ಉಳ್ಳಾಲ : ಬ್ಯಾರಿ ಭಾಷಾ ದಿನಾಚರಣೆ ಅಂಗವಾಗಿ ‘ಮೇಲ್ತೆನೆ’ಯು ಬ್ಯಾರಿ ‘ಆಶು ಕವನ ರಚನೆ’ ಮತ್ತು ‘ಒಗಟು ಸ್ಪರ್ಧೆ’ಯನ್ನು ಏರ್ಪಡಿಸಿದೆ. ದಿನಾಂಕ 03-10-2023ರಂದು ಮಧ್ಯಾಹ್ನ 2 ಗಂಟೆಗೆ ದೇರಳಕಟ್ಟೆಯಲ್ಲಿ ಸ್ಪರ್ಧೆ ನಡೆಯಲಿದೆ. ಬ್ಯಾರಿ ಸಾಹಿತ್ಯ, ಭಾಷೆ, ಸಂಸ್ಕೃತಿ, ಕಲೆಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿ ಆಶು ಕವನ ಸ್ಪರ್ಧೆ ನಡೆಯಲಿದೆ. ಸ್ಥಳದಲ್ಲೇ ವಿಷಯ ನೀಡಲಾಗುವುದು. ಕನಿಷ್ಠ 15 ಮತ್ತು ಗರಿಷ್ಠ 25 ಸಾಲಿನ ಮಿತಿಯೊಂದಿಗೆ ಕನ್ನಡ ಲಿಪಿ ಬಳಸಿ ಬ್ಯಾರಿ ಭಾಷೆಯಲ್ಲಿ ಕವನ ರಚಿಸಬೇಕು. ಬಳಿಕ ‘ಒಗಟು ಸ್ಪರ್ಧೆ’ ನಡೆಯಲಿದೆ. ಎರಡೂ ಸ್ಪರ್ಧೆಯು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.
ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ, ಪ್ರಮಾಣ ಪತ್ರ, ಸ್ಮರಣಿಕೆಗಳನ್ನು ಅದೇ ದಿನ ಸಂಜೆ 4ಕ್ಕೆ ನಡೆಯುವ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡಲಾಗುವುದು. ಆಸಕ್ತರು ದಿನಾಂಕ 28-09-2023ರೊಳಗೆ ‘ಮೇಲ್ತೆನೆ’ಯ ಮಾಜಿ ಅಧ್ಯಕ್ಷ ಇಸ್ಮಾಯೀಲ್ ಮಾಸ್ಟರ್ (ಮೊ. ಸಂ. 9449902192) ಅವರಲ್ಲಿ ಹೆಸರು ನೋಂದಾಯಿಸಬಹುದು.