ಬೆಂಗಳೂರು : ಕಾವ್ಯಸಂಜೆಯು ಹತ್ತು ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭವನ್ನು ಸಂಭ್ರಮಿಸುವ ಸಲುವಾಗಿ ಕಾವ್ಯಸಂಜೆಯ ವತಿಯಿಂದ ‘ಕಾವ್ಯಸಂಜೆ ದಶಮಾನೋತ್ಸವ ಕಾವ್ಯ ಪ್ರಶಸ್ತಿ’ಯನ್ನು ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಕವಿಗಳಿಂದ ಮೂವತ್ತಕ್ಕೂ ಹೆಚ್ಚು ಹಾಗೂ ಐವತ್ತಕ್ಕೆ ಮೀರದಷ್ಟು ಕವಿತೆಗಳನ್ನು ಒಳಗೊಂಡ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.
* ಅನುವಾದಿತ ಕವಿತೆಗಳು ಬೇಡ.
* ಚುಟುಕು, ಹನಿಗವನಗಳು ಬೇಡ.
* ಪ್ರಕಟವಾಗಿರುವ ಬಿಡಿ ಕವಿತೆಗಳು ಹಸ್ತಪ್ರತಿಯಲ್ಲಿ ಇದ್ದಲಿ, ಎಲ್ಲಿ ಪ್ರಕಟವಾಗಿದೆ ಎಂಬ ವಿಷಯವನ್ನು ತಿಳಿಸಬೇಕು.
ಈ ಪ್ರಶಸ್ತಿಯು ರೂ.10.000/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಆಸಕ್ತರು ತಮ್ಮ ಹೊಸ ಕವಿತೆಗಳ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಲು ವಿನಂತಿಸಲಾಗಿದೆ.
ವಿ.ಸೂ: ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ. ಡಿಟಿಪಿ ಮಾಡಿದ ಹಸ್ತಪ್ರತಿಯ ಎರಡು ಸೆಟ್ ಗಳನ್ನು ಕಳಿಸಿಕೊಡಬೇಕು. ಮಿಂಚಂಚೆಯ (email) ಮೂಲಕ ಕಳಿಸುವುದು ಬೇಡ.
ಹಸ್ತಪ್ರತಿಯನ್ನು ಕಳುಹಿಸಬೇಕಾದ ವಿಳಾಸ:
ನಂ, 619, 7ನೇ ಕ್ರಾಸ್ ಬಿ.ಇ.ಎಮ್.ಎಲ್ ಲೇಔಟ್ 4ನೇ ಹಂತ ರಾಜರಾಜೇಶ್ವರಿ ನಗರ, ಬೆಂಗಳೂರು -560098
ಹೆಚ್ಚಿನ ಮಾಹಿತಿಗಾಗಿ 9743531688 ಅಥವಾ 8722039612 ಸಂಖ್ಯೆಯನ್ನು ಸಂಪರ್ಕಿಸಬಹುದು.
Subscribe to Updates
Get the latest creative news from FooBar about art, design and business.
ಕಾವ್ಯಸಂಜೆ ದಶಮಾನೋತ್ಸವ ಕಾವ್ಯ ಪ್ರಶಸ್ತಿಗೆ ಕವಿತೆಗಳ ಹಸ್ತಪ್ರತಿ ಆಹ್ವಾನ | ಅಕ್ಟೋಬರ್ 2 ಕೊನೆಯ ದಿನ
No Comments1 Min Read
Previous Articleಕಲಾ ವಿಮರ್ಶೆ | ಮನ ಮುದಗೊಳಿಸಿದ ಆಕರ್ಷಕ ವ್ಯಾನ್‌ಗೋ ಕಲಾ ಪ್ರದರ್ಶನ