ಉಡುಪಿ : ಯಶಸ್ ಪ್ರಕಾಶನ ಕಟಪಾಡಿ ಉಡುಪಿ, ತುಳುಕೂಟ ಉಡುಪಿ (ರಿ.) ಮತ್ತು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕಾಪು ಇವರ ಸಹಯೋಗದಲ್ಲಿ ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ರಚಿಸಿರುವ ತುಳು ನಾಟಕ ‘ಅಪ್ಪೆಮ್ಮೆ’ ಇದರ ಪುಸ್ತಕ ಬಿಡುಗಡೆ ಮತ್ತು ತುಳು ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ 24-09-2023ರಂದು ಉಡುಪಿ ಕಿದಿಯೂರು ಹೊಟೇಲಿನ ಪವನ್ ರೂಪ್ ಟಾಪ್ ಇಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಶ್ರೀ ಎ.ಸಿ. ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ಶ್ರೀ ಚೇತನ್ ಕುಮಾರ್ ಶೆಟ್ಟಿಯವರು ಉದ್ಘಾಟಿಸುತ್ತಾರೆ. ಶ್ರೀ ವಿಶ್ವನಾಥ ಶೆಣೈ ಮತ್ತು ಶ್ರೀಮತಿ ಪ್ರಭಾವತಿ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ಡಾ. ವಿ.ಕೆ. ಯಾದವ್ ಸಸಿಹಿತ್ಲು ಇವರು ಪುಸ್ತಕ ಪರಿಚಯ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕುಮಾರಿ ಪ್ರಣಮ್ಯ ಉಪಾಧ್ಯ ಮತ್ತು ಕುಮಾರಿ ವೈಷ್ಣವಿ ಇವರಿಂದ ‘ಯಕ್ಷನೃತ್ಯ’ ಹಾಗೂ ತಂದೆ ತಾಯಿಯರೊಂದಿಗೆ ಮಕ್ಕಳ ‘ತುಳು ಕವಿಗೋಷ್ಠಿ’ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಯಶಸ್ ಪ್ರಕಾಶನ ಕಟಪಾಡಿ ಉಡುಪಿ ಇದರ ಮುಖ್ಯಸ್ಥರಾದ ಶ್ರೀಮತಿ ಪ್ರೀತಿ ಪ್ರಕಾಶ ಸುವರ್ಣ ತಮ್ಮೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.