಗಳು’ | ಮೇ 27

    May 23, 2025

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಇವರ ‘ಕೇಳು ಪಾಪಕ್ಕ’

    May 23, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.