ಮಂಗಳೂರು : ಮಾಂಡ್ ಸೊಭಾಣ್ ಇದರ ಗಾಯನ ತಂಡ ಸುಮೇಳ್ ವತಿಯಿಂದ ದಿನಾಂಕ 01-10-2023ರಂದು ಶಕ್ತಿನಗರದ ಕಲಾಂಗಣದಲ್ಲಿ ‘ಅಂತರ್ ರಾಷ್ಟ್ರೀಯ ಸಂಗೀತ ದಿನಾಚರಣೆ’ಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕ ಸೈಮನ್ ಪಾಯ್ಸ್ ಬಜಾಲ್ ಇವರನ್ನು ಸನ್ಮಾನಿಸಲಾಯಿತು. ಸುನಿಲ್ ಮೊಂತೇರೊ ಸನ್ಮಾನ ಪತ್ರ ವಾಚಿಸಿದರು. ಪದಾಧಿಕಾರಿಗಳಾದ ಲುವಿಸ್ ಜೆ. ಪಿಂಟೊ, ನವೀನ್ ಲೋಬೊ, ಎಲ್ರೊನ್ ರೊಡ್ರಿಗಸ್ ಮತ್ತು ಸುಮೇಳ್ ಸಮನ್ವಯಿ ರೈನಾ ಸಿಕ್ವೇರಾ ಉಪಸ್ಥಿತರಿದ್ದು ಸನ್ಮಾನ ನೆರವೇರಿಸಿದರು.
ಸನ್ಮಾನಿತ ಸೈಮನ್ ಪಾಯ್ಸ್ ಬಜಾಲ್ ಇವರು ಗಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ 262ನೇ ತಿಂಗಳ ವೇದಿಕೆಯಲ್ಲಿ ‘ವಿಜೆ ವಿಣೆ ವಿಯೊಲ್ ವಿಣೆ’ (unplugged) ಸಂಗೀತ ಸಂಜೆ ಪ್ರದರ್ಶನಗೊಂಡಿತು. ಕೊಂಕಣಿ, ಹಿಂದಿ, ಕನ್ನಡ, ಬಂಗಾಲಿ, ಇಂಗ್ಲೀಷ್, ಸ್ಪಾನಿಶ್ ಮತ್ತು ಶ್ರೀಲಂಕನ್ ಭಾಷೆಯ 12 ಹಾಡುಗಳು ಹಾಗೂ ಒಂದು ವಾದ್ಯ ಸಂಗೀತವನ್ನು ಸಾದರ ಪಡಿಸಿದರು.
ಐರಿನ್ ರೆಬೆಲ್ಲೊ, ರೈನಾ ಸಿಕ್ವೇರಾ, ಜಾಸ್ಮಿನ್ ಲೋಬೊ, ಪ್ರೀತಿ ಲೋಪಿಸ್, ಕವಿತಾ ಜೊರ್ಜ್, ಸೋನಲ್ ಮೊಂತೇರೊ, ಸಿಮೊನ್ ಮೊಂತೇರೊ, ಡಿಯಲ್ ಡಿಸೋಜ, ಪ್ರಿಥುಮಾ ಮೊಂತೇರೊ, ಫ್ಲಾವಿಯಾ ಮಸ್ಕರೇನ್ಹಸ್, ಮೆಲ್ವಿಟಾ ಡಿಸೋಜ, ವೆಲನಿ ಗೋವಿಯಸ್, ವರ್ಲಿನ್ ಗೋವಿಯಸ್, ಕ್ಲಿಯೊನ್ ಡಿಸಿಲ್ವಾ, ಎಲ್ರೊನ್ ರೊಡ್ರಿಗಸ್, ಹೇಡನ್ ಸಿಕ್ವೇರಾ, ಒಲಿನ್ ಥಿಯೊಡೊರ್, ನಿಶಾನ್ ತಾವ್ರೊ, ರೂಬನ್ ಮೆಂಡೊನ್ಸಾ, ಫೆವಿನ್ ಡಿಸೋಜ, ಬ್ರಾಯನ್ ಸಿಕ್ವೇರಾ, ನೀಲ್ ಡಿಸೋಜ ಮತ್ತು ಕೇತನ್ ಕ್ಯಾಸ್ತೆಲಿನೊ ಹಾಡಿ ಮನ ರಂಜಿಸಿದರು.
ರಸಲ್ ರೊಡ್ರಿಗಸ್ (ಗಿಟಾರ್), ಶಾನ್ ಪಿಂಟೊ (ಡ್ರಮ್ಸ್/ಕಹುನ್) ರೂಬನ್ ಮಚಾದೊ (ಕೊಳಲು), ಆನ್ಸ್ಟನ್ ರೊಡ್ರಿಗಸ್ (ವಯೊಲಿನ್), ಮಿಲ್ಟನ್ ಬ್ರಾಗ್ಸ್ (ಬೇಝ್), ಮೆಕ್ವಿಲ್ ಕ್ರಾಸ್ತಾ (ಪಿಯಾನೊ/ಗಿಟಾರ್) ಮತ್ತು ಕೇತನ್ ಕ್ಯಾಸ್ತೆಲಿನೊ (ಪಿಯಾನೊ) ಇವರು ಸಂಗೀತದಲ್ಲಿ ಸಹಕರಿಸಿದರು. ಶ್ರೀಲಂಕನ್ ಬಾಯ್ಲಾ ನೃತ್ಯದೊಡನೆ ಸಂಗೀತ ಸಂಜೆ ಸಮಾಪನಗೊಂಡಿತು. ಐರಿನ್ ರೆಬೆಲ್ಲೊ ಮತ್ತು ರೈನಾ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.