ಮೈಸೂರು : ರಂಗಸೌರಭ ಪ್ರಸ್ತುತಪಡಿಸುವ ವರಕವಿ ಡಾ. ದ.ರಾ. ಬೇಂದ್ರೆಯವರ ಬದುಕು ಮತ್ತು ಬರಹಗಳ ಆಧಾರಿತ ನಾಟಕ ‘ಗಂಗಾವತರಣ’ ದಿನಾಂಕ 08-10-2023 ರಂದು ಮೈಸೂರಿನ ನಟನ ರಂಗಶಾಲೆಯಲ್ಲಿ ನಡೆಯಲಿದೆ.
ಎಲೆಕ್ಟ್ರಾನಿಕ್ ಮಾಧ್ಯಮ, ಆಧುನಿಕ ಸಿನಿಮಾ, ಧಾರವಾಹಿಗಳು ‘ಗಂಗಾವತರಣ’ ಕಥೆಯಲ್ಲಿ ಘಟಿಸುತ್ತವೆ. ಒಂದು ಅರ್ಥದಲ್ಲಿ ಕಥಾನಾಯಕ ಅವಮಾನ ಅನುಭವಿಸುತ್ತಾ ಹೊಸ ಪ್ರಲೋಭನೆಗಳಿಗೆ ಒಳಗಾಗದೆ ನರಳುವುದು, ಕೊನೆಗೆ ಬೇಂದ್ರೆ ಹೇಳುವ ಸರಳ ಆತ್ಮಬಲದ ಜೀವನ ಸಂದೇಶವನ್ನು ತನ್ನದಾಗಿಸಿಕೊಳ್ಳುವುದು ಕಥೆಯ ಚೌಕಟ್ಟು. ಈ ಕಥಾನಕಕ್ಕೆ ಬೇಂದ್ರೆಯವರ 16 ಸುಪ್ರಸಿದ್ಧ ಕವಿತೆಗಳನ್ನು ಬಳಸಿಕೊಳ್ಳಲಾಗಿದೆ. ಕುಣಿಯೋಣ ಬಾರ, ನಾನು ಬಡವಿ, ಇಳಿದು ಬಾ, ನಾಕುತಂತಿ, ಪಾತರಗಿತ್ತಿ, ಚೈತನ್ಯ ಯಾತ್ರೆ, ಇತ್ಯಾದಿ. ಗಂಗಾವತರಣ ಕವಿತೆಯನ್ನು ಸಾಂದರ್ಭಿಕವಾಗಿ ಬಳಸಿಕೊಂಡು ನಾಡಿನಲ್ಲಿರುವ ಹಲವು ಕೊಳೆಯನ್ನು ತೊಳೆಯಲು ನೂರಾರು ಭಗೀರಥರು ಮತ್ತು ಗಂಗೆಯರು ಬರಬೇಕೆಂದು ಸಾಮಾಜಿಕ ಸಂದೇಶವಾಗುತ್ತದೆ.
ಈ ನಾಟಕದ ರಚನೆ, ವಿನ್ಯಾಸ ಮತ್ತು ನಿರ್ದೇಶನ ರಾಜೇಂದ್ರ ಕಾರಂತ ಅವರದ್ದು, ಪ್ರದರ್ಶನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 95353 22169 ಮತ್ತು 9742119911 ಸಂಖ್ಯೆಗಳನ್ನು ಸಂಪರ್ಕಿಸಬಹುದು.
1 Comment
Good one