ಕಾಪು : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗಲಿರುವ ‘ಉಚ್ಚಿಲ ದಸರಾ -2023’ರ ಅಂಗವಾಗಿ ಮುದ್ದು ಮಕ್ಕಳಿಗಾಗಿ ‘ಶ್ರೀ ಶಾರದಾ ದೇವಿಯ ಛದ್ಮವೇಷ ಸ್ಪರ್ಧೆ’ ಮತ್ತು ಸಾರ್ವಜನಿಕರಿಗಾಗಿ ‘ರಂಗೋಲಿ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ.
ದಿನಾಂಕ 20-10-2023ರಂದು ಬೆಳಗ್ಗೆ 11ರಿಂದ ಉಚ್ಚಿಲ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ‘ಛದ್ಮವೇಷ ಸ್ಪರ್ಧೆ’ ನಡೆಯಲಿದೆ. 1 ರಿ೦ದ 5 ವರ್ಷದ ವಿಭಾಗ ಮತ್ತು 6 ರಿಂದ 10 ವರ್ಷದ ಹೀಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ನಗದು ಸಹಿತ ಪ್ರಶಸ್ತಿ ನೀಡಲಾಗುವುದು. ಸ್ಪರ್ಧಿಗಳು ಮೇಕಪ್, ವೇಷಭೂಷಣದೊಂದಿಗೆ ತಯಾರಾಗಿ ಬರಬೇಕು. ಯಾವುದೇ ರೀತಿಯ ಸಂಭಾಷಣೆಗೆ ಅವಕಾಶವಿಲ್ಲ. ಧ್ವನಿಮುದ್ರಿತ ಹಿನ್ನಲೆ ಸಂಗೀತಕ್ಕೆ ಅವಕಾಶವಿದೆ. ಪ್ರತೀ ಸ್ಪರ್ಧಿಗೆ 4 ನಿಮಿಷಗಳ ಕಾಲಾವಕಾಶ. ವಯಸ್ಸಿನ ದೃಢೀಕರಣಕ್ಕಾಗಿ ಶಾಲಾ ಗುರುತಿನ ಚೀಟಿ ಕಡ್ಡಾಯ. ಸ್ಪರ್ಧೆಗೆ 30 ನಿಮಿಷ ಮೊದಲು ಹಾಜರಿರಬೇಕು.
ದಿನಾಂಕ 21-10-2023ರಂದು ಅಪರಾಹ್ನ 2 ಗಂಟೆಯಿಂದ ಉಚ್ಚಿಲದ ಮೊಗವೀರ ಭವನದಲ್ಲಿ ‘ರಂಗೋಲಿ ಸ್ಪರ್ಧೆ’ ನಡೆಯಲಿದೆ. ಮಹಿಳೆಯರಿಗೆ ಸಾಂಪ್ರದಾಯಿಕ ಮತ್ತು ಪುರುಷರಿಗೆ ಐಚ್ಛಿಕ ಹೀಗೆ ಎರಡು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದ್ದು, ನಗದು ಸಹಿತ ಪ್ರಶಸ್ತಿ ನೀಡಲಾಗುವುದು. ಸಾಂಪ್ರದಾಯಿಕ ವಿಭಾಗದಲ್ಲಿ ರ೦ಗೋಲಿ ಹುಡಿಯನ್ನು ಮಾತ್ರ ಬಳಸಬೇಕು. ಐಚ್ಛಿಕ ವಿಭಾಗದಲ್ಲಿ ಬೇಕಾದ ಪರಿಕರಗಳನ್ನು ಬಳಸಬಹುದು. ರಂಗೋಲಿ ಹುಡಿ ಹಾಗೂ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಪ್ರತೀ ಸ್ಪರ್ಧಾಳುವಿಗೆ 3×3 ಅಡಿ ಅಳತೆಯ ಸ್ಥಳಾವಕಾಶವಿದೆ. ಅಳತೆ ಮೀರಿದ ರಂಗೋಲಿಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. 2 ಗಂಟೆ ಕಾಲಾವಕಾಶ ಕಲ್ಪಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9663160938, 7022981615