ಕುಂದಾಪುರ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಂಡ್ಲೂರು ಇದರ ರಜತ ಸಂಭ್ರಮದ ಪ್ರಯುಕ್ತ ಯಕ್ಷ-ಗಾನ-ವೈಭವ ಕಾರ್ಯಕ್ರಮವು ದಿನಾಂಕ 21-09-2023 ರಂದು ಯಶಸ್ವೀ ಕಲಾವೃಂದ (ರಿ.)ಕೊಮೆ-ತೆಕ್ಕಟ್ಟೆ ತಂಡದ ಸದಸ್ಯರಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಕಲಾವಿದರಿಗೆ ಗೌರವ ಸಲ್ಲಿಸಿ ಮಾತನಾಡಿದ ಕಂಡ್ಲೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸುಧಾಕರ ಶೆಟ್ಟಿ “ಚೌತಿಯ ಸಂದರ್ಭದಲ್ಲಿ ಸಾಂಸ್ಕೃತಿಕ ಸಡಗರದ ಒಟ್ಟಾರೆ ಅನುಪಾತ ತೆಗೆದರೆ ಯಕ್ಷಗಾನದ ಕಾರ್ಯಕ್ರಮಗಳ ಸಂಖ್ಯೆ ಅಧಿಕವಾಗಿದೆ. ಹೆಚ್ಚಾಗಿ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಲ್ಲದೆ ಪರಿಪೂರ್ಣ ಆಗಲಾರದು. ಹಾಗಾಗಿಯೇ ಕಾರ್ಯಕ್ರಮ ಎಂದಾಕ್ಷಣ ಯಕ್ಷಗಾನದ ಪ್ರಕಾರ ಇದ್ದೇ ಇರುತ್ತದೆ. ಯಶಸ್ವೀ ಕಲಾವೃಂದ ತಕ್ಷಣದಲ್ಲಿ ದೊರೆತ ಕಲಾ ತಂಡ. ಅದ್ಭುತ ಕಾರ್ಯಕ್ರಮಕ್ಕೆ ಹೆಸರಾದ ತಂಡದ ಕಾರ್ಯಕ್ರಮ ಯಶಸ್ವಿಯಾಗಿದೆ” ಎಂದರು.
ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು, ಭಾಗವತ ಹರೀಶ್ ಪೂಜಾರಿ ಕಾವಡಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಬಳಿಕ ಯಶಸ್ವಿ ಕಲಾವೃಂದದ ಬಳಗದಿಂದ ಯಕ್ಷ-ಗಾನ-ವೈಭವ ರಂಗದಲ್ಲಿ ಪ್ರಸ್ತುತಿಗೊಂಡಿತು.

