ಮೂಡಬಿದಿರೆ : ಕನ್ನಡ ಸಾಹಿತ್ಯ ಪರಿಷತ್ತು ಮೂಡಬಿದಿರೆ ತಾಲೂಕು ಘಟಕ ಮತ್ತು ಜೈನ ಪ.ಪೂ.ಕಾಲೇಜಿನ ಜಂಟಿ ಆಶ್ರಯದಲ್ಲಿ ‘ಕವಿ ನಾಗಚಂದ್ರ’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 25-09-2023ರಂದು ಮೂಡಬಿದಿರೆಯ ಜೈನ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಾಹಿತಿಗಳು ಹಾಗೂ ಉಪನ್ಯಾಸಕರು ಆಗಿರುವ ಶ್ರೀ ಟಿ.ಎ.ಎನ್ ಖಂಡಿಗೆ “ಹಳೆಗನ್ನಡ ಕಾಲದ ಜೈನ ಕವಿಯಾದ ನಾಗಚಂದ್ರನು ತನ್ನ ಕಾವ್ಯಗಳಿಂದಾಗಿ ಅಭಿನವ ಪಂಪನೆಂದೇ ಗುರುತಿಸಿಕೊಂಡವನು. ಕಾವ್ಯಕ್ಕೆ ಮೊತ್ತ ಮೊದಲು ಚೌಕಟ್ಟನ್ನು ನಿರ್ಮಿಸಿಕೊಟ್ಟ ಪಂಪನ ಮಾದರಿಯಲ್ಲಿಯೇ ನಾಗಚಂದ್ರನು ಕೂಡಾ ಅಪೂರ್ವ ಕಾವ್ಯಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾನೆ. ‘ಮಲ್ಲಿನಾಥ ಪುರಾಣ’ ಹಾಗೂ ‘ರಾಮಚಂದ್ರ ಚರಿತ ಪುರಾಣ’ ಎಂಬೆರಡು ತನ್ನ ಮೇರು ಕೃತಿಗಳೊಂದಿಗೆ ಜಿನೋಪಾಸನೆ ಹಾಗೂ ಕಲೋಪಾಸನೆ ಎರಡನ್ನೂ ಮಾಡಿಕೊಂಡು ಬಂದ ನಾಗಚಂದ್ರನು ಒಂದರಲ್ಲಿ ಧರ್ಮ ಹಾಗೂ ಇನ್ನೊಂದರಲ್ಲಿ ಕಾವ್ಯಧರ್ಮವನ್ನು ಇಟ್ಟುಕೊಂಡು ಪಂಪನ ಮಾದರಿಯಲ್ಲಿಯೇ ಕಾವ್ಯ ರಚಿಸಿದ್ದಾನೆ” ಎಂದರು.
ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ.ಕೆ.ವೇಣುಗೋಪಾಲ ಶೆಟ್ಟಿಯವರು ಅಧ್ಯಕ್ಷತೆಯನ್ನು ವಹಿಸಿ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಭಾತ್ ಬಲ್ನಾಡ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶ್ರೀನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಉದಯಕುಮಾರ್ ಅವರು ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಶ್ರೀಮತಿ ನಿಶಾ ಜೈನ್ ವಂದಿಸಿದರು.
Subscribe to Updates
Get the latest creative news from FooBar about art, design and business.
Previous Articleವಿರಾಜಪೇಟೆಯಲ್ಲಿ ಮನೆ ಮನೆ ಕಾವ್ಯಗೋಷ್ಠಿ ಬಳಗದಿಂದ ಗಣೇಶೋತ್ಸವ ಕವಿಗೋಷ್ಠಿ