Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಶತಾಯುಷಿ, ಕನ್ನಡದ ಖ್ಯಾತ ಬರಹಗಾರ ಡಾ. ಎ. ಎನ್. ಮೂರ್ತಿರಾವ್

    June 16, 2025

    ಭರತಾಂಜಲಿಯಿಂದ ಕಣ್ಮನ ತಣಿಸಿದ ರಂಗಪ್ರವೇಶ…ಗುರು ನಮನ..

    June 16, 2025

    ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿ ಆಹ್ವಾನ | ಕೊನೆಯ ದಿನಾಂಕ ಜೂನ್ 30

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಬ್ಯಾರಿ ಭಾಷಾ ದಿನಾಚರಣೆ ಸಮಾರಂಭ 
    Literature

    ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಬ್ಯಾರಿ ಭಾಷಾ ದಿನಾಚರಣೆ ಸಮಾರಂಭ 

    October 4, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮವು ದಿನಾಂಕ 03-10-2023ರಂದು ಅಕಾಡೆಮಿ ಕಚೇರಿ ಆವರಣದ ಸಾಮರ್ಥ್ಯ ಸೌಧದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಬ್ಯಾರಿ ಭಾಷಾ ದಿನಾಚರಣೆ ಮತ್ತು ಅದರ ಮಹತ್ವದ ಬಗ್ಗೆ ಉಪನ್ಯಾಸ ನೀಡಿದ ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯ ಹಂಝ ಮಲಾರ್ “ಬ್ಯಾರಿ ಭಾಷೆ ಮತ್ತು ಸಂಸ್ಕೃತಿಯ ಉಳಿವು ಬ್ಯಾರಿ ಮುಸ್ಲಿಮರ ಕೈಯಲ್ಲಿದೆ. ಅದಕ್ಕಾಗಿ ಮರೆತು ಹೋದ ಹಳೆಯ ಬ್ಯಾರಿ ಪದಗಳನ್ನು ಮತ್ತೆ ಬಳಸಲು ಮುಂದಾಗಬೇಕು. ಮುಂದಿನ ಪೀಳಿಗೆಗೆ ಬ್ಯಾರಿ ಭಾಷೆಯ ಮೇಲೆ ಅಭಿಮಾನ, ಗೌರವ ಬರುವಂತಹ ಪ್ರಯತ್ನ ಮಾಡಬೇಕು. ಬ್ಯಾರಿ ಅಕಾಡೆಮಿ ಪ್ರಕಟಿಸಿದ ಬ್ಯಾರಿ ಭಾಷಾ ಕೃತಿಗಳು ಓದುಗರ ಕೈ ಸೇರುವಂತೆ ಪ್ರಯತ್ನಿಸಬೇಕು” ಎಂದರು.

    ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಮಾತನಾಡಿ “ಬ್ಯಾರಿ ಸಮುದಾಯದ ಪ್ರಾಚೀನ ವಸ್ತುಗಳ ಸಂಗ್ರಹಾಲಯ ಸ್ಥಾಪಿಸಬೇಕು. ಮಂಗಳೂರಿನಲ್ಲಿ ಬ್ಯಾರಿ ಸಮ್ಮೇಳನ ಆಯೋಜಿಸಬೇಕು” ಎಂದರು. ಬ್ಯಾರಿ ಅಧ್ಯಯನ ಪೀಠದ ಸಂಯೋಜಕರಾದ ಡಾ.ಅಬೂಬಕರ್ ಸಿದ್ದೀಕ್ ಮಾತನಾಡಿ “ಬ್ಯಾರಿ ಭಾಷೆ, ಸಾಹಿತ್ಯದ ತಳಸ್ಪರ್ಶಿ ಅಧ್ಯಯನ ನಡೆಸುವ ಮೂಲಕ ಜಾಗತಿಕ ಮಟ್ಟದಲ್ಲಿ ಬ್ಯಾರಿ ಭಾಷೆಯನ್ನು ಗುರುತಿಸುವಂತಾಗಬೇಕು” ಎಂದರು.

    ಬ್ಯಾರಿ ಸಂಘಟನೆಗಳ ಪ್ರಮುಖರಾದ ಮುಹಮ್ಮದ್ ಅಲಿ ಕಮ್ಮರಡಿ, ಬಶೀರ್ ಬೈಕಂಪಾಡಿ, ಆಲಿಕುಂಞಿ ಪಾರೆ, ಅಹ್ಮದ್ ಬಾವಾ ಪಡೀಲ್, ಡಿ.ಎಂ. ಅಸ್ಲಂ, ಮುಹಮ್ಮದ್ ಕುಂಜತ್ತಬೈಲ್, ಲೇಖಕಿ ಆಯಿಶಾ ಯು.ಕೆ., ಡಾ. ಅಬೂಬಕ್ಕರ್ ಸಿದ್ದೀಕ್ ವಗ್ಗ, ಇಂಜಿನಿಯರ್ ಝಾಕಿರ್ ಹುಸೈನ್, ಮುಹಮ್ಮದ್ ಸಾಲಿ ಮರವೂರು ಮತ್ತಿತರರು ಉಪಸ್ಥಿತರಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಆರ್. ಮನೋಹರ ಕಾಮತ್ ಸ್ವಾಗತಿಸಿದರು. ಅಕಾಡೆಮಿಯ ಮಾಜಿ ಸದಸ್ಯ ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿ, ಗಾಯಕ ಶರೀಫ್ ನಿರ್ಮುಂಜೆ ಬ್ಯಾರಿ ಧ್ಯೇಯಗೀತೆ ಹಾಡಿದರು.

    Share. Facebook Twitter Pinterest LinkedIn Tumblr WhatsApp Email
    Previous Articleರಾಜ್ಯಮಟ್ಟದ ಕವನ ಸ್ಪರ್ಧೆಗೆ ಕವಿತೆಗಳ ಆಹ್ವಾನ | ಕೊನೆಯ ದಿನಾಂಕ ಅಕ್ಟೋಬರ್ 31  
    Next Article ಕಾಶ್ಮೀರದಲ್ಲಿ ಐತಿಹಾಸಿಕ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಯಕ್ಷಗಾನ ಪ್ರದರ್ಶನ
    roovari

    Add Comment Cancel Reply


    Related Posts

    ವಿಶೇಷ ಲೇಖನ – ಶತಾಯುಷಿ, ಕನ್ನಡದ ಖ್ಯಾತ ಬರಹಗಾರ ಡಾ. ಎ. ಎನ್. ಮೂರ್ತಿರಾವ್

    June 16, 2025

    ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿ ಆಹ್ವಾನ | ಕೊನೆಯ ದಿನಾಂಕ ಜೂನ್ 30

    June 16, 2025

    ಪುಸ್ತಕ ವಿಮರ್ಶೆ | ನಿರಂಜನರ ‘ಚಿರಸ್ಮರಣೆ’

    June 16, 2025

    ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಸುಪ್ತದೀಪ್ತಿಯವರ ನೂತನ ಕೃತಿಗಳ ಅನಾವರಣ | ಜೂನ್ 21

    June 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.