ಮಂಗಳೂರು : ಪುರಭವನದಲ್ಲಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ 16ನೇ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 23-09-2023ರಂದು ಜರಗಿತು. ಇದರ ಅಧ್ಯಕ್ಷತೆ ವಹಿಸಿದ ಪ್ಲಾನ್ ಟೆಕ್ ಮತ್ತು ದೈಜಿ ವರ್ಲ್ಡ್ ಮೀಡಿಯಾ ನಿರ್ದೇಶಕರು ಲಾರೆನ್ಸ್ ಡಿಸೋಜ ಇವರ ಮಾತನಾಡುತ್ತಾ “ಸಾಂಸ್ಕೃತಿಕವಾಗಿ ಅಸ್ತಿತ್ವಕ್ಕೆ ಬಂದ ಯಾವುದೇ ಕಲಾ ಸಂಸ್ಥೆಗಳು ತಮ್ಮ ಪ್ರದರ್ಶಿತ ಚಟುವಟಿಕೆಗಳೊಂದಿಗೆ ಸಾಮಾಜಿಕವಾಗಿ ಸ್ಪಂದಿಸುವ ಕಾರ್ಯವಸೆಗಬೇಕು” ಎಂದು ಅಭಿಪ್ರಾಯಪಟ್ಟರು. ಹಿರಿಯ ಕಿರಿಯ ಸಂಗೀತ ಪ್ರತಿಭಾವಂತ ಕಲಾವಿದರ ಈ ಒಕ್ಕೂಟವು ಈ ನಿಟ್ಟಿನಲ್ಲಿ ನಿರಂತರವಾಗಿ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಾರದರ್ಶಕವಾಗಿ ಕಲಾಭಿಮಾನಿಗಳ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿ ಮುಂಬೈಯ ವಚನಾ ಹಾಸ್ಪಿಟಾಲಿಟಿ ಸರ್ವೀಸಸ್ ಇದರ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ ಕುಕ್ಕುಂದೂರು, ಎಸ್.ಎಲ್. ಡೈಮಂಡ್ ಹೌಸ್ ಮಾಲಕ ಶ್ರೀ ಎಂ. ರವೀಂದ್ರ ಶೇಟ್ ಭಾಗವಹಿಸಿ ಶುಭ ಕೋರಿದರು. ಸಂಗೀತ ಕ್ಷೇತ್ರದ ಕಲಾ ಸಾಧಕ ಹಿರಿಯರಾದ ಸಂಗೀತ ಶಿಕ್ಷಕ ಗಾಯಕ ಕೆ. ರವಿಶಂಕರ್ ಸುರತ್ಕಲ್, ಗಾಯಕ ಹಾಗೂ ಅಭಿನಯ ಕಲಾವಿದ ಯು.ಹೆಚ್. ಖಾಲಿದ್ ಉಜಿರೆ, ಸಂಗೀತ ಸಂಯೋಜಕ ಹಾಗೂ ಕೀಬೋರ್ಡ್ ವಾದಕ ಎಂ.ಜಾನ್ ಪೆರ್ಮನ್ನೂರ್ ಅವರನ್ನು ಸನ್ಮಾನಿಸಲಾಯಿತು.
‘ರಾಜ್ ಸೌಂಡ್ ಅಂಡ್ ಲೈಟ್ಸ್’ ತುಳು ಚಲನಚಿತ್ರದ ಸಂಗೀತ ಸಂಯೋಜನೆಗೆ ಕೋಸ್ಟಲ್ ಫಿಲಂ ಅವಾರ್ಡ್ ನಲ್ಲಿ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದ ಯುವ ಸಂಗೀತ ಪ್ರತಿಭೆ ಸೃಜನ್ ಕುಮಾರ್ ತೋನ್ಸೆ ಹಾಗೂ ರಾಷ್ಟ್ರೀಯ ನಂದನ್ ಶ್ರೀ ಮತ್ತು ತಾಲ್ ನಂದನ್ ಪ್ರಶಸ್ತಿ ಪುರಸ್ಕೃತೆ ಯುವ ತಬಲಾ ಪ್ರತಿಭೆ ಕುಮಾರಿ ಹಿಮಾಂಗಿ ಯಾನೆ ವೈಷ್ಣವಿ ಡಿ. ಉಳ್ಳಾಲ್ ಅವರಿಗೂ ಅಭಿನಂದನಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸ್ವರಕುಡ್ಲ ಸ್ಪರ್ಧೆಯಲ್ಲಿ ವಿಜೇತರಾದ ಯಶಸ್ ರಾವ್ – ಪ್ರಥಮ, ಭೂಮಿಕಾ ಹೆಗಡೆ – ದ್ವಿತೀಯ, ಮೃಣಾಲ ಡಿ. ಭಟ್ – ತೃತೀಯ ಮತ್ತು ಅಶ್ಮಿತ್ ಎ.ಜೆ. ಇವರಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು.
ಒಕ್ಕೂಟದ ಸ್ಥಾಪಕ ಅಧ್ಯಕ್ಷ ಸದಾಶಿವ ದಾಸ್ ಪಾಂಡೇಶ್ವರ್, ಮಾಜಿ ಅಧ್ಯಕ್ಷ, ಮ.ನ.ಪಾ. ಕಾರ್ಪೊರೇಟರ್ ಜಗದೀಶ್ ಶೆಟ್ಟಿ, ಉಪಾಧ್ಯಕ್ಷರು ಐವನ್ ಡಿಸೋಜ, ರಾಧಾಕೃಷ್ಣ ಭಟ್ ಉಡುಪಿ ಒಕ್ಕೂಟದ ಪೂರ್ವ ಅಧ್ಯಕ್ಷರುಗಳಾದ ಮುರಳಿಧರ ಕಾಮತ್, ಮಲ್ಲಿಕಾ ಶೆಟ್ಟಿ, ನವಗಿರಿ ಗಣೇಶ್, ರವೀಂದ್ರ ಪ್ರಭು, ಮಹಮದ್ ಇಕ್ಬಾಲ್, ರಮೇಶ್ ಸಾಲ್ಯಾನ್ ಹಾಗೂ ಸಮಿತಿಯ ಕೇಶವ ಕನಿಲ, ರಂಜನ್ ದಾಸ್, ದಿನಕರ ಪಾಂಡೇಶ್ವರ್, ಹುಸೇನ್ ಕಾಟಿಪಳ್ಳ, ಮುಕ್ತ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು. ಒಕ್ಕೂಟದ ಗೌರವ ಸಲಹೆಗಾರ ತೋನ್ಸೆ ಪುಷ್ಕಳ ಕುಮಾರ್ ಪ್ರಸ್ತಾವನೆಗೈದರು. ಅಧ್ಯಕ್ಷ ಮೋಹನ್ ಪ್ರಸಾದ್ ನಂತೂರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ದೀಪಕ್ ರಾಜ್ ಉಳ್ಳಾಲ್ ವರದಿ ಮಂಡಿಸಿದರು. ಕುಮಾರಿಯರಾದ ಚೈತ್ರ, ಧನ್ಯಾ, ಶ್ರೀವಿದ್ಯಾ ಸನ್ಮಾನ ಪತ್ರ ವಾಚಿಸಿದರು. ಖಜಾಂಚಿ ಧನುರಾಜ್ ವಂದಿಸಿ. ಶಿವಪ್ರಸಾದ್ ಭಟ್ ಮತ್ತು ಆರ್.ಜೆ. ಮೋಹಿತ್ ನಿರೂಪಿಸಿದರು. ಬಳಿಕ ಕನ್ನಡ ಕೋಗಿಲೆ ಖ್ಯಾತಿಯ ವೈ.ಜಿ. ಉಮಾ ಕೋಲಾರ ಮತ್ತು ತಂಡದವರಿಂದ ‘ಸಾಂಸ್ಕೃತಿಕ ಕಾರ್ಯಕ್ರಮ’ ಜರಗಿತು.