ನಿತೀಶ್ ಪಿ. ಬೈಂದೂರು ಇವರ ಛಾಯಾಚಿತ್ರ ಕ್ಷೇತ್ರದ ಸಾಧನೆಗಾಗಿ, ಪಬ್ಲಿಕ್ ರಿಲೇಷನ್ ಸೊಸೈಟಿ ಆಫ್ ಇಂಡಿಯಾ, ನವದೆಹಲಿಯಲ್ಲಿ ಆಯೋಜಿಸಿದ ‘ಕೌಟಿಲ್ಯ ಅವಾರ್ಡ್ಸ್ – 2023’ರ ‘ಯಂಗ್ ಫೋಟೋಗ್ರಾಫರ್ ಆಫ್ ದ ಇಯರ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೈಂದೂರಿನ ಶ್ರೀಮತಿ ಕಲಾವತಿ ಮತ್ತು ಪಿ. ಸುಬ್ರಾಯ ದಂಪತಿಯ ಸುಪುತ್ರ. ಪದವಿ ಶಿಕ್ಷಣವನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪಡೆದು, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದು ಕೊಂಡಿರುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯ ಆಯೋಜಿಸಿದ ಕರ್ನಾಟಕ ರಾಜ್ಯ ಉಪನ್ಯಾಸಕರ ಆರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಪ್ರಸ್ತುತ ಡಾ.ಬಿ.ಶೈಲಶ್ರೀ ಅವರ ಮಾರ್ಗದರ್ಶನದಲ್ಲಿ ಛಾಯಾಚಿತ್ರ ಪತ್ರಿಕೋದ್ಯಮದ ಮೇಲೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ. ಸಂಶೋಧನಾ ಅಧ್ಯಯನವನ್ನು ನಡೆಸುತ್ತಿದ್ದಾರೆ.
ಛಾಯಚಿತ್ರ ಪ್ರಶಸ್ತಿ:
• ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಸ್ಪಾಟ್ ಫೋಟೋಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,
• ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಶ್ರೀದೇವಿ ಕಾಲೇಜಿನಲ್ಲಿ ಆಯೋಜಿಸಿದ ಫೋಟೋಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,
• ಮಂಗಳೂರು ವಿಶ್ವವಿದ್ಯಾನಿಲಯದ ಟೂರಿಸಂ ವಿಭಾಗದಲ್ಲಿ ಆಯೋಜಿಸಿದ ಫೋಟೋಗ್ರಫಿ ಸ್ಪರ್ಧೆಯಲ್ಲಿ ನಿರಂತರ 2 ವರ್ಷ (2014 ಮತ್ತು 2015) ಪ್ರಥಮ ಸ್ಥಾನ,
• ನಮ್ಮೂರ ಹಬ್ಬ-2015 ಬೆಂಗಳೂರಿನಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಫೋಟೋಗ್ರಫಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ,
• ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಸ್ಪಾಟ್ ಫೋಟೋಗ್ರಫಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ,
• ಆಳ್ವಾಸ್ ಶಿಕ್ಷಣ ಸಂಸ್ಥೆ ಆಯೋಜಿಸಿದ ರಾಜ್ಯ ಮಟ್ಟದ ಫೋಟೋಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,
• ಛಾರು ಆರ್ಟ್ ಗ್ಯಾಲರಿ ಆಯೋಜಿಸಿದ ರಾಜ್ಯ ಮಟ್ಟದ ಫೋಟೋಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,
• 31ನೇ ದಕ್ಷಿಣ ವಲಯ ಮಟ್ಟದ ವಿಶ್ವವಿದ್ಯಾನಿಲಯ ಮಟ್ಟದ ಸ್ಪಾಟ್ ಫೋಟೋಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,
• ಫಿಕ್ಸೆಲ್ ಫೋಟೋಗ್ರಪಿ ಕ್ಲಬ್, ಬೆಂಗಳೂರು ಆಯೋಜಿಸಿದ ರಾಷ್ಟ್ರ ಮಟ್ಟದ ಸ್ಪಾಟ್ ಫೋಟೋಗ್ರಫಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ,
• ಯೂತ್ ಫೋಟೋಗ್ರಾಫಿಕ್ ಸೊಸೈಟಿ ಆಯೋಜಿಸಿದ 34ನೇ ಆಲ್ ಇಂಡಿಯಾ ಡಿಜಿಟಲ್ ಫೋಟೋಗ್ರಫಿ ಸ್ಪರ್ಧೆ- 2016ರಲ್ಲಿ “ಬೆಸ್ಟ್ ಎನ್ವಿರಾನ್‌ಮೆಂಟಲ್ ಸ್ಟೋರಿ” ಪ್ರಶಸ್ತಿ,
• ಯೂತ್ ಫೋಟೋಗ್ರಾಫಿಕ್ ಸೊಸೈಟಿ 2017ರಲ್ಲಿ ಆಯೋಜಿಸಿದ ಫೋಟೋಗ್ರಫಿ ಸ್ಪರ್ಧೆಯಲ್ಲಿ ಸರ್ಟಿಫಿಕೇಟ್ ಆಫ್ ಮೇರಿಟ್ ಪ್ರಶಸ್ತಿ,
• ಕರ್ನಾಟಕ ಟೂರಿಸಂ ವಿಭಾಗ ಆಯೋಜಿಸಿದ ಫೋಟೋಗ್ರಫಿ ಸ್ಪರ್ಧೆಯಲ್ಲಿ 2 ಬಾರಿ ಸರ್ಟಿಫಿಕೇಟ್ ಆಫ್ ಮೇರಿಟ್ ಪ್ರಶಸ್ತಿ,
• “ಬಿಗ್ ಸರ್ಫ್ ಫೋಟೋ ಕಾಂಟೆಸ್ಟ್-2017” ಆಯೋಜಿದ ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ,
• ಡಿಜಿಟಲ್ ಲಿಟೆರೆಸಿ ಲೀಡರ್‌ಷಿಪ್ ಫೋರಂ 2022 “ಲೈಫ್‌ಇಸ್ ಬ್ಯೂಟಿಫುಲ್” ವಿಷಯದ ಕುರಿತು ದುಬೈನಲ್ಲಿ ಆಯೋಜಿದ ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.
• ಪ್ರಜಾವಾಣಿ ಪತ್ರಿಕೆ ಆಯೋಜಿಸಿದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಆಯ್ದ 10 ಛಾಯಾಚಿತ್ರ ಪೈಕಿ ಸ್ಥಾನ ಪಡೆದುಕೊಂಡಿದೆ.
ಪ್ರಶಸ್ತಿಗಳು:
• ಆಳ್ವಾಸ್ ಶಿಕ್ಷಣ ಸಂಸ್ಥೆ ನೀಡುವ ವರ್ಷದ ಅತ್ಯುತ್ತಮ ವಿದ್ಯಾರ್ಥಿ ಪತ್ರಕರ್ತ-2014 ಪ್ರಶಸ್ತಿ,
• ಇವರ ಛಾಯಾಚಿತ್ರ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ 6ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ “ಕರ್ನಾಟಕ ಪ್ರತಿಭಾ ರತ್ನ” ಪ್ರಶಸ್ತಿ,
• ಡಾ.ಕೋಟ ಶಿವರಾಮ ಕಾರಂತ ಮಿತ್ರ ಮಂಡಳಿ ಆಯೋಜಿಸಿದ ವಿಂಶತಿ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸಂದರ್ಭ ಡಾ. ಕೋಟ ಶಿವರಾಮ ಕಾರಂತ ವಿದ್ಯಾರ್ಥಿ ಗೌರವ ಪ್ರಶಸ್ತಿ,
• ಇವರ ಛಾಯಾಚಿತ್ರ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರತಿಭಾ ಪುರಸ್ಕಾರ-2016 ಪ್ರಶಸ್ತಿ,
• ಛಾಯಾಚಿತ್ರ ಕ್ಷೇತ್ರದ ಸಾಧನೆಗಾಗಿ, ಪಬ್ಲಿಕ್ ರಿಲೇಷನ್ ಸೊಸೈಟಿ ಆಫ್ ಇಂಡಿಯಾ, ನವದೆಹಲಿಯಲ್ಲಿ ಆಯೋಜಿಸಿದ ‘ಕೌಟಿಲ್ಯ ಅವಾರ್ಡ್ಸ್ – 2023”ರ ‘ಯಂಗ್ ಫೋಟೋಗ್ರಾಫರ್ ಆಫ್ ದ ಇಯರ್’ ಪ್ರಶಸ್ತಿಗಳನ್ನು ನೀಡಿ ಗೌರವಿಸಿರುತ್ತಾರೆ.