ವಿರಾಜಪೇಟೆ : ವಿರಾಜಪೇಟೆಯ ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ ಹಾಗೂ ಮನೆ ಮನೆ ಕಾವ್ಯಗೋಷ್ಠಿ ಬಳಗದ ವತಿಯಿಂದ ‘ಕವಿಗೋಷ್ಠಿ’ಯು ದಿನಾಂಕ 24-09-2023ರಂದು ಭಾನುವಾರ ಮಧ್ಯಾಹ್ನ 2 ಗಂಟೆಗೆ ನಡೆಯಿತು. ಕೊಡಗಿನ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮುಲ್ಲೇಂಗಡ ಮಧೋಶ್ ಪೂವಯ್ಯನವರು ಅಧ್ಯಕ್ಷತೆ ವಹಿಸಿ ಕವಿತೆಗಳನ್ನು ವಿಮರ್ಶಿಸಿ ಕವಿಗಳನ್ನು ಪ್ರೋತ್ಸಾಹಿಸಿದರು. ಕೊಡಗಿನ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ.ಅನಂತ ಶಯನ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಕೊಡವ ಮಕ್ಕಡ ಕೂಟದ ಅಧ್ಯಕ್ಷರಾದ ಬೊಳ್ಳಜ್ಹಿರ ಅಯ್ಯಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಕಾರ್ಯಕ್ರಮದಲ್ಲಿ ಗಿರೀಶ್ ಎಸ್. ಕಿಗ್ಗಾಲು, ಮೊಣ್ಣಂಡ ಶೋಭಾ ಸುಬ್ಬಯ್ಯ, ಕಸ್ತೂರಿ ಗೋವಿಂದಮ್ಮಯ್ಯ, ಶಿವದೇವಿ ಅವನೀಶ್ಚಂದ್ರ, ಸಾವಿತ್ರಿ ಹೆಚ್.ಜಿ., ಭಾಗ್ಯವತಿ ಅಣ್ಣಪ್ಪ ಟಿ.ವಿ., ಲವಿನ್ ಲೋಪೆಸ್, ಚಿಮ್ಮಚ್ಚಿರ ಪವಿತಾ ರಜನ್, ಈರಮಂಡ ಹರಿಣಿ ವಿಜಯ್, ಸಿಂಚನ ಜಿ.ಎನ್. ಗೊರಹಳ್ಳಿ, ಅನಂತ ಶಯನ ಬಿ.ಜಿ, ಮುಲ್ಲೇಂಗಡ ಮಧೋಶ್ ಪೂವಯ್ಯ, ಪುಷ್ಪಲತಾ ಶಿವಪ್ಪ, ಸೈಮನ್ ಎಸ್. ಮೇಕೇರಿ, ಮೂಕಳೆರ ಟೈನಿ ಪೂಣಚ್ಚ, ನಳಿನಾಕ್ಷಿ, ಜಗದೀಶ್ ಜೋಡುಬೀಟಿ, ಚಾಲ್ಸ್೯ ಡಿಸೋಜ ವಿರಾಜಪೇಟೆ, ಯಶೋಧ ಹೆಚ್.ಜಿ., ಪಂದ್ಯಂಡ ರೇಣುಕಾ ಸೋಮಯ್ಯ, ಚೆಟ್ಟೋಳಿರ ಶರತ್ ಸೋಮಣ್ಣ, ವೈಲೇಶ ಪಿ.ಎಸ್. ಕೊಡಗು, ಕರ್ತುರ ರನ್ನು ಪೆಮ್ಮಯ್ಯ ಇವರುಗಳು ಕವಿತೆ ವಾಚಿಸಿದರು.
ಕಿಗ್ಗಾಲು ಎಸ್. ಗಿರೀಶ್‌ರವರು ಸ್ವಾಗತಿಸಿದರು. ಬಳಗದ ಸಂಸ್ಥಾಪಕರಾದ ವೈಲೇಶ್ ಪಿ.ಎಸ್. ಕೊಡಗು ಇವರು ಪ್ರಾಸ್ತಾವಿಕ ನುಡಿಯಾಡಿ, ಸಾವಿತ್ರಿ ಹೆಚ್.ಜಿ. ಮತ್ತು ಚಾರ್ಲ್ಸ್ ಡಿಸೋಜರವರು ಕಾರ್ಯಕ್ರಮ ನಿರೂಪಣೆ ಮಾಡಿ, ಪುಷ್ಪಲತಾ ಶಿವಪ್ಪನವರು ವಂದನಾರ್ಪಣೆ ಸಲ್ಲಿಸಿ, ಶ್ರೀಮತಿ ಭಾಗ್ಯವತಿ ಅಣ್ಣಪ್ಪ ಟಿವಿ ಹಾಗೂ ಶಿವಮ್ಮ ವೈಲೇಶ್‌ರವರು ನಿರ್ವಹಣೆ ಮಾಡಿದರು.