ಗೋಣಿಕೊಪ್ಪಲು: ಶ್ರೀ ಕಾವೇರಿ ದಸರಾ ಸಮಿತಿಯ 45ನೇ ವರ್ಷದ ದಸರಾ ಜನೋತ್ಸವದ ಅಂಗವಾಗಿ ಅ.22ರಂದು ಭಾನುವಾರ ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ರಾಜ್ಯಮಟ್ಟದ ದಸರಾ ಬಹುಭಾಷಾ ಕವಿ ಗೋಷ್ಠಿಯನ್ನು ಕಾವೇರಿ ಕಲಾ ವೇದಿಕೆಯಲ್ಲಿ ನಡೆಸಲಾಗುತ್ತದೆ. ಆ ಪ್ರಯುಕ್ತ ಕವನಗಳನ್ನು ಆಹ್ವಾನಿಸಲಾಗಿದೆ.
ಯಾವುದೇ ವಯೋಮಾನದವರು ಯಾವುದೇ ವಸ್ತು – ವಿಷಯದ ಕುರಿತು ರಚಿಸಿದ ಸ್ವರಚಿತ ಕವನಗಳು, ಗಜಲ್, ಚುಟುಕುಗಳು, ಕನ್ನಡ, ಅರೆಭಾಷೆ, ಕೊಡವ, ಎರವ, ತುಳು, ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ ಮಾತ್ರವಲ್ಲದೆ ಇನ್ನಿತರ ಯಾವುದೇ ಭಾಷೆಗಳಲ್ಲಿ ರಚಿಸಿದ ಮತ್ತು ಇದುವರೆಗೆ ಎಲ್ಲಿಯೂ ಪ್ರಕಟವಾಗದ ಬರಹಗಳನ್ನು ಕಳುಹಿಸಿಕೊಡಬಹುದಾಗಿದೆ.
ಆಯ್ಕೆಯಾದ ಕವಿತೆಗಳನ್ನು ಬರೆದ ಕವಿಗಳಿಗೆ ಅ. 22ರಂದು ನಡೆಯುವ ಕವಿಗೋಷ್ಠಿಯಲ್ಲಿ ಆ ಕವಿತೆಗಳನ್ನು ವಾಚಿಸಲು ಅವಕಾಶವಿದೆ. ಕವಿತೆಗಳನ್ನು ಅ.14ರ ಒಳಗೆ ತಲುಪುವಂತೆ ಕೆಳಗೆ ತಿಳಿಸಿದ ವಿಳಾಸಕ್ಕೆಕಳುಹಿಸಬೇಕಾಗಿದೆ.
ಜಗದೀಶ್ ಜೋಡುಬೀಟಿ, ಸಂಚಾಲಕರು, ದಸರಾ ಕವಿಗೋಷ್ಠಿ ಸಮಿತಿ, ಶ್ರೀ ಉಮಾಮಹೇಶ್ವರಿ ಬಡಾವಣೆ, ಒಂದನೇ ವಿಭಾಗ, ಮೂರನೇ ಕ್ರಾಸ್ -571213.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ : 9980000845.
Subscribe to Updates
Get the latest creative news from FooBar about art, design and business.
ಗೋಣಿಕೊಪ್ಪಲಿನಲ್ಲಿ ರಾಜ್ಯಮಟ್ಟದ ಬಹುಭಾಷಾ ದಸರಾ ಕವಿಗೋಷ್ಠಿ l ಅಕ್ಟೋಬರ್ 22ರಂದು
No Comments1 Min Read